ಶಿವಮೊಗ್ಗ: ಈಗಾಗಲೇ ಚುನಾವಣೆ ಅಬ್ಬರ ಜೋರು ನಡೆಯುತ್ತದೆ. ಈ ಹಿನ್ನಲೆ ಪ್ರಧಾನ ಮಂತ್ರಿ ಎಲ್ಲೆಡೆ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಬೆಂಗಳೂರು ಪ್ರಚಾರ ಮುಗಿಯುತ್ತಿದ್ದತಂತೆ ಶಿವಮೊಗ್ಗದ ಆಯನೂರಿಗೆ ಪ್ರಧಾನಮಂತ್ರಿ ಆಗಮಿಸಲಿದ್ದಾರೆ. ಈಗಾಗಲೇ ಮೋದಿಗಾಗಿ ಆಯನೂರು ನಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.  ಆಯನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪಕ್ಕದ ಸುಮಾರು 100 ಎಕರೆ ಜಾಗದಲ್ಲಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.  


COMMERCIAL BREAK
SCROLL TO CONTINUE READING

ಕಾರ್ಯಕ್ರಮದ ವಿವರ ಹೀಗಿದೆ....


ಎಷ್ಟೊತ್ತಿಗೆ  ಪ್ರಧಾನಿ ನರೇಂದ್ರ ಮೋದಿ ಆಯನೂರು ತಲುಪಲಿದ್ದಾರೆ. 


ಮೇ 7ರ ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ನೇರವಾಗಿ ಹೆಲಿಕಾಪ್ಟರ್‌ನಲ್ಲಿ ಆಯನೂರಿಗೆ ಆಗಮಿಸುತ್ತಿದ್ದಾರೆ. ವೇದಿಕೆಯ  ಪಕ್ಕದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಬೆಳಗ್ಗೆ 11.30ರಿಂದ ಮಧ್ಯಾಹ್ನ 2.30 ರವರೆಗೆ ಕಾರ್ಯಕ್ರಮ ನಡೆಯಲಿದೆ. 


ಇದನ್ನೂ ಓದಿ: ʼಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲ್ಲ, ಜೆಡಿಎಸ್‌ 20 ದಾಟಲ್ಲʼ


3 ಲಕ್ಷ ಜನ ಸೇರುವೆ ನಿರೀಕ್ಷೆ
ಇನ್ನೂ ಶಿವಮೊಗ್ಗದ ಏಳು ಕ್ಷೇತ್ರ ಹಾಗೂ ದಾವಣಗೆರೆಯ 2 ಮತ್ತು ಚಿಕ್ಕಮಗಳೂರಿನ ಒಂದು ಕ್ಷೇತ್ರದ ಅಭ್ಯರ್ಥಿಯ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ನಡೆಸಲಿದ್ದಾರೆ.  ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಕಾರ್ಯಕ್ರಮದ ಸಿದ್ದತೆಯಲ್ಲಿ ತೊಡಗಿದ್ದು, ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್​ನಲ್ಲಿ ತಲ್ಲೀನವಾಗಿದೆ. 


 ಊಟದ ವ್ಯವಸ್ಥೆಯಿಲ್ಲ
ಇನ್ನೂ ನೀತಿಸಂಹಿತೆ ಹಿನ್ನೆಲೆಯಲ್ಲಿ ಮೋದಿ ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆಯನ್ನು ಕೈಗೊಳ್ಳಲಾಗಿಲ್ಲ. ಕುಡಿಯಲು ನೀರು ಹಾಗೂ ಮಜ್ಜಿಗೆಯ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ್ದು, ಜನರನ್ನ ಕರೆತರಲು ವಾಹನಗಳ ವ್ಯವಸ್ಥೆಯನ್ನು ಸಹ ಮಾಡಿಲ್ಲ ಎನ್ನುತ್ತಿದ್ದಾರೆ ಮುಖಂಡರು. 


ಇದನ್ನೂ ಓದಿ: ಮೇಣದ ಬತ್ತಿ ಜಾಥ ಕಾರ್ಯಕ್ರಮದ ಮೂಲಕ ಮತದಾನ ಜಾಗೃತಿ


ಸಿಂಗಾರಗೊಂಡ ಆಯನೂರು
ಆಯನೂರಿನಿಂದ ಶಿವಮೊಗ್ಗ ಕಡೆ ಬರುವ 2 ಕಿಮೀ. ಹಾಗೂ ಆಯನೂರಿನಿಂದ ಕುಂಸಿಗೆ ಹೋಗುವ 1 ಕಿಮೀ. ರಸ್ತೆ ಉದ್ದಕ್ಕೂ  ಮೋದಿ ಕಾರ್ಯಕ್ರಮಕ್ಕಾಗಿ ಬ್ಯಾನರ್ ಬಂಟಿಂಗ್ಸ್ ಪ್ಲೆಕ್ಸ್​ಗಳನ್ನು ಹಾಕಲಾಗುತ್ತಿದೆ.  ಕೇಸರಿ ಬಣ್ಣಗಳ ತಳಿರು ತೋರಣಗಳಲ್ಲಿ ಸಿಂಗಾರಗೊಳ್ಳುತ್ತಿರುವ ಆಯನೂರಿನಲ್ಲಿ  ಪ್ರಧಾನಿ ನರೇಂದ್ರ ಮೋದಿ ಈ ಚುನಾವಣೆಯ ಕೊನೆಯ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.