Karnatraka Assembly Election 2023 : ನಾಗಮಂಗಲದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು ಈ ಬಾರಿ ಕಾಂಗ್ರೇಸ್ ಅಧಿಕಾರವನ್ನು ತೆಗೆದುಕೊಂಡರೆ ಅದು ಜನಸಾಮಾನ್ಯರಿಗೆ ಸಹಾಯವಾಗಬೇಕು ಎಂದು ಮನದಟ್ಟು ಮಾಡಿಕೊಂಡೇ ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯ ಒಡತಿಗೆ ಮಾಸಿಕವಾಗಿ 2 ಸಾವಿರ ಪ್ರೋತ್ಸಾಹ ಧನ ನೀಡುತ್ತೇವೆ. ಮತ್ತು ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು 200 ಯೂನಿಟ್ ಉಚಿತವಾಗಿ ನೀಡಲಾಗುವುದು.
ಬಡ ಕುಟುಂಬದವರಿಗೆ ನೆರವಾಗಲೆಂದು ಅನ್ನಭಾಗ್ಯ ಮೂಲಕ ಮನೆಯ ಪ್ರತಿಯೊಬ್ಬ ಸದಸ್ಯನಿಗೂ ಉಚಿತವಾಗಿ 10 ಕೆಜಿ ಅಕ್ಕಿಯನ್ನು ನೀಡಲಾಗುವುದು. ಇನ್ನು ಯುವಕರಿಗಾಗಿ ಯುವನಿಧಿ. ನಿರುದ್ಯೋಗ ಪದವೀಧರರಿಗೆ ಪ್ರತಿ ತಿಂಗಳು 2 ವರ್ಷದವರೆಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1500 ರೂ ನಿರುದ್ಯೋಗ ಭತ್ಯಯಾಗಿ ನೀಡುತ್ತೇವೆ.
ಇದನ್ನೂ ಓದಿ-ಚುನಾವಣಾ ಕರ್ತವ್ಯಲೋಪ ; ಆರೋಗ್ಯ ನಿರೀಕ್ಷಣಾಧಿಕಾರಿ ಅಮಾನತ್ತು ಮಾಡಿ ಜಿಲ್ಲಾಧಿಕಾರಿ ಆದೇಶ
ಇದಲ್ಲದೇ ರಾಜ್ಯದ ಮಹಿಳೆಯರಿಗೆ ಸಾರ್ವಜನಿಕ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು. ಈ ಯೋಜನೆಗಳನ್ನು ಕುಮಾರಸ್ವಾಮಿ, ಸುರೇಶ ಗೌಡ, ಬೊಮ್ಮಾಯಿ, ಅವರು ನಿಮಗೆ ನೀಡಲು ಸಾಧ್ಯವೇ? ನಿಮ್ಮನ್ನು ಹುಡುಕಿಕೊಂಡು ಲಕ್ಷ್ಮಿ ನಿಮ್ಮ ಮನೆಬಾಗಿಲಿಗೆ ಬಂದಿದ್ದಾಳೆ, ಒಳಗೆ ಕರೆದುಕೊಳ್ಳಿ. ಕೇವಲ ಮಾತು ಕೊಡುವುದಲ್ಲ, ಅದನ್ನು ಉಳಿಸಿಕೊಳ್ಳಬೇಕು.
ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಈ ಎಲ್ಲ ಯೋಜನೆಗಳು ಜಾರಿಯಾಗಲಿವೆ. ಇಂದು ನಾನು ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಕೂತು ಚರ್ಚೆ ಮಾಡಿ 13ರಂದು ಕಾಂಗ್ರೆಸ್ ಗೆಲ್ಲಲಿದೆ, 15 ರಂದು ಸರ್ಕಾರ ರಚನೆ ಮಾಡಿ ಮೊದಲ ಸಂಚಿವ ಸಂಪುಟದಲ್ಲಿಯೇ ಈ ಯೋಜನೆಗಳನ್ನು ಜಾರಿ ಮಾಡಲು ನಿರ್ಧರಿಸಿದ್ದೇವೆ.
ಇದನ್ನೂ ಓದಿ-Crime News: ಎಲೆಕ್ಷನ್ ಪ್ರಚಾರದ ಮಧ್ಯೆ ಫೈರಿಂಗ್ : ಹತ್ಯೆಗೈದು ಅಟ್ಟಹಾಸ ಮೆರೆದ ದುಷ್ಕರ್ಮಿಗಳು!
ವಿಧಾನಸೌದದಲ್ಲಿ ಕೂತು ರಾಜ್ಯದ ಜನರ ಸೇವೆ ಮಾಡಲು ಅವಕಾಶ ಸಿಗಬೇಕು.. ಪ್ರಣಾಳಿಕೆ ಮಾಡುವಾಗ ಚೆಲುವರಾಯಸ್ವಾಮಿ ಅವರು ಮೈಶುಗರ್ ಕಾರ್ಖಾನೆ ರಕ್ಷಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ,, ನೀವೇ ಇದಕ್ಕೆ ಪರಿಹಾರ ನೀಡಬೇಕು ಅದಕ್ಕಾಗಿ ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡುತ್ತೇವೆ ಎಂಬ ಭರವಸೆ ಕೊಟ್ಟಿದ್ದೇವೆ ಮತ್ತು ರೈತರ ಬೆಳೆಗೆ ಉತ್ತಮ ಬೆಂಬಲ ಬೆಲೆ ನೀಡುತ್ತೇವೆ ಎಂದು ಭರವಸೆಮಾತುಗಳನ್ನಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.