ಬೆಂಗಳೂರು: ಹುಲಿ ಯೋಜನೆಗೆ 50 ವರ್ಷ ಪೂರೈಸಿದ ಹಿನ್ನೆಲೆ ಪ್ರಧಾನಿ ಮೋದಿಯವರು ಭಾನುವಾರ(ಏ.9) ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಒಂದೂವರೆ ಗಂಟೆ ಸಫಾರಿ ನಡೆಸಿದರು. ಸುಮಾರು 20 ಕಿ.ಮೀ ಕಾಡಿನಲ್ಲಿ ಸಂಚಾರ ನಡೆಸಿದರೂ ಪ್ರಧಾನಿ ಮೋದಿಯವರಿಗೆ ಒಂದು ಹುಲಿಯೂ ಕಣ್ಣಿಗೆ ಬಿದ್ದಿಲ್ಲ.


COMMERCIAL BREAK
SCROLL TO CONTINUE READING

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಧಾನಿ ಮೋದಿ ಬಂಡೀಪುರ ಭೇಟಿ ಬಗ್ಗೆ ವ್ಯಂಗ್ಯವಾಡದ್ದಾರೆ. ’ಬಂಡೀಪುರದ ಕಾಡಿನಲ್ಲಿ 20 ಕಿಮೀ ಸಂಚರಿಸಿದರು ಸಹ ಪ್ರಧಾನಿ ಮೋದಿಯವರಿಗೆ ಹುಲಿಯ ದರ್ಶನವಾಗಿಲ್ಲ. ಹಿಡಿದು ಮಾರಿಬಿಡುತ್ತಾರೆ ಅನ್ನುವ ಭಯಕ್ಕೆ ಯಾವ ಗುಹೆಯೊಳಗೆ ಅಡಗಿ ಕೂತಿದೆಯೋ..ಅಯ್ಯೋ ಪಾಪ....!!’ ಅಂತಾ ಕುಟುಕಿದ್ದಾರೆ.


ಅಮೂಲ್ ಜೊತೆ ನಂದಿನಿ ವಿಲೀನ; ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದೇನು?


‘ಇನ್ನು ಕೆಲವೇ ದಿನಗಳಲ್ಲಿ #SaveBandipur (ಬಂಡಿಪುರ ಉಳಿಸಿ ) ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ.. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ಪ್ರಧಾನಿ ಮೋದಿಜೀಯವರೆ’ ಅಂತಾ ಸಿದ್ದರಾಮಯ್ಯ ಟೀಕಿಸಿದ್ದಾರೆ.


‘ನಮೋ’ ಬಂಡೀಪುರ ಸಫಾರಿ!


ಖಾಕಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಹ್ಯಾಟ್, ಗಾಗಲ್ಸ್, ಟೀ ಶರ್ಟ್ ಹಾಗೂ ಅರಣ್ಯ ಇಲಾಖೆ ಜಾಕೆಟ್ ಧರಿಸಿದ ಪ್ರಧಾನಿ ಮೋದಿಯವರು ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯದಲ್ಲಿ ಸಫಾರಿ ಮಾಡಿದರು.  ಓಪನ್ ಜೀಪ್‍ನಲ್ಲಿ ​​ಸಫಾರಿ ನಡೆಸಿದ ಪ್ರಧಾನಿ ಮೋದಿ ದುರ್ಬಿನ್ ಹಿಡಿದು ಪ್ರಾಣಿಗಳನ್ನು ವೀಕ್ಷಿಸಿದರು.


ಇದನ್ನೂ ಓದಿ: "ದೇವೇಗೌಡರ ಸಾವನ್ನು ಬಯಸಿದವರಿಗೆ ಪಾಠ ಕಲಿಸಬೇಕು"


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.