ಚಾಮರಾಜನಗರದ ಊರೂರಿಗೆ ಸೋಮಣ್ಣ ಭೇಟಿ: ಮುಂದಿನ ಸಿಎಂ ಎಂದು ಅಭಿಮಾನಿಗಳ ಜೈಕಾರ
Karnataka assembly Election: ಬೆಳಗ್ಗೆ 8 ರಿಂದಲೇ ಊರೂರು ಭೇಟಿ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ ಒಂದೇ ದಿನ 20 ಊರುಗಳಿಗೆ ಭೇಟಿಕೊಟ್ಟು ಮತಯಾಚಿಸುವ ಪ್ರವಾಸ ಪಟ್ಟಿ ತಯಾರಿಸಿಕೊಂಡಿದ್ದಾರೆ.
Karnataka assembly Election 2023: ವರುಣಾ ಬಳಿಕ ಚಾಮರಾಜನಗರದಲ್ಲಿ ಎರಡನೇ ಸುತ್ತಿನ ಮತಬೇಟೆ ಆರಂಭಿಸಿರುವ ಸಚಿವ ವಿ. ಸೋಮಣ್ಣ ಚಾಮರಾಜನಗರ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ಕೊಡುತ್ತಿದ್ದಾರೆ.
ಬೆಳಗ್ಗೆ 8 ರಿಂದಲೇ ಊರೂರು ಭೇಟಿ ಮಾಡುತ್ತಿರುವ ವರುಣಾ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ಒಂದೇ ದಿನ 20 ಊರುಗಳಿಗೆ ಭೇಟಿಕೊಟ್ಟು ಮತಯಾಚಿಸುವ ಪ್ರವಾಸ ಪಟ್ಟಿ ತಯಾರಿಸಿಕೊಂಡಿದ್ದಾರೆ.
ಇದನ್ನೂ ಓದಿ- Karnataka Election : 200 ಕೋಟಿಗೂ ಮೀರಿದ ಚುನಾವಣಾ ಅಕ್ರಮ ವಸ್ತುಗಳ ವಶ
ಇನ್ನು, ಮಲ್ಲಯ್ಯನಪುರ ಗ್ರಾಮಕ್ಕೆ ಭೇಟಿ ಕೊಟ್ಟ ವೇಳೆ ಜನರನ್ನು ಗುಂಪು ಸೇರಿಸಿಕೊಂಡು ಮಾತನಾಡಿ, ಹಣ-ಹೆಂಡಕ್ಕೆ ಮತ ಮಾರಾಟ ಮಾಡಿಕೊಳ್ಳಬೇಡಿ, ಅಭಿವೃದ್ಧಿ ನೋಡಿ ಮತ ಹಾಕಿ, ಸೋಮಣ್ಣನೇ ಬೇರೆ- ನನ್ನ ಸ್ಟೈಲೆ ಬೇರೆ ಎಂದು ಸಿನಿ ಡೈಲಾಗ್ ಹೊಡೆದು ಮತ ಶಿಕಾರಿ ನಡೆಸಿದರು.
ಇದನ್ನೂ ಓದಿ- ಬಿಜೆಪಿ ಮುಖಂಡ ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ: ಸೋಮಣ್ಣಗೆ ಒಳೇಟು!?
ಇನ್ನು, ಉತ್ತುವಳ್ಳಿ ಗ್ರಾಮಕ್ಕೆ ಸಚಿವ ಸೋಮಣ್ಣ ಎಂಟ್ರಿಯಾಗುತ್ತಿದ್ದಂತೆ ಬೃಹತ್ ಹಾರ, ಪುಷ್ಪ ವೃಷ್ಠಿ ಸುರಿಸಿದ ಜನರು ಹುಲಿಗೆ ಜೈ, ಮುಂದಿನ ಮುಖ್ಯಮಂತ್ರಿಗೆ, ಮುಂದಿನ ಸಿಎಂಗೆ ಜೈ ಎಂದೆಲ್ಲಾ ಘೋಷಣೆ ಕೂಗಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.