Yadgir District Assembly Election Result 2023: ಯಾದಗಿರಿ ರಾಜ್ಯದ 30ನೇ ಜಿಲ್ಲೆಯಾಗಿ 2010ರಲ್ಲಿ ರಚನೆಯಾಯಿತು. ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಯಾದಗಿರಿ ಅಸ್ವಿತ್ವಕ್ಕೆ ಬಂದಿತು. ಮಲ್ಲಿಕಾರ್ಜುನ್ ಖರ್ಗೆ, ಬಾಬುರಾವ ಚಿಂಚನಸೂರು, ಡಾ.ಎ.ಬಿ.ಮಾಲಕರೆಡ್ಡಿ, ಶರಣಬಸಪ್ಪ ದರ್ಶನಾಪುರ, ರಾಜುಗೌಡ ಸೇರಿ ವಿವಿಧ ರಾಜಕಾರಣಿಗಳ ಕರ್ಮಭೂಮಿಯಾಗಿದೆ. ಈ ಜಿಲ್ಲೆಯಲ್ಲಿ 6 ತಾಲೂಕುಗಳಿದ್ದು, ಶಹಾಪುರ, ಸುರಪುರ, ಯಾದಗಿರಿ ಮತ್ತು ಗುರುಮಠಕಲ್ 4 ವಿಧಾನಸಭಾ ಕ್ಷೇತ್ರಗಳಿವೆ.


COMMERCIAL BREAK
SCROLL TO CONTINUE READING

ಯಾದಗಿರಿ ವಿಧಾನಸಭಾ ಕ್ಷೇತ್ರ:


Yadgir Vidhan Aabha Chunav Result 2023: ರಾಜ್ಯದ 30ನೇ ಜಿಲ್ಲೆ ಯಾದಗಿರಿ ಚಿಕ್ಕಜಿಲ್ಲೆಯಾದ್ರೂ ಘಟಾನುಘಟಿ ನಾಯಕರಿಗೆ ರಾಜಕೀಯ ಜನ್ಮ ನೀಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಪ್ತ ಖಾತೆಯ ಮಾಚಿ ಸಚಿವ ಬಾಬುರಾವ್ ಚಿಂಚನಸೂರ, ಮಾಜಿ ಸಚಿವರಾದ ಎ.ಬಿ.ಮಲಕರಡ್ಡಿ, ಶರಣಬಸಪ್ಪ ದರ್ಶಾನಪೂರ, ರಾಜುಗೌಡ ಹೀಗೆ ಅನೇಕ ನಾಯಕರನ್ನು ಯಾದಗಿರಿ ರಾಜ್ಯಕ್ಕೆ ಕೊಟ್ಟಿದೆ. 2010ರಲ್ಲಿ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪನವರು ಅಖಂಡ ಕಲಬುರಗಿ ಜಿಲ್ಲೆಯಿಂದ ವಿಭಜಿತಗೊಳಿಸಿ ಯಾದಗಿರಿ ಜಿಲ್ಲೆಯನ್ನು ಘೋಷಿಸಿದರು. ಬಳಿಕ ಈ ಜಿಲ್ಲೆ 2 ಚುನಾವಣೆಯನ್ನು ಕಂಡಿದೆ.


2018ರ ಫಲಿತಾಂಶ:


2018ರ ಚುನಾವಣೆಯಲ್ಲಿ ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ್ 62,227 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‍ನ ಡಾ.ಎ.ಬಿ.ಮಾಲಕರೆಡ್ಡಿಯವರು 49,346 ಮತಗಳನ್ನು ಪಡೆದು ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 12,881 ಮತಗಳು.  


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:


ವೆಂಕಟರೆಡ್ಡಿಗೌಡ ಮುದ್ನಾಳ - ಬಿಜೆಪಿ


ಚನ್ನಾರೆಡ್ಡಿ ಪಾಟೀಲ್ ತುನ್ನೂರ - ಕಾಂಗ್ರೆಸ್


ಡಾ.ಎ.ಬಿ.ಮಾಲಕರಡ್ಡಿ – ಜೆಡಿಎಸ್


ಹಣಮೇಗೌಡ ಬೀರನಕಲ್ - ಪಕ್ಷೇತರ


ಗುರುಮಠಕಲ್ ವಿಧಾನಸಭಾ ಕ್ಷೇತ್ರ:


Gurumitkal Vidhan Aabha Chunav Result 2023: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ರಾಜಕೀಯ ಜೀವನ ಆರಂಭಿಸಿದ ಕ್ಷೇತ್ರ ಕಲಬುರಗಿ ಲೋಕಸಭಾ ವ್ಯಾಪ್ತಿಯ ಗುರುಮಠಕಲ್ ಕ್ಷೇತ್ರ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕೈಸೇರಿತ್ತು.


2018ರ ಫಲಿತಾಂಶ:


2018ರ ಚುನಾವಣೆಯಲ್ಲಿ ಗುರಮಿಠಕಲ್ ಮತಕ್ಷೇತ್ರವನ್ನು ಜೆಡಿಎಸ್‍ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಜೆಡಿಎಸ್‍ನ ನಾಗನಗೌಡ ಕಂದಕೂರ 79,627 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‍ನ ಬಾಬುರಾವ್ ಚಿಂಚನಸೂರ 54,147 ಮತಗಳನ್ನು ಪಡೆದು ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 24,480 ಮತಗಳಾಗಿದ್ದವು.


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:  


ಲಲಿತಾ ಅನಪೂರ - ಬಿಜೆಪಿ


ಬಾಬುರಾವ್ ಚಿಂಚನಸೂರ - ಕಾಂಗ್ರೆಸ್


ಶರಣಗೌಡ ಕಂದಕೂರ - ಜೆಡಿಎಸ್


ಇದನ್ನೂ ಓದಿ: ಅಲರ್ಟ್ ಆದ ಕಾಂಗ್ರೆಸ್ : ಗೆದ್ದವರನ್ನು ಬೆಂಗಳೂರಿಗೆ ಕರೆ ತರಲು ಜಿಲ್ಲಾಧ್ಯಕ್ಷರಿಗೆ ಸೂಚನೆ


ಶಹಾಪುರ ವಿಧಾನಸಭಾ ಕ್ಷೇತ್ರ:


Shahapur Vidhan Aabha Chunav Result 2023: ಶಹಾಪುರ ಕ್ಷೇತ್ರದಲ್ಲಿ ಕಳೆದ  2-3 ದಶಕಗಳಿಂದ ದರ್ಶನಾಪುರ ಮತ್ತು ಶಿರವಾಳ ಮನೆತನದವರೇ ಪ್ರತಿನಿಧಿಸುತ್ತಾ ಬಂದಿದ್ದಾರೆ. ಈ ಬಾರಿ ಪ್ರಬಲ ಪೈಪೋಟಿಯಾಗಿ ಅಮೀನರಡ್ಡಿ ಯಾಳಗಿ ಇದ್ದಾರೆ. ಲಿಂಗಾಯತ ಸಮುದಾಯದ ಮತದಾರರು ಇಲ್ಲಿ ಪ್ರಾಬಲ್ಯ ಹೊಂದಿದ್ದು, ಒಂದು ಬಾರಿ ದರ್ಶನಾಪುರ ಮನೆತನಕ್ಕೆ, ಮತ್ತೊಂದು ಬಾರಿ ಶಿರವಾಳ ಮನೆತನಕ್ಕೆ ಇಲ್ಲಿನ ಮತದಾರರು ಆಶೀರ್ವಾದ ಮಾಡಿದ್ದಾರೆ. ಆದರೆ ಈ ಬಾರಿ ಮತದಾರ ಯಾರ ‘ಕೈ’ ಹಿಡಿಯಲಿದ್ದಾನೆಂಬುದನ್ನು ಕಾದು ನೋಡಬೇಕಿದೆ.


2018ರ ಫಲಿತಾಂಶ:


2018ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಶರಣಬಸಪ್ಪಗೌಡ ದರ್ಶಾನಪೂರ 78,642 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಬಿಜೆಪಿಯ ಗುರುಪಾಟೀಲ ಶಿರವಾಳ 47,648 ಮತಗಳನ್ನು ಪಡೆದು ಸೋಲು ಕಂಡಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 30,794 ಮತಗಳಾಗಿವೆ.


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:  


ಅಮೀನ್ ರೆಡ್ಡಿ ಯಾಳಗಿ - ಬಿಜೆಪಿ


ಶರಣಬಸಪ್ಪಗೌಡ ದರ್ಶನಾಪೂರ - ಕಾಂಗ್ರೆಸ್


ಗುರುಪಾಟೀಲ ಶಿರವಾಳ - ಜೆಡಿಎಸ್


ಸುರಪುರ ವಿಧಾನಸಭಾ ಕುರುಕ್ಷೇತ್ರ: 


Surapura Vidhan Aabha Chunav Result 2023: ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಸುರಪುರ ರಾಜ ಮನೆತನಗಳ ಕ್ಷೇತ್ರ. ಜಿಲ್ಲೆಯಲ್ಲಿಯೇ ಹೆಚ್ಚು ಸದ್ದು ಮಾಡುತ್ತಿರುವ ಮತ್ತು ಹೆಚ್ಚು ರಾಜಕೀಯ ಚಟುವಟಿಕೆ ನಡೆಯುತ್ತಿರುವ ಕ್ಷೇತ್ರ. ರಾಜ್ಯದಲ್ಲಿಯೇ ಇದು ಅತಿಸೂಕ್ಷ್ಮ ಚುನಾವಣೆ ಕ್ಷೇತ್ರವಾಗಿದೆ. ಬಿಜೆಪಿಯ ರಾಜೂಗೌಡ ಅವರು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ಸುರಪುರದ ಹಾಲಿ ಶಾಸಕರಾಗಿದ್ದು, ಇವರಿಗೆ ಎದುರಾಳಿಯಾಗಿ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಡಾ.ರಾಜ ವೆಂಕಟಪ್ಪ ನಾಯಕ ಸ್ಪರ್ಧಿಯಾಗಿದ್ದಾರೆ. ಸದ್ಯದ ಮಟ್ಟಿಗೆ ಉಭಯ ನಾಯಕರು ಕ್ಷೇತ್ರದಲ್ಲಿ ಸಮಬಲ ಸಾಧಿಸಿದ್ದಾರೆ. ಇಲ್ಲಿ ಕುರುಬ ಮತದಾರರು ಬಹಳ ಪ್ರಮುಖ ಪಾತ್ರ ವಹಿಸಿದ್ದಾರೆ.


2018ರ ಫಲಿತಾಂಶ:


2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಜೂಗೌಡ ನರಸಿಂಹ ನಾಯಕ 1,04,426 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‍ನ ರಾಜಾ ವೆಂಕಟಪ್ಪ ನಾಯಕ 81,858 ಮತಗಳನ್ನು ಪಡೆದಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 22,568 ಮತಗಳಾಗಿದ್ದವು.


2023ರಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದವರು:  


ನರಸಿಂಹ ನಾಯಕ (ರಾಜೂಗೌಡ) - ಬಿಜೆಪಿ


ಡಾ.ರಾಜಾ ವೆಂಕಟಪ್ಪ ನಾಯಕ - ಕಾಂಗ್ರೆಸ್


ಶ್ರವಣಕುಮಾರ ನಾಯಕ - ಜೆಡಿಎಸ್


ಇದನ್ನೂ ಓದಿ: Haveri Assembly Election 2023: ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಯಾರಿಗೆ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.