Karnataka Budget 2023: ಫೆ.17ರ ಬೆಳಿಗ್ಗೆ 10.15ಕ್ಕೆ ಬಜೆಟ್ ಮಂಡನೆ ಪ್ರಾರಂಭ: ಬೊಮ್ಮಾಯಿ ಸರ್ಕಾರದ ಕೊನೆಯ ಬಜೆಟ್ ನಿರೀಕ್ಷೆಗಳಿವು!
Karnataka Budget 2023 Time: ಕರ್ನಾಟಕ ಬಜೆಟ್ ಮೇಲೆ ರಾಜ್ಯದ ಜನರ ದೃಷ್ಟಿ ನೆಟ್ಟಿದ್ದು, ಭಾರೀ ನಿರೀಕ್ಷೆಗಳನ್ನಿಟ್ಟಿದ್ದಾರೆ. ಇನ್ನು ಅದಾಗಲೇ ಬಜೆಟ್ ಅಧಿವೇಶನ ಫೆಬ್ರವರಿ 10 ರಿಂದ ಆರಂಭವಾಗಿದ್ದು, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುತ್ತಿದೆ. ಇನ್ನು ಫೆಬ್ರವರಿ 17 ರಂದು ಬಜೆಟ್ ಮಂಡನೆಯಾಗಿ ಫೆಬ್ರವರಿ 20 ರಿಂದ 22ರವರೆಗೂ ಅದರ ಮೇಲೆ ಚರ್ಚೆ ನಡೆಯಲಿದೆ.
Karnataka Budget 2023 Time: ಕರ್ನಾಟಕ ಬಜೆಟ್ ಫೆಬ್ರವರಿ 17 ರಂದು ಮಂಡನೆಯಾಗಲಿದೆ. ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಇದಾಗಿದ್ದು, ಶುಕ್ರವಾರ ಬೆಳಗ್ಗೆ 10:15ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಗ್ಗೆ ವಿಧಾನಸಭೆಯಿಂದ ಅಧಿಕೃತ ಮಾಹಿತಿ ಲಭಿಸಿದ್ದು, ಸುಮಾರು ಒಂದು ಗಂಟೆಗಳ ಕಾಲ ಬಜೆಟ್ ಭಾಷಣ ಇರಲಿದೆ.
ಇದನ್ನೂ ಓದಿ: ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯನ್ನು ಕೊಂಡಾಡಿದ ಮುಖ್ಯಮಂತ್ರಿ ಬೊಮ್ಮಾಯಿ
ಕರ್ನಾಟಕ ಬಜೆಟ್ ಮೇಲೆ ರಾಜ್ಯದ ಜನರ ದೃಷ್ಟಿ ನೆಟ್ಟಿದ್ದು, ಭಾರೀ ನಿರೀಕ್ಷೆಗಳನ್ನಿಟ್ಟಿದ್ದಾರೆ. ಇನ್ನು ಅದಾಗಲೇ ಬಜೆಟ್ ಅಧಿವೇಶನ ಫೆಬ್ರವರಿ 10 ರಿಂದ ಆರಂಭವಾಗಿದ್ದು, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುತ್ತಿದೆ. ಇನ್ನು ಫೆಬ್ರವರಿ 17 ರಂದು ಬಜೆಟ್ ಮಂಡನೆಯಾಗಿ ಫೆಬ್ರವರಿ 20 ರಿಂದ 22ರವರೆಗೂ ಅದರ ಮೇಲೆ ಚರ್ಚೆ ನಡೆಯಲಿದೆ.
ಒಂದೆಡೆ ಬೊಮ್ಮಾಯಿ ಸರ್ಕಾರ ಜನರನ್ನು ಆಕರ್ಷಿಸಲು ಭರ್ಜರಿ ಘೋಷಣೆಗಳನ್ನು ಮಾಡಿದರೂ ಸಹ ಅದು ಕೇವಲ ಘೋಷಣೆ ಮಾತ್ರವೇ ಆಗಿರಲಿದೆ. ಏಕೆಂದರೆ ಇದು ರಾಜ್ಯ ಬಿಜೆಪಿ ಸರ್ಕಾರದ ಕೊನೆಯ ಬಜೆಟ್, ಇನ್ನೇನು ಏಪ್ರಿಲ್–ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ವೇಳೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಬಜೆಟ್ ಮಂಡನೆ ವೇಳೆ ಘೋಷಣೆ ಮಾಡಿದ ಕೊಡುಗೆಗಳು ಚಾಲ್ತಿಗೆ ಬರುವುದು ತಡವಾಗುತ್ತದೆ. ಒಂದು ವೇಳೆ ಬಿಜೆಪಿ ಸರ್ಕಾರವೇ ಮುಂದುವರೆದಲ್ಲಿ ಮಾಡಿರುವ ಘೋಷಣೆಗಳು ಅನುಷ್ಠಾನಕ್ಕೆ ಬರಲಿವೆ.
ಕೇವಲ ಘೋಷಣೆ ಮಾತ್ರವೇ ಆಗಿರಲಿದೆ. ಹೀಗಾಗಿ, ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವುದು ಅಸಾಧ್ಯ. ಜನರನ್ನು ಆಕರ್ಷಿಸಲು ಭರಪೂರ ಘೋಷಣೆಗೆ ಬೊಮ್ಮಾಯಿ ಮುಂದಾಗಬಹುದು.
ಇದನ್ನೂ ಓದಿ: ನಾನು ಸದಾ ರಿಲವೆಂಟ್ ರಾಜಕಾರಣಿ:ಸದನದಲ್ಲಿ ಸಿದ್ದು ಗುಡುಗು!
ಈ ವರ್ಷ ಎಷ್ಟು ಕೋಟಿ ರೂ. ಗಾತ್ರದ ಬಜೆಟ್ ಮಂಡನೆಯಾಗಲಿದೆ ಎಂದು ತಿಳಿಯಬೇಕಿದೆ, ಕಳೆದ ವರ್ಷದ ಬಜೆಟ್ ಸುಮಾರು 2.65 ಲಕ್ಷ ಕೋಟಿ. ಗಾತ್ರದ್ದಾಗಿತ್ತು. ಅದರಲ್ಲಿ ಮಹಿಳೆಯರ ಸಬಲೀಕರಣ ಮತ್ತು ಕ್ಷೇಮಾಭಿವೃದ್ಧಿಗೆ 43 ಸಾವಿರ ಕೋಟಿ ರೂ, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ಕ್ಷೇತ್ರಕ್ಕೆ 68 ಸಾವಿರ ಕೋಟಿ, ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ ಕ್ಷೇತ್ರಕ್ಕೆ 56 ಸಾವಿರ ಕೋಟಿ, ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು 55 ಸಾವಿರ ಕೋಟಿ, ಮಕ್ಕಳ ಅಭ್ಯುದಯಕ್ಕೆ 40 ಸಾವಿರ ಕೋಟಿ, ಕೃಷಿ ಕ್ಷೇತ್ರಕ್ಕೆ 33 ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿತ್ತು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.