VISL ಕಾರ್ಖಾನೆ ಮುಚ್ಚುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

VISL Bhadravati:ಭದ್ರಾವತಿಯ VISL ಕಾರ್ಖಾನೆ ಮುಚ್ಚುವ ಬಗ್ಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದ ವಿಚಾರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ,ಪ್ರೋಸೆಸ್ ಶುರುವಾಗಿದೆ ಅಂದ್ರೆ ಮುಚ್ಚೆ ಆಯ್ತು ಅಂತಲ್ಲ,ಕೆಲವು ಪ್ರೋಸೆಸ್ ಶುರುವಾಗಿದೆ ಅಷ್ಟೇ.

Written by - Prashobh Devanahalli | Last Updated : Feb 14, 2023, 03:24 PM IST
  • VISL ನಮ್ಮ ರಾಜ್ಯದ ಪ್ರತಿಷ್ಠಿತ ಕಬ್ಬಿಣ ಕಾರ್ಖಾನೆ
  • ಕಾರ್ಖಾನೆ ಮುಚ್ಚುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ
  • ಸರ್ಕಾರಿ ಸ್ವಾಮ್ಯದ ಭದ್ರಾವತಿ“ವಿಶ್ವೇಶ್ವರಯ್ಯ ಕಾರ್ಖಾನೆ
VISL ಕಾರ್ಖಾನೆ ಮುಚ್ಚುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ title=

VISL Bhadravati:ಭದ್ರಾವತಿಯ VISL ಕಾರ್ಖಾನೆ ಮುಚ್ಚುವ ಬಗ್ಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದ ವಿಚಾರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ,ಪ್ರೋಸೆಸ್ ಶುರುವಾಗಿದೆ ಅಂದ್ರೆ ಮುಚ್ಚೆ ಆಯ್ತು ಅಂತಲ್ಲ,ಕೆಲವು ಪ್ರೋಸೆಸ್ ಶುರುವಾಗಿದೆ ಅಷ್ಟೇ.ಕಾರ್ಖಾನೆ ಮುಂದುವರೆಸಲು ಏನ್ ಮಾಡಬೇಕು ಅದನ್ನ ನಾವು ಮಾಡುತ್ತೇವೆ, ಎಂದು ತಿಳಿಸಿದರು.

ವಿಧಾನಸೌಧದಲ್ಲಿ ಮಾತಾನ್ನಾಡಿದ ಇವರು, VISL ನಮ್ಮ ರಾಜ್ಯದ ಪ್ರತಿಷ್ಠಿತ ಕಬ್ಬಿಣ ಕಾರ್ಖಾನೆ.ಅದು ಮುಚ್ಚವ ಹಂತಕ್ಕೆ ಬಂದಿದೆ.ಅದನ್ನ ಹಿಡುದು ನಿಲ್ಲಿಸಲು ಏನ್ ಏನ್ ಮಾಡಬೇಕು ಅದನ್ನ ನಾವು ಮಾಡುತ್ತಿದ್ದೇವೆ.ಕೇಂದ್ರ ಸರ್ಕಾರದ ಜೊತೆ ವಿಶೇಷವಾಗಿ ಮಾತನಾಡುತ್ತಿದ್ದೇವೆ.ನಿನ್ನ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಕಾರ್ಖಾನೆ ಮುಚ್ಚುವ ಪ್ರೋಸೆಸ್ ಸ್ಟಾರ್ಟ್ ಆಗಿದೆ ಅಂತ ಹೇಳಿದ್ದಾರೆ.

 ಇದನ್ನೂ ಓದಿ:ಜನಸೇವೆಯಲ್ಲಿ ಸಂಸದೆ ಸುಮಲತಾ ಅಂಬರೀಷ್ ಗೆ ʻ0ʼ ಅಂಕ"

ಕಳೆದ ವಾರ ಸಿಎಂ ಶಿವಮೊಗ್ಗದಲ್ಲೂ ಸಹ ಕಾರ್ಖಾನೆ ಮುಚ್ಚಲು ಬಿಡೋದಿಲ್ಲ ಇದನ್ನ ನಾವು ಉಳಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.ಕಾರ್ಖಾನೆಯನ್ನ ಖಾಸಗೀಕರಣ ಮಾಡಬೇಕೋ ಅಥಾವ ಸರ್ಕಾರ ನಡೆಸಬೇಕೋ ಚರ್ಚೆ ನಡೆಸಲಾಗುತ್ತಿದೆ. ಕಸಭೆಯಲ್ಲಿ ನಿನ್ನೆಯ ಸ್ಟೆಟಸ್ ಏನಿದೆಯೋ ಅದನ್ನ ಕೊಟ್ಟಿದ್ದಾರೆ ಇದ್ರ ಬಗ್ಗೆ ನನಗೂ  ವಿಷಾದವಿದೆ.ಈ ಕಾರ್ಖಾನೆ ಮುಚ್ಚಬಾರದು..ಯಾವುದಾದರೂ ರೀತಿಯಲ್ಲಿ ನಡೆಯಬೇಕು

.ನಮ್ಮ ರಾಜ್ಯದ ಹೆಮ್ಮೆಯ ಕಾರ್ಖಾನೆ ಇದು..ವಿಶ್ವೇಶ್ವರಯ್ಯನವರು ಪ್ರಾರಂಭ ಮಾಡಿದ್ದು.ನಮ್ಮ ಮೈಸೂರು  ಮಹರಾಜರು ಮಾಡಿದ ಉದ್ಯಮ.ನಿನ್ನೆ ಕೇಂದ್ರ ಸರ್ಕಾರ ಬಜೆಟ್ ಅಧಿವೇಶನದಲ್ಲಿ VISL  ಕಾರ್ಖಾನೆಯನ್ನು ಮುಚ್ಚುವ ಬಗ್ಗೆ ಅಧಿಕೃತವಾಗಿ ಹೇಳಿಕೆ  ನೀಡಿದ್ದಾರೆ.

 ಇದನ್ನೂ ಓದಿ:“ತುಳುವರಿಗೆ ಕನ್ನಡ ರಾಜ್ಯ ಭಾಷೆ, ತುಳು ಮಾತೃಭಾಷೆ”: ಒಡಿಯೂರು ಶ್ರೀ

ಸರ್ಕಾರಿ ಸ್ವಾಮ್ಯದ ಭದ್ರಾವತಿ“ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕುಕಾರ್ಖಾನೆ 'ನಷ್ಟದ ಕಾರಣದಿಂದ ಅಧಿಕೃತವಾಗಿ ಮುಚ್ಚಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.ಕಾರ್ಖಾನೆಯನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ.ಪ್ರಧಾನಮಂತ್ರಿ ಕೇಂದ್ರ ಗೃಹ ಸಚಿವರು ಕೈಗಾರಿಕೆ ಸಚಿವರ ಜೊತೆ ಚರ್ಚಿಸಲಾಗಿದೆ. ಹೀಗಾಗಿ ಮುಚ್ಚುವ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಲಾಗಿದೆ' ಎಂದು ಕೇಂದ್ರ ವಿತ್ತ ಸಚಿವಾಲಯ ಲೋಕಸಭೆಗೆ ತಿಳಿಸಿದೆ.

Trending News