ಅರಣ್ಯದಂಚಿನ ಗ್ರಾಮಗಳಲ್ಲಿ 13 ಆನೆಗಳು ಪ್ರತ್ಯಕ್ಷ, ಬೆಳೆ ಹಾನಿ ಆತಂಕದಲ್ಲಿ ಸ್ಥಳೀಯರು
ಅರಣ್ಯದಂಚಿನ ಗ್ರಾಮಗಳ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆನೆಗಳು ಕಾಡಿಗೆ ಹೋಗುವವರೆಗೂ ಮುನ್ನೆಚ್ಚರಿಕೆ ಕ್ರಮವಾಗಿ ಹೊಲ ಗದ್ದೆಗಳಿಗೆ ಹೋಗದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಈಗಾಗಲೇ ಆಯಾ ಗ್ರಾಮಗಳಲ್ಲಿ ಡಂಗುರ ಸಾರಿಸಿದ್ದಾರೆ.
ಧಾರವಾಡ: ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ 13 ಆನೆಗಳು ಪ್ರತ್ಯಕ್ಷವಾಗಿ ಓಡಾಡುತ್ತಿದ್ದು ರೈತರ ಜಮೀನಗಳಿಗೆ ನುಗ್ಗಿ ಅಪಾರ ಬೆಳೆ ಹಾನಿ ಮಾಡುವದರೊಂದಿಗೆ ಜನರಲ್ಲಿ ಭಯ ಹುಟ್ಟಿಸಿವೆ. ತಾಲ್ಲೂಕಿನ ಕಲಕುಂಡಿ, ಈಚನಳ್ಳಿ, ತಂಬೂರ, ದೇವಿಕೊಪ್ಪ, ಹುಲಗಿನಕಟ್ಟಿ, ಹಟಕಿನಾಳ, ಮಾಚಾಪುರ, ಕಲಘಟಗಿ ಹೊರವಲಯದ ಮಂಗೇಶ ಕೆರೆ ಹತ್ತಿರ ಹಾಗೂ ವಿವಿಧ ಗ್ರಾಮಗಳಲ್ಲಿ 10 ಮದ್ದಾನೆ ಹಾಗೂ 3 ಮರಿ ಆನೆಗಳ ಹಿಂಡುಗಳು ಓಡಾಡುತ್ತಿದ್ದು, ಇದರಿಂದಾಗಿ ಈ ಪ್ರದೇಶದ ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಕಲಘಟಗಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕಾಡಿನಿಂದ ನಾಡಿಗೆ ಆನೆಗಳು ಆಹಾರ, ನೀರು ಆರಿಸಿ ಬರುತ್ತಿದ್ದು ರೈತರ ಕಬ್ಬು, ಭತ್ತ, ತೆಂಗಿನ ಮರ ಹಾಗೂ ಇತರೆ ಬೆಳೆಗಳನ್ನು ಹಾಳುಮಾಡಿದ್ದು ಈಗ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಕಲಘಟಗಿ ಹೊರವಲಯದ ಮಂಗೇಶ ಕೆರೆ ಹತ್ತಿರ ಹಾಗೂ ವಿವಿಧ ಗ್ರಾಮಗಳಲ್ಲಿ 10 ಮದ್ದಾನೆ ಹಾಗೂ ಮೂರು ಮರಿ ಆನೆಗಳು ಪ್ರತ್ಯಕ್ಷವಾಗಿದ್ದು, ಕಾಡಿಗೆ ಓಡಿಸಲು ಹಗಲು ರಾತ್ರಿ ನಿರಂತರ ಕಾರ್ಯಾಚರಣೆ ಮಾಡುತ್ತಿದ್ದೇವೆ. ಮರಿ ಆನೆಗಳು ಇರುವದರಿಂದ ಅವುಗಳನ್ನು ಓಡಿಸಲು ಕಷ್ಟವಾಗುತ್ತಿದೆ. ನಿಧಾನವಾಗಿ ಕಾಡಿಗೆ ಕಳಿಸಲು ಪ್ರಯತ್ನ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ರೈತರ ಬೆಳೆ ಹಾನಿ ಮಾಡಿದಕ್ಕೆ ಪರಿಹಾರ ನೀಡಲಾಗುವುದು. ಅರಣ್ಯದಂಚಿನ ಗ್ರಾಮಗಳ ರೈತರ ಕಬ್ಬಿನ ಪಸಲು ಬೇಗನೆ ಸಕ್ಕರೆ ಕಾರ್ಖಾನೆಗೆ ಸಾಗಿಸಲು ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Viral Video: ತುಮಕೂರಿನಲ್ಲಿ ಅಪರೂಪದ ಬೆಕ್ಕಿನ ಕಣ್ಣಿನ ಹಾವು ಪತ್ತೆ..!
ಅರಣ್ಯದಂಚಿನ ಗ್ರಾಮಗಳ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆನೆಗಳು ಕಾಡಿಗೆ ಹೋಗುವವರೆಗೂ ಮುನ್ನೆಚ್ಚರಿಕೆ ಕ್ರಮವಾಗಿ ಹೊಲ ಗದ್ದೆಗಳಿಗೆ ಹೋಗದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಈಗಾಗಲೇ ಆಯಾ ಗ್ರಾಮಗಳಲ್ಲಿ ಡಂಗುರ ಸಾರಿಸಿದ್ದಾರೆ. ಇನ್ನು ತಾಲ್ಲೂಕು ವಲಯ ಅರಣ್ಯ ಇಲಾಖೆಯ ಸಿಬ್ಬಂದಿ, ವಲಯ ಅರಣ್ಯ ಅಧಿಕಾರಿ ಆರ್. ಜೆ ಕಡೆಮನಿ, ಉಮ್ಮೆಶ ಕಡಿ,ಎಸ್. ಜಿ ಕೇರಿ,ಎಂ. ವೈ ಛಲವಾದಿ ಇತರೆ ಸಿಬ್ಬಂದಿಗಳು ಗುರುವಾರ ರಾತ್ರಿಯಿಂದ ಆನೆ ಸೆರೆ ಹಿಡಿಯುವ ಅಥವಾ ಅವುಗ ಓಡಿಸುವ ಕಾರ್ಯಾಚರಣೆ ಸಹ ನಡೆಸಲಿದ್ದಾರೆ.
ಕಾಡಾನೆ ದಾಳಿ ಭಯದಲ್ಲಿ ರೈತರು:
ಇನ್ನು ಜಿಲ್ಲೆಯ ಸಿದ್ದನಬಾವಿ ಅರಣ್ಯ ಪ್ರದೇಶದಲ್ಲಿ ಕಾಡಾನೆ ಭಯದಿಂದ ಈ ಪ್ರದೇಶದ ಜನರು ಆತಂಕದಲ್ಲಿ ಕಾಲ ಕಳೆಯುತಿದ್ದಾರೆ. ಇದರಿಂದ ನಮಗೆ ಶಾಶ್ವತ ಪರಿಹಾರ ಬೇಕು. ಕೂಡಲೇ ಅರಣ್ಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಫಕೀರಪ್ಪ ಮನವಿ ಮಾಡಿದ್ದಾರೆ.
ಇದನ್ನೂ ಓದಿ- Viral Video : ಅಡುಗೆ ಮನೆಯ ಸಿಲೆಂಡರ್ ಬಳಿಯಿತ್ತು ದೈತ್ಯ ಕಾಳಿಂಗ ಸರ್ಪ!
ಈ ಹಿಂದೆ ಇದೇ ಪ್ರದೇಶದಲ್ಲಿ ಕಾರ್ಯಾಚರಣೆ ವೇಳೆ ಅರಣ್ಯ ಅಧಿಕಾರಿಗಳ ಮೇಲೆ ಕಾಡಾನೆಯೊಂದು ದಾಳಿ ಮಾಡಿದಾಗ ಸ್ವಲ್ಪದರಲ್ಲಿಯೇ ಅಧಿಕಾರಿಗಳು, ಸಿಬ್ಬಂದಿಗಳ ಕಾರ್ಯಾಚರಣೆಯಿಂದಾಗಿ ಪ್ರಾಣಪಾಯದಿಂದ ಪಾರಾಗಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.