Viral Video : ಅಡುಗೆ ಮನೆಯ ಸಿಲೆಂಡರ್‌ ಬಳಿಯಿತ್ತು ದೈತ್ಯ ಕಾಳಿಂಗ ಸರ್ಪ!

Viral Video : ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ವೈರಲ್‌ ಆಗುತ್ತವೆ. ಅದರಲ್ಲಿ ಕೆಲವು ನಮ್ಮಲ್ಲಿ ಭಯ ಹುಟ್ಟಿಸುತ್ತವೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಹಾವೊಂದು ಮನೆಯ ಅಡುಗೆ ಕೋಣೆಗೆ ನುಗ್ಗಿ ಭಯ ಹುಟ್ಟಿಸುತ್ತಿರುವುದನ್ನು ಕಾಣಬಹುದು. 

Written by - Chetana Devarmani | Last Updated : Dec 4, 2022, 02:30 PM IST
  • ಅಡುಗೆ ಮನೆಯ ಸಿಲೆಂಡರ್‌ ಬಳಿಯಿತ್ತು ದೈತ್ಯ ಕಾಳಿಂಗ ಸರ್ಪ
  • ಹಿಡಿಯಲು ಬಂದ ಸ್ನೇಕ್‌ ಮಾಸ್ಟರ್‌ ಮೇಲೆ ಹೊರ ಹಾಕಿತು ಕೋಪ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video : ಅಡುಗೆ ಮನೆಯ ಸಿಲೆಂಡರ್‌ ಬಳಿಯಿತ್ತು ದೈತ್ಯ ಕಾಳಿಂಗ ಸರ್ಪ!
ಕಾಳಿಂಗ ಸರ್ಪ

King cobra in Kitchen : ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ವೈರಲ್‌ ಆಗುತ್ತವೆ. ಅದರಲ್ಲಿ ಕೆಲವು ನಮ್ಮಲ್ಲಿ ಭಯ ಹುಟ್ಟಿಸುತ್ತವೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಹಾವೊಂದು ಮನೆಯ ಅಡುಗೆ ಕೋಣೆಗೆ ನುಗ್ಗಿ ಭಯ ಹುಟ್ಟಿಸುತ್ತಿರುವುದನ್ನು ಕಾಣಬಹುದು. ಇದರಿಂದ ಗಾಬರಿಗೊಂಡ ಜನರು ಉರಗ ರಕ್ಷಕನಿಗೆ ಕರೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಭಯಾನಕ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ್ರೆ ಎಲ್ಲರೂ ಶಾಕ್ ಆಗ್ತಾರೆ. 

ಇದನ್ನೂ ಓದಿ : Trending Video : ದೈತ್ಯ ಹೆಬ್ಬಾವುಗಳನ್ನು ಹೆಗಲ ಮೇಲೆ ಹೊತ್ತು ಡ್ಯಾನ್ಸ್‌! ವಿಡಿಯೋ ವೈರಲ್

ಕೋಪಗೊಂಡ ಮತ್ತು ಅಪಾಯಕಾರಿಯಾದ ಕಾಳಿಂಗ ಸರ್ಪವೊಂದು ಅಡುಗೆಮನೆಯಲ್ಲಿ ಕಂಡುಬಂದಿದೆ. ಹೆಡೆ ಎತ್ತಿ ನಿಂತು ನಾಲಿಗೆ ಹೊರ ಹಾಕುತ್ತಿರುವ ದೃಶ್ಯ ನೋಡುಗರಲ್ಲಿ ನಡುಕ ಹುಟ್ಟಿಸುವಂತಿದೆ. ಈ ಕಾಳಿಂಗ ಸರ್ಪವನ್ನು ಸ್ನೇಕ್‌ ಮಾಸ್ಟರ್‌ ಮಾರುತಿ ಎಂಬುವವರು ರಕ್ಷಿಸಲು ಬಂದಾಗ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ.  

ಅಪಾಯಕಾರಿ ಮತ್ತು ವಿಷಪೂರಿತ ಕಾಳಿಂಗ ಸರ್ಪ ವ್ಯಕ್ತಿ ಒಬ್ಬರ ಮನೆಯ ಅಡುಗೆಮನೆಗೆ ಹೇಗೆ ಪ್ರವೇಶಿಸಿತು ಎಂಬುದೇ ಯಾರಿಗೂ ತಿಳಿದಿಲ್ಲ. ಅಡುಗೆ ಮನೆಯ ಸಿಲಿಂಡರ್‌ ಬಳಿಯಿಂದ ಬುಸ್‌ನೇ ಹೆಡೆಯೆತ್ತಿ ಮೇಲೆದ್ದ ಬೃಹತ್‌ ಕಾಳಿಂಗ ಕಂಡು ಕುಟುಂಬದವರು ಭಯಪಟ್ಟಿದ್ದಾರೆ.

ಇದನ್ನೂ ಓದಿ : Viral Video: ತುಮಕೂರಿನಲ್ಲಿ ಅಪರೂಪದ ಬೆಕ್ಕಿನ ಕಣ್ಣಿನ ಹಾವು ಪತ್ತೆ..!

ಸ್ನೇಕ್‌ ಮಾಸ್ಟರ್‌ ಮಾರುತಿ ಈ ಕಾಳಿಂಗನನ್ನು ರಕ್ಷಿಸಲು ಬಂದಾಗ ಅದು ಹೊರಹಾಕಿದ ಕೋಪದ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಸಿಲಿಂಡರ್ ಹಿಂದೆಯಿದ್ದ ಈ ಕಾಳಿಂಗ ಸರ್ಪ ಪಟ್ಟನೆ ಪಾತ್ರಗಳನ್ನಿಟ್ಟಿದ್ದ ಸೆಲ್ಫ್‌ ಬಳಿ ಹೋಗಿ ಅಡಗಿಕೊಳ್ಳುತ್ತದೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News