ಚಿಕ್ಕಬಳ್ಳಾಪುರ : ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯ ಕಾರಣ, ಮಳೆ ನೀರು ಕೋಳಿ ಫಾರಂಗೆ ನುಗ್ಗಿದೆ. ಈ ಪರಿಣಾಮವಾಗಿ,  15 ಸಾವಿರ ಕೋಳಿಗಳು ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚೋಳಶೆಟ್ಟಿಹಳ್ಳಿ ಗ್ರಾಮದ ಬಳಿ ನಡೆದಿದೆ.  ಘಟನೆಯಿಂದ ಕೋಳಿ ಫಾರಂ ನ ಮಾಲಿಕರು ಕಂಗಾಲಾಗಿದ್ದಾರೆ.


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಸ್ವಲ್ಪ ದಿನ ಬಿಡುವು ನೀಡಿದ್ದ ವರುಣ ಮತ್ತೆ ಆರ್ಭಟಿಸಲು ಆರಂಭಿಸಿದ್ದಾನೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆಯಾಗುತ್ತಿದೆ. ತೀವ್ರ ಮಳೆಯ ಪರಿಣಾಮ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ನದಿ ನೀರು ನುಗ್ಗಿ ಬಂದು ನದಿ ಪಾತ್ರದಲ್ಲಿ ಬೆಳೆ ನಾಶವಾಗಿರುವ ಬಗ್ಗೆ ಕೂಡಾ ಅಲ್ಲಲ್ಲಿ ವರದಿಯಾಗಿದೆ. 


ಇದನ್ನೂ ಓದಿ : ಮುನಿರತ್ನ ವಿರುದ್ಧ ಅಬ್ಬರಿಸಿದ್ದ ಪ್ರಧಾನಿ ಮೋದಿ ‘ಮೌನವ್ರತ’ ಪಾಲಿಸುತ್ತಿರುವುದೇಕೆ?: ಕಾಂಗ್ರೆಸ್


ಈ ಮಧ್ಯೆ,  ಚಿಕ್ಕಬಳ್ಳಾಪುರದಲ್ಲಿ   ಸುರಿದ ಭಾರೀ ಮಳೆಯ ಪರಿಣಾಮ ಮಳೆಯ ನೀರು ಕೋಳಿ  ಫಾರಂಗೆ ನುಗ್ಗಿದೆ. ಈ ಹಿನ್ನೆಲೆಯಲ್ಲಿ ಫಾರಂನಲ್ಲಿದ್ದ 15 ಸಾವಿರ ಕೋಳಿಗಳು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿವೆ. ಕೋಳಿ ಫಾರಂನಲ್ಲಿ ಸುಮಾರು 30 ಸಾವಿರ ಕೋಳಿಗಳು ಇದ್ದವು ಎನ್ನಲಾಗಿದೆ. ಈ ಪೈಕಿ 15 ಸಾವಿರ ಕೋಳಿಗಳು ಸಾವನ್ನಪ್ಪಿವೆ.  


ಚೋಳಶೆಟ್ಟಿಹಳ್ಳಿ ಗ್ರಾಮ ಸಮೀಪದ ಮದ್ದಲಹಳ್ಳಿ ಗ್ರಾಮದ ನಾಯಣ್ಣ ಕೆರೆ ಕೋಡಿ ಒಡೆದು,  ಕೆರೆ  ನೀರು  ರಭಸದಿಂದ ಹರಿದು ಸಿ.ಎನ್. ಲಕ್ಷ್ಮೀನಾರಾಯಣರೆಡ್ಡಿ ಕೋಳಿ  ಫಾರಂಗೆ ಏಕಾಏಕಿ  ನುಗ್ಗಿದೆ. ದುರ್ಘಟನೆಯಿಂದ ಕೋಳಿ ಫಾರಂ ನ ಮಾಲೀಕರು ಕಂಗಾಲಾಗಿದ್ದಾರೆ. 


ಇದನ್ನೂ ಓದಿ : DK Shivakumar : ಡಿಕೆಶಿ ಆಪ್ತರಿಗೆ ನೋಟಿಸ್ ; 'ಕಿರುಕುಳ ಕೊಡಕ್ಕೂ ಲಿಮಿಟ್ ಇರಬೇಕು'


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.