ಬೆಂಗಳೂರು : ಉಕ್ರೇನ್ ನಲ್ಲಿ ಪರಿಸ್ಥಿತಿ ದಿನೇ ದಿನೇ  ಹದಗೆಡುತ್ತಿದೆ. ಉನ್ನತ ವಿದ್ಯಾಭ್ಯಾಸಕಾಗಿ ಉಕ್ರೇನ್ ಗೆ ತೆರಳಿದ್ದ ಅದೆಷ್ಟೋ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ (Ukraine)ಸಿಲುಕಿದ್ದರು. ಇದೀಗ ಆ ವಿದ್ಯಾರ್ಥಿಗಳನ್ನು ಮರಳಿ ತಾಯ್ನಾಡಿಗೆ ಕರೆ ತರುವ ಕೆಲಸ ನಡೆಯುತ್ತಿದೆ. ಇಂದು ಕೂಡಾ ಉಕ್ರೇನ್ ನಿಂದ ೩೭ ವಿದ್ಯಾರ್ಥಿಗಳ ತಂದ ಬೆಂಗಳೂರಿಗೆ ಬಂದಿಳಿದಿದೆ (Studnts returned from Ukraine). ಈ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಕಂಡು ಪೋಷಕರು ಕಣ್ಣೀರು ಹಾಕಿದ್ದಾರೆ. 


COMMERCIAL BREAK
SCROLL TO CONTINUE READING

ರಷ್ಯಾ ಉಕ್ರೇನ್ ವಿರುದ್ಧ ಯುದ್ಧ (Russia Ukraine War) ಸಾರಿದ ದಿನದಿಂದ ಉಕ್ರೇನ್ ನಲ್ಲಿ ಜನರ ಸ್ಥಿತಿ ದುಸ್ತರವಾಗಿದೆ. ಈ ನಡುವೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಗೆ ತೆರೆಳಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆ ತರುವ ಜವಾಬ್ದಾರಿ ಕೂಡಾ ಸರ್ಕಾರದ ಮೇಲಿತ್ತು (Studnts returned from Ukraine). ಈ ಬಗ್ಗೆ ಸರ್ಕಾರ ಸತತ ಪ್ರಯತ್ನಗಳನ್ನು ನಡೆಸುತ್ತಲೇ ಇದೆ. 


ಇದನ್ನೂ ಓದಿ : ಮೇಲುಕೋಟೆಯ ಕಲ್ಯಾಣಿಯಲ್ಲಿ ವಿಜೃಂಭಣೆಯಿಂದ ಜರುಗಿದ ಚೆಲುವನಾರಾಯಣ ತೆಪ್ಪೋತ್ಸವ


ಅನೇಕ ವಿದ್ಯಾರ್ಥಿಗಳು ಈಗಾಗಲೇ ದೇಶಕ್ಕೆ ಮರಳಿದ್ದಾರೆ. ಇಂದು ಕೂಡಾ ರಾಜ್ಯದ ೩೭ ವಿದ್ಯಾರ್ಥಿಗಳು ವಾಪಾಸಾಗಿದ್ದಾರೆ. 7:15 ರ ವಿಮಾನದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  (Kempegowda international Airport)ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈ ವಿದ್ಯಾರ್ಥಿಗಳು ಉಕ್ರೇನ್ ನಿಂದ ದೆಹಲಿಗೆ ಆಗಮಿಸಿ ಇದೀಗ  ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. 


ಈ ವಿದ್ಯಾರ್ಥಿಗಳ ತಂಡ ನಿನ್ನೆಯೇ ಆಗಮಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಇಂದು ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ತಮ್ಮ ಮಕ್ಕಳ ನಿರೀಕ್ಷೆಯಲ್ಲಿದ್ದ ಪೋಷಕರು 
ಬೆಳ್ಳಂ‌ ಬೆಳಗ್ಗೆಯೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.  ಮಕ್ಕಳು ವಿಮಾನ ನಿಲ್ದಾಣ  ತಲುಪುತ್ತಿದ್ದಂತೆ ತಮ್ಮ ಕರುಳ ಬಳ್ಳಿಗಳನ್ನು ನೋಡಿ ಹೆತ್ತವರು ಕಣ್ಣೀರು  ಹಾಕಿ, ಮಕ್ಕಳನ್ನು ಅಪ್ಪಿ ಮುದ್ದಾಡಿದ ದೃಶ್ಯ ಕಂಡು ಬಂತು. 


ಇದನ್ನೂ ಓದಿ : ಮೇಕೆದಾಟು ಯೋಜನೆಗೆ ಅನುಮೋದನೆ ನೀಡಲು ಕೇಂದ್ರಕ್ಕೆ ಮನವಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.