ಚಾಮರಾಜನಗರ: ಉಕ್ರೇನ್ ನಿಂದ (Ukraine) ನಮ್ಮ ದೇಶಕ್ಕೆ ಬರುವವರೆಗೂ ನಮ್ಮ ಧ್ವಜವೇ ನಮಗೆ ಶ್ರೀ ರಕ್ಷೆಯಾಗಿತ್ತು ಎಂದು ಕೊಳ್ಳೇಗಾಲದ ವೈದ್ಯಕೀಯ ವಿದ್ಯಾರ್ಥಿನಿ ಭೂಮಿಕಾ ಹೇಳಿದ್ದಾರೆ.
ಇದನ್ನೂ ಓದಿ: Cobra-Rattlesnake Fight: ಇದ್ದಕ್ಕಿದ್ದಂತೆ ಎದುರಾದ ರಾಟಲ್ ಸ್ನೇಕ್-ಕೋಬ್ರಾ, ಮುಂದೆ ಆಗಿದ್ದೇ ಬೇರೆ!
ಉಕ್ರೇನ್ ನ ಕೀವ್ ನಲ್ಲಿ (kyiv) ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿರುವ ಭೂಮಿಕಾ ಶನಿವಾರ ತಾಯ್ನಾಡಿಗೆ ಮರಳಿದ್ದು ಉಕ್ರೇನ್ ಪರಿಸ್ಥಿತಿ ಬಗ್ಗೆ ತಾವು ಪಟ್ಡಪಾಡನ್ನು ಹಂಚಿಕೊಂಡಿದ್ದಾರೆ.
ಪರಿಸ್ಥಿತಿ ಬಿಗಡಾಯಿಸಿ ನಮ್ಮಲ್ಲಿನ ಆತಂಕ ಹೆಚ್ಚಾಯಿತು:
ಫೆ.15 ರಂದು ಅದಷ್ಟೂ ಬೇಗ ಉಕ್ರೇನ್ ತೊರೆಯುವಂತೆ ಸಲಹೆ ಕೊಡಲಾಗಿತ್ತು. ಆದರೆ, ನಾವು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ, ಫೆ.21 ರ ಬಳಿಕ ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿ ನಮ್ಮಲ್ಲಿನ ಆತಂಕ ಹೆಚ್ಚಾಯಿತು. ಯುದ್ಧ (Russia Ukraine war) ಪ್ರಾರಂಭವಾದ ನಾಲ್ಕೈದು ದಿನಗಳಲ್ಲಿ ನಾಗರೀಕರ ಮೇಲೆ ದಾಳಿ ನಡೆಯಲು ಪ್ರಾರಂಭವಾದವು ಎಂದು ಅಲ್ಲಿನ ಘನಘೋರ ಪರಿಸ್ಥಿತಿ ವಿವರಿಸಿದರು.
ಭಾರತದ ಬಾವುಟ ಹಿಡಿದು ಸುರಕ್ಷಿತವಾಗಿ ಬಾರ್ಡರ್ ತಲುಪಿದೆವು:
ಭಾರತ ಸರ್ಕಾರ ಎಲ್ಲಾ ಗಡಿಗಳಲ್ಲೂ ನಮ್ಮ ದೇಶದವರನ್ನು ಕರೆತರುವ ವ್ಯವಸ್ಥೆ ಮಾಡಿತ್ತು. ಕೀವ್ ನಿಂದ ಪೋಲ್ಯಾಂಡ್ (Poland) ಬರುವವರೆಗೂ 70 ಮಂದಿ ಭಾರತೀಯ ವಿದ್ಯಾರ್ಥಿಗಳು ಭಾರತದ ದೇಶದ ಬಾವುಟ ಹಿಡಿದು ಬಂದಿದ್ದರಿಂದ ಸುರಕ್ಷಿತವಾಗಿ ನಾವು ಬಾರ್ಡರ್ ತಲುಪಿದೆವು. ಅಲ್ಲಿವರೆಗೂ ಏನು ಆಗುತ್ತೋ ಎಂಬ ಆತಂಕ ಇತ್ತು. ನಂತರ ಭಾರತೀಯ ರಾಯಭಾರಿ ಕಚೇರಿ ನಮ್ಮ ದೇಶಕ್ಕೆ ಬರುವ ಎಲ್ಲಾ ವ್ಯವಸ್ಥೆ ಮಾಡಿತ್ತು. ಯಾವುದೇ ಆತಂಕವಿಲ್ಲದೆ ನಮ್ಮ ದೇಶಕ್ಕೆ ಬಂದಿಳಿದೆವು ಎಂದರು.
ಇದನ್ನೂ ಓದಿ: Scorpion Snake Soup: ಹಾವು ಮತ್ತು ಚೇಳುಗಳಿಂದ ತಯಾರಾಗುತ್ತೆ ಈ ಸೂಪ್, ಇಷ್ಟಪಟ್ಟು ಸೇವಿಸುತ್ತಾರಂತೆ ಜನ
ನಮ್ಮ ದೇಶವಿದೆ ಎಂಬ ಧೈರ್ಯವಿತ್ತು:
ಉಕ್ರೇನ್ ರಾಜಧಾನಿ ಕೀವ್ ನಲ್ಲಿ ನಡೆಯುತ್ತಿದ್ದ ಬಾಂಬ್ ದಾಳಿಯ (Bomb Attack) ಶಬ್ಧಗಳನ್ನು ಕೇಳಿದ್ರೆ ಬದುಕಿ ಹೋಗ್ತಿವಾ ಅನ್ನಿಸುತ್ತಿತ್ತು. ಆದರೆ ನಮಗಾದ್ರೂ ನಮ್ಮ ದೇಶವಿದೆ ಎಂಬ ಧೈರ್ಯವಿತ್ತು. ಆದರೆ ಅಲ್ಲಿ ಜನರ ಪರಿಸ್ಥಿತಿಯಂತು ಬಹಳ ಕಷ್ಟಕರವಾಗಿತ್ತು ಎಂದು ಯುದ್ಧದ ಭೀಕರತೆ ಬಿಚ್ಚಿಟ್ಟರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.