ಕೊಪ್ಪಳ: ಮಾವಿನ ಬೆಳೆ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಯಾಗಿದ್ದು, ಇತ್ತೀಚಿಗೆ ಆಯೋಜಿಸಿದ ಮಾವು ಮೇಳ ಅತ್ಯಂತ ಯಶಸ್ವಿಯಾಗಿ ರಾಜ್ಯಮಟ್ಟದಲ್ಲೂ ಹೆಸರು ಮಾಡಿದೆ. ಜಿಲ್ಲೆಯ ಇನ್ನೊಂದು ಪ್ರಮುಖ ಬೆಳೆಯಾಗಿ "ಪೇರಲ" ಎಂದು ಕರೆಯಲ್ಪಡುವ ಸೀಬೆ ಹೆಚ್ಚು ಜನಪ್ರಿಯವಾಗುತ್ತಿದೆ.


COMMERCIAL BREAK
SCROLL TO CONTINUE READING

ಇದಕ್ಕೆ ಮುಖ್ಯ ಕಾರಣ ಪೇರಲ ಬೆಳೆ ಸಾಧಾರಣ ಮಣ್ಣು ಹಾಗೂ ಕಡಿಮೆ ನೀರಿನಲ್ಲಿಯೂ ಅತ್ಯಂತ ಸಮೃದ್ಧ ಇಳುವರಿ ಕೊಡಬಲ್ಲದಲ್ಲದೇ ಗ್ರಾಹಕರಿಗೂ ಕೂಡ ಹೆಚ್ಚು ಪ್ರಿಯವಾಗಿದೆ. ಇದರಲ್ಲಿನ "ಸಿ" ಜೀವಕೋಶ ಕರೋನ ದಂತಹ ರೋಗದ ನಿರ್ವಹಣೆಗೆ ಸಹಕಾರಿ. ಮಧುಮೇಹಿಗಳಿಗೂ ಕೂಡ ಪೇರಲ ಉತ್ತಮ ಔಷಧಿಯಾಗಿದೆ.ಇಷ್ಟೇ ಅಲ್ಲದೇ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆಹಾರ ಸಂಸ್ಕರಣಾ ಯೋಜನೆ ನಿಯಮಬದ್ದಗೊಳಿಸುವಿಕೆ (ಪಿಎಂಎಫ್ಎಂಇ) ಯೋಜನೆಯಡಿ ಕೊಪ್ಪಳ ಜಿಲ್ಲೆಗೆ "ಒಂದು ಜಿಲ್ಲೆ ಒಂದು ಬೆಳೆ" ಯೋಜನೆಯಡಿ "ಪೇರಲ" ಬೆಳೆ ಆಯ್ಕೆಯಾಗಿರುವದು ಈ ಬೆಳೆಯ ಮಹತ್ವ ತೋರುತ್ತದೆ.


ಇದನ್ನೂ ಓದಿ : Today Vegetable Price: ಇಂದು ತರಕಾರಿ ಹಾಗೂ ಹಣ್ಣಿನ ಬೆಲೆ ಹೀಗಿದೆ ನೋಡಿ..


ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ದ ಸಿಎಂಗೆ ದೂರು :ವರ್ಗಾವಣೆಗೆ ಮನವಿ


ಒಂದೂವರೆ ವರ್ಷದವರೆಗೂ ಉತ್ತಮನೀರು, ಪೋಷಕಾಂಶಗಳ ನಿರ್ವಹಣೆಯಿಂದ 1.5 ವರ್ಷಕ್ಕೆ ಉತ್ತಮ ಗುಣಮಟ್ಟದ ಇಳುವರಿ ಪಡೆದು ಸುಮಾರು ರೂ.3.00 ಲಕ್ಷ ಆದಾಯ ಪಡೆದಿರುತ್ತಾರೆ.ಒಂದು ಎಕರೆಯಿಂದ ಎರಡೇ ವರ್ಷದಲ್ಲಿ ಇನ್ನೊಂದು ಆದಾಯ ಪಡೆದಿರುವುದು ಇದೇ ಮೊದಲು.ನನ್ನ ಹಣ್ಣುಗಳಿಗೆ ಹೊಸಪೇಟೆ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ. ನಿರಂತರವಾಗಿ ನಾನು ಹೊಸಪೇಟೆ ಮಾರುಕಟ್ಟೆಗೆ ಹಣ್ಣುಗಳನ್ನು ಕಳುಹಿಸುತ್ತೇನೆ.ಅಲ್ಲಿ ನನ್ನ ಹಣ್ಣುಗಳಿಗೆ ಉತ್ತಮ ಬೇಡಿಕೆ ಇದೆ. ಇಂದು ನನ್ನ ಈ ಉತ್ತಮ ಸ್ಥಿತಿಗೆ ತೋಟಗಾರಿಕೆ ಅಧಿಕಾರಿಗಳ ಸಲಹೆ, ಸಹಕಾರವೇ ಕಾರಣ. ಅವರ ಮಾರ್ಗದರ್ಶನದಲ್ಲಿ ನನಗೆ ಲಾಭವಾಗಿದೆ. ಅವರಿಗೆಲ್ಲಾ ನಾನು ಋಣಿಯಾಗಿರುತ್ತೇನೆ ಎನ್ನುತ್ತಾರೆ ರೈತ ಹನುಮಂತಪ್ಪ.


ತೋಟಗಾರಿಕೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಪನ್ಮೂಲ ಅಧಿಕಾರಿಗಳು ಇತ್ತೀಚಿಗೆ ಇವರ ತೋಟಕ್ಕೆ ಭೇಟಿ ನೀಡಿ ಉತ್ತಮ ಬೆಳೆ ನೋಡಿ ಶ್ಲಾಘಿಸಿದ್ದಾರೆ.ತೋಟಗಾರಿಕೆ ಉಪನಿರ್ದೇಶಕರು ಕೃಷ್ಣ ಉಕ್ಕುಂದ ಅವರು, ರೈತರು ಕಡಿಮೆ ಖರ್ಚಿನಲ್ಲಿ ಪೇರಲದಂತಹ ಬೆಳೆ ಬೆಳೆದಿದ್ದು, ಉತ್ತಮ ಆದಾಯ ಮಾಡಿಕೊಳ್ಳಬಹುದು. ಇದಕ್ಕಾಗಿ ಇಲಾಖೆಯಲ್ಲಿ ಹಲವಾರು ರೈತ ಪರ ಯೋಜನೆಗಳಿವೆ. ರೈತರು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ