ಬೆಂಗಳೂರು: ವಿದೇಶಿ ಕರೆನ್ಸಿ ಕಳ್ಳ ಸಾಗಣೆ  ಮಾಡುತ್ತಿದ್ದ ವ್ಯಕ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಸೆರೆ ಹಿಡಿಯಲಾಗಿದೆ. 


COMMERCIAL BREAK
SCROLL TO CONTINUE READING

24 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನ ಕಳ್ಳ ಸಾಗಣೆ (smuggling) ಮಾಡಲು ಆರೋಪಿ ಯತ್ನಿಸಿದ್ದ ಎಂದು ತಿಳಿದುಬಂದಿದೆ.


ಜನವರಿ 21 ರಂದು ಮುಂಬೈನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಬಂದ ಪ್ರಯಾಣಿಕ ಇಲ್ಲಿಂದ ದುಬೈಗೆ ಪ್ರಯಾಣಿಸುತ್ತಿದ್ದರು.  


[[{"fid":"227727","view_mode":"default","fields":{"format":"default","field_file_image_alt_text[und][0][value]":"smuggling foreign currency ","field_file_image_title_text[und][0][value]":"ಲಗೇಜ್ ಬ್ಯಾಗ್ "},"type":"media","field_deltas":{"1":{"format":"default","field_file_image_alt_text[und][0][value]":"smuggling foreign currency ","field_file_image_title_text[und][0][value]":"ಲಗೇಜ್ ಬ್ಯಾಗ್ "}},"link_text":false,"attributes":{"alt":"smuggling foreign currency ","title":"ಲಗೇಜ್ ಬ್ಯಾಗ್ ","class":"media-element file-default","data-delta":"1"}}]]


ವಿದೇಶಿ  ಕರೆನ್ಸಿಯನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಮಾಹಿತಿ  ಮೇರೆಗೆ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು  ಪ್ರಯಾಣಿಕನನ್ನ ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ.


ಈ ವೇಳೆ ಲಗೇಜ್ ನಲ್ಲಿ ಮರೆಮಾಚಿ ಇಟ್ಟಿದ್ದ ವಿದೇಶಿ  ಕರೆನ್ಸಿ ದೊರೆತಿದೆ. ಆರೋಪಿಯಿಂದ 24,32,730  ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 


ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.


ಇದನ್ನೂ ಓದಿ: 23-01-2022 Today Gold Price: ಆಭರಣ ಪ್ರಿಯರಿಗೆ ಸಿಹಿ ಸುದ್ದಿ, ಬಂಗಾರದ ಬೆಲೆಯಲ್ಲಿ ಇಳಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.