Gold Smuggling: ಜ್ಯೂಸರ್ ಒಳಗೆ ಚಿನ್ನದ ರಾಡ್..! ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಖದೀಮ

Gold Smuggling: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜ್ಯೂಸರ್‌ನಲ್ಲಿ ಅಡಗಿಸಿಟ್ಟಿದ್ದ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ರಾಡ್‌ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಉತ್ತರ ಪ್ರದೇಶ ವ್ಯಕ್ತಿಯನ್ನು ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ.

Written by - Zee Kannada News Desk | Edited by - Yashaswini V | Last Updated : Dec 23, 2021, 11:48 AM IST
  • ಜ್ಯೂಸರ್ ಯಂತ್ರದೊಳಗೆ ಮರೆಮಾಚಿ ಚಿನ್ನದ ರಾಡ್ ಕಳ್ಳ ಸಾಗಾಣಿಕೆ
  • ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪ್ರಯಾಣಿಕ
  • ಬಂಧಿತನಿಂದ 45 ಲಕ್ಷ ಮೌಲ್ಯದ ಚಿನ್ನ ಜಪ್ತಿ
Gold Smuggling: ಜ್ಯೂಸರ್ ಒಳಗೆ ಚಿನ್ನದ ರಾಡ್..! ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಖದೀಮ  title=
gold rods smuggling Bengaluru airport

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಂಪ್ಯಾಕ್ಟ್ ಮ್ಯಾನ್ಯುವಲ್ ಜ್ಯೂಸರ್‌ನಲ್ಲಿ ಚಿನ್ನದ ರಾಡ್‌ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. 45 ಲಕ್ಷ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಉತ್ತರ ಪ್ರದೇಶದ 33 ವರ್ಷದ ವ್ಯಕ್ತಿಯನ್ನು ಆದಾಯ ತೆರಿಗೆ ವಾಯು ಗುಪ್ತಚರ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ. 

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಬಂಧಿತ ವ್ಯಕ್ತಿ, ಶಾರ್ಜಾದಿಂದ ಬಂದು 930 ಗ್ರಾಂ ಚಿನ್ನವನ್ನು (930 ಗ್ರಾಂ ತೂಕದ 45,81,180 ರೂಪಾಯಿ ಮೌಲ್ಯದ ಚಿನ್ನ) ರಾಡ್‌ಗಳಲ್ಲಿ ಕರಗಿಸಿ ಸಾಗಿಸುತ್ತಿದ್ದರು. ನೀಲಿ ಬಣ್ಣದ ಕಾಂಪ್ಯಾಕ್ಟ್ ಮ್ಯಾನುಯಲ್ ಜ್ಯೂಸರ್‌ನೊಳಗೆ ಚಿನ್ನದ ರಾಡ್‌ಗಳನ್ನು ಮರೆಮಾಡಲಾಗಿತ್ತು. ಅಧಿಕಾರಿಗಳು ಆತನ ಚಲನವಲನ ಅನುಮಾನಾಸ್ಪದವಾಗಿ ಕಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಆ ವ್ಯಕ್ತಿಯ ಬಳಿ ಇದ್ದ ಜ್ಯೂಸರ್ ಅನ್ನು ಪರೀಕ್ಷಿಸಿದಾಗ, ಒಂದು ಸಣ್ಣ ಮತ್ತು ಒಂದು ದೊಡ್ಡ ರಾಡ್‌ಗಳನ್ನು ಜ್ಯೂಸರ್‌ನಲ್ಲಿ ಅಳವಡಿಸಿರುವುದು ಪತ್ತೆಯಾಗಿರುವುದಾಗಿ ವರದಿ ಆಗಿದೆ. ಮಂಗಳವಾರ ಬೆಳಗಿನ ಜಾವ 2:50ಕ್ಕೆ ಏರ್ ಅರೇಬಿಯಾ  ಜಿ9 496  (Air Arabia flight G9 496) ವಿಮಾನದಲ್ಲಿ ಬಂದಿದ್ದ ಈ ಚಿನ್ನ ಕಳ್ಳಸಾಗಣೆ ಯತ್ನ ನಡೆದಿದೆ.

ಇದನ್ನೂ ಓದಿ- ಚಿತ್ರದುರ್ಗ: ಹಗ್ಗದಿಂದ ಕಟ್ಟಿಹಾಕಿ, ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ, ಐವರ ಬಂಧನ

ಚಿನ್ನ ಕಳ್ಳಸಾಗಾಣೆ (Gold Smuggling) ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ. ಕಸ್ಟಮ್ಸ್ ಅಧಿಕಾರಿಗಳು 33 ವರ್ಷದ ವ್ಯಕ್ತಿ ಏಕಾಂಗಿಯಾಗಿ ಈ ಸ್ಮಗ್ಲಿಂಗ್ ಕಾರ್ಯನಿರ್ವಹಿಸುತ್ತಿದ್ದಾರೋ ಅಥವಾ ದೊಡ್ಡ ಕಳ್ಳಸಾಗಣೆ ಗುಂಪಿನ ಭಾಗವಾಗಿದ್ದಾರೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಶಂಕಿತನನ್ನು ಕಸ್ಟಮ್ಸ್ ಸುಂಕ ವಂಚನೆ ಮತ್ತು ಚಿನ್ನದ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- ಧಾರವಾಡ ಜಿಲ್ಲಾ ಗೃಹ ರಕ್ಷಕ ದಳದ ಗೌರವ ಸಮಾದೇಷ್ಟರ ಹುದ್ದೆಗೆ ಜಿಲ್ಲಾಧಿಕಾರಿಗಳಿಂದ ಅರ್ಜಿ ಆಹ್ವಾನ

ಸೆಪ್ಟೆಂಬರ್‌ನಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಕಸ್ಟಮ್ಸ್ ಅಧಿಕಾರಿಗಳು, ಸುಳಿವಿನ ಮೇರೆಗೆ, ದುಬೈನಿಂದ ಬರುತ್ತಿದ್ದ ಇಂಡಿಗೋ ವಿಮಾನದ ಪ್ರಯಾಣಿಕನನ್ನು ಸುಮಾರು 61 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ಬಂಧಿಸಿದ್ದಾರೆ. ಪ್ರಯಾಣಿಕನು ತನ್ನ ಸೀಟಿನ ಕೆಳಗೆ ಸರಕುಗಳನ್ನು ಮರೆಮಾಡಿದ್ದನು. ಪ್ಯಾಕೆಟ್ ಅನ್ನು ತೆರೆದಾಗ, ಅಧಿಕಾರಿಗಳು ಸುಮಾರು 29 ಚಿನ್ನದ ಪೇಸ್ಟ್ ಮತ್ತು ಚಿನ್ನದ ತುಂಡುಗಳನ್ನು ಪತ್ತೆ ಮಾಡಿದ್ದರು. ಪ್ಯಾಕೆಟ್‌ನಲ್ಲಿ ಸುಮಾರು 600 ಗ್ರಾಂ ಚಿನ್ನದ ಕಡ್ಡಿಗಳು ಮತ್ತು ಸುಮಾರು 700 ಗ್ರಾಂ ಚಿನ್ನದ ಪೇಸ್ಟ್ ಪತ್ತೆಯಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News