`ಆರೋಗ್ಯ ಸಚಿವ ಸುಧಾಕರ್ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ`
ಬಯೋ ಕೆಮಿಸ್ಟ್ರಿ ಮತ್ತು ಹೆಮಟೋಲಜಿ ಉಪಕರಣಗಳ ಗುತ್ತಿಗೆಯನ್ನು ಸಚಿವರ ಆಪ್ತ ಕಂಪನಿಗೆ ನೀಡಲಾಗಿದೆ. ದಿನಾಂಕ 23.09.2020 ರಂದು ನೀಡಲಾದ ಕೊಟ್ಟಿರುವ ಟೆಂಡರ್‌ನಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದರು.
ಬೆಂಗಳೂರು: ಆರೋಗ್ಯ ಸಚಿವ ಡಾ.ಸುಧಾಕರ್ ಅವರ ಭ್ರಷ್ಟಾಚಾರದ ಕುರಿತು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿಕೆ ಸತ್ಯ. ಆಮ್ ಆದ್ಮಿ ಪಕ್ಷ ಒಂದು ವರ್ಷದ ಹಿಂದೆಯೇ ಇದನ್ನು ದಾಖಲೆ ಸಹಿತ ಬಿಡುಗಡೆ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಚಿವ ಸುಧಾಕರ್ ತಕ್ಷಣ ರಾಜೀನಾಮೆ ನೀಡಬೇಕು. ಪ್ರಕರಣಗಳ ಕುರಿತು ಸಂಪೂರ್ಣ ನ್ಯಾಯಾಂಗ ತನಿಖೆಯಾಗಬೇಕು ಎಂದು ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಸುದ್ದಿಗೋಷ್ಟಿ ನಡೆಸಿ ತಿಳಿಸಿದರು.
ಇದನ್ನು ಓದಿ: KGF-2 ಸಿನಿಮಾಗೂ ತಟ್ಟಿದ ʼಪೈರಸಿʼ ಬಿಸಿ : ತಮಿಳ್ ರಾಕರ್ಸ್‌ನಲ್ಲಿ ಲೀಕ್
ಬಯೋ ಕೆಮಿಸ್ಟ್ರಿ ಮತ್ತು ಹೆಮಟೋಲಜಿ ಉಪಕರಣಗಳ ಗುತ್ತಿಗೆಯನ್ನು ಸಚಿವರ ಆಪ್ತ ಕಂಪನಿಗೆ ನೀಡಲಾಗಿದೆ. ದಿನಾಂಕ 23.09.2020 ರಂದು ನೀಡಲಾದ ಕೊಟ್ಟಿರುವ ಟೆಂಡರ್‌ನಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದರು.
“ಒಂದು ಅಲ್ಪಾವಧಿ ಗುತ್ತಿಗೆಯನ್ನು ರದ್ದು ಮಾಡಿ ರೀಟೆಂಡರ್ ಮಾಡುವಾಗ, ಟೆಂಡರ್ ಸ್ಪೆಸಿಫಿಕೇಶನ್ ಬದಲಿಸಲು ಅವಕಾಶವಿಲ್ಲ. ಆದರೂ ಬದಲಾವಣೆ ಮಾಡಿದ್ದಾರೆ. ಟೆಂಡರ್‌ನಲ್ಲಿ ಕೇವಲ ಒಂದೇ ಬಿಡ್ ಬಂದಿದ್ದರೂ ಅದನ್ನು ಆಯ್ಕೆ ಸಮಿತಿ ಹೇಗೆ ಪರಿಗಣಿಸಿದೆ. ಸಿಸ್ಮೆಕ್ಸ್ ಎಂಬ ಕಂಪನಿಯಿಂದ ತ್ರೀ ಪಾರ್ಟ್ ಹೆಮಟಾಲಜಿ ಸೆಲ್ ಕೌಂಟರ್ ಉಪಕರಣವನ್ನು ದೆಹಲಿ ಸರ್ಕಾರವು 1,80,540 ರೂಪಾಯಿಗೆ, ಹಿಮಾಚಲ ಪ್ರದೇಶ ಸರ್ಕಾರವು 1,30,000 ರೂಪಾಯಿಗೆ ಮತ್ತು ದೆಹಲಿಯ ಮುನಿಸಿಪಾಲಿಟಿ 1,44,000 ರೂಪಾಯಿಗೆ ಖರೀದಿಸಿದೆ. ಆದರೆ ಕರ್ನಾಟಕ ಸರ್ಕಾರವು ಅದೇ ಉಪಕರಣಕ್ಕೆ ಬರೋಬ್ಬರಿ 2,96,180 ರೂಪಾಯಿ ನೀಡಿ ಖರೀದಿಸಿದೆ. ಒಟ್ಟು 1195 ಉಪಕರಣ ಖರೀದಿಸಲು 19.85 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ ಎಂದರು.
ಇದನ್ನು ಓದಿ: ‘ಪ್ರಧಾನ್‌ಮಂತ್ರಿ ಸಂಗ್ರಹಾಲಯ‘ ಉದ್ಘಾಟಿಸಿದ ಪ್ರಧಾನಿ ಮೋದಿ
ಅದೇ ರೀತಿ ಫೈವ್ ಪಾರ್ಟ್ ಹೆಮಟಾಲಜಿ ಸೆಲ್ ಕೌಂಟರ್‌ಗಳನ್ನು ಸಿಸ್ಮೆಕ್ಸ್ ಕಂಪನಿಯು ಕೇರಳ ಸರ್ಕಾರಕ್ಕೆ 4.60 ಲಕ್ಷ ರೂಪಾಯಿಗೆ ನೀಡಿದೆ. ಆದರೆ ಕರ್ನಾಟಕ ಸರ್ಕಾರವು ಅದೇ ಕಂಪನಿಯಿಂದ 8.35 ಲಕ್ಷ ರೂಪಾಯಿಯಂತೆ ಖರೀದಿಸಿದೆ. ಒಟ್ಟು 165 ಈ ಉಪಕರಣಗಳ ಖರೀದಿಯಿಂದಾಗಿ 6.18 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಿದೆ ಎಂದು ಮೋಹನ್ ದಾಸರಿ ಆರೋಪಿಸಿದರು.
ಎಎಪಿಯ ಬೆಂಗಳೂರು ನಗರ ಉಪಾಧ್ಯಕ್ಷರಾದ ಸುರೇಶ್ ರಾಥೋಡ್ ಮಾತನಾಡಿ, “ಸುಧಾಕರ್‌ರವರು ರಾಜ್ಯ ಸಚಿವ ಸಂಪುಟದಲ್ಲಿರುವ ಅತಿ ಭ್ರಷ್ಟ ಸಚಿವ. ಮಾಧ್ಯಮಗಳಲ್ಲೂ ಆರೋಗ್ಯ ಇಲಾಖೆಯ ಸಾಲುಸಾಲು ಹಗರಣಗಳು ವರದಿಯಾಗುತ್ತಿವೆ. ಆದರೂ ಅವರ ವಿರುದ್ಧ ಮುಖ್ಯಮಂತ್ರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ದುರಂತ” ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.