ಡಿಕೆ ಶಿವಕುಮಾರ್‌- ಸುರ್ಜೇವಾಲ ಪೊಲೀಸರ ವಶಕ್ಕೆ!

ಕಾಂಗ್ರೆಸ್ ನಾಯಕರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ ನಡೆಸಿದಾಗ, ಮಾರ್ಗಮಧ್ಯೆಯೇ ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಬ್ಯಾರಿಕೇಡ್ ಹತ್ತಿ ಕೆಳಗೆ ಎಗರಿದ ಡಿಕೆಶಿ ಹಾಗೂ ಸುರ್ಜೆವಾಲರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Written by - Prashobh Devanahalli | Last Updated : Apr 14, 2022, 01:48 PM IST
  • ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್‌ ಪ್ರತಿಭಟನೆ
  • ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ
  • ಡಿಕೆಶಿ ಹಾಗೂ ಸುರ್ಜೆವಾಲ ಪೊಲೀಸರ ವಶಕ್ಕೆ
ಡಿಕೆ ಶಿವಕುಮಾರ್‌- ಸುರ್ಜೇವಾಲ ಪೊಲೀಸರ ವಶಕ್ಕೆ!  title=
Congress Protest

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇತರ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಂಗ್ರೆಸ್ ನಾಯಕರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ ನಡೆಸಿದಾಗ, ಮಾರ್ಗಮಧ್ಯೆಯೇ ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಬ್ಯಾರಿಕೇಡ್ ಹತ್ತಿ ಕೆಳಗೆ ಎಗರಿದ ಡಿಕೆಶಿ ಹಾಗೂ ಸುರ್ಜೆವಾಲರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಇದನ್ನು ಓದಿ: 40% ಕಮಿಷನ್ ನಲ್ಲಿ ಸಿಎಂ ಬೊಮ್ಮಾಯಿ ಪಾಲುದಾರರಾ?- ಬಿ ಕೆ ಹರಿಪ್ರಸಾದ್ ವಾಗ್ದಾಳಿ

ಪ್ರತಿಭಟನೆಗೂ ಮುನ್ನ ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, "ತನಿಖೆ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಸಾಕ್ಷಿ ಇದೆ. ಡೆತ್ ನೋಟ್ ಇದೆ. ಕೂಡಲೇ ಈಶ್ವರಪ್ಪರನ್ನು ಅರೆಸ್ಟ್ ಮಾಡಬೇಕು" ಎಂದು ಆಗ್ರಹಿಸಿದರು.

"ಬಿಜೆಪಿ ಸರ್ಕಾರದ ಹಿರಿಯ ಮಂತ್ರಿ ಈಶ್ವರಪ್ಪ, ಸಂತೋಷ ಪಾಟೀಲ್ ಸಾವಿಗೆ ಕಾರಣವಾಗಿದ್ದಾರೆ. ಈಶ್ವರಪ್ಪ ಅವರೇ ತನ್ನ ಸಾವಿಗೆ ಕಾರಣ ಎಂದು ಸಂತೋಷ್‌ ಸ್ಪಷ್ಟವಾಗಿ ಹೇಳಿದ್ದಾರೆ.  ಮೃತರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ. ಈಶ್ವರಪ್ಪ ಕಿರುಕುಳದಿಂದ ಸಂತೋಷ್‌ ಸಾವಿಗೆ ಶರಣಾಗಿದ್ದಾರೆ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ" ಎಂದು ಆರೋಪಿಸಿದರು. 

"ನಾಲ್ಕು ಕೋಟಿ ಕಾಮಗಾರಿ ಮಾಡಿದ್ದಾರೆ. ಅದಕ್ಕೆ ಈಶ್ವರಪ್ಪ ಶೇ.40 ಕಮಿಷನ್ ಕೇಳಿದ್ದಾರೆ. ಇದರ ಬಗ್ಗೆ ಸಂತೋಷ್‌ ಹೆಂಡತಿ, ತಾಯಿಗೂ ಗೊತ್ತಿತ್ತು. ಒಡವೆಗಳನ್ನು ಅಡವಿಟ್ಟು, ಸಾಲ ಮಾಡಿ ಹಣ ನೀಡಿದ್ದಾರೆ. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಅದನ್ನು ಕೊಡಲು ಸಂತೋಷ್‌ ಕುಟುಂಬಕ್ಕೆ ಸಾಧ್ಯವಾಗಿಲ್ಲ" ಎಂದು ಆರೋಪಿಸಿದ್ದಾರೆ. 

ಇದನ್ನು ಓದಿ: ಸಂತೋಷ್ ಆತ್ಮಹತ್ಯೆ ಪ್ರಕರಣ; ಈಶ್ವರಪ್ಪ ಬಂಧನಕ್ಕೆ ಕಾಂಗ್ರೆಸ್ ಅಗ್ರಹ

"ಸಂತೋಷ್‌ ಕುಟುಂಬಕ್ಕೆ ಒಂದು ಕೋಟಿ ಹಣ ಪರಿಹಾರ ಕೊಡಬೇಕು. ಅವರ ಪತ್ನಿಗೆ ಕೆಲಸ ಕೊಡಬೇಕು. ಕಾಮಗಾರಿ ಬಾಕಿ ಹಣ ಕೂಡ ಬಿಡುಗಡೆ ಮಾಡಬೇಕು. ಕಾಂಗ್ರೆಸ್ ಪಕ್ಷದಿಂದ ಹನ್ನೊಂದು ಲಕ್ಷ ಕೊಟ್ಟಿದ್ದೇವೆ. ಅದು ಸಣ್ಣ ಹಣ. ಉಳಿದಿದ್ದು ಸರ್ಕಾರ ಪರಿಹಾರ ನೀಡಬೇಕು. ಈಶ್ವರಪ್ಪ ಬಂಧನ ಆಗಬೇಕು. ಭ್ರಷ್ಟಾಚಾರದ ಅಡಿ ಕೇಸ್ ದಾಖಲಿಸಬೇಕು. ಇದು ಕೊಲೆ ಕೇಸ್ ಕೂಡ ಆಗುತ್ತದೆ. ಈಶ್ವರಪ್ಪ ಲಂಚ ಕೇಳಿದ್ದಕ್ಕೆ ಸುಸೈಡ್ ಮಾಡಿಕೊಂಡಿದ್ದಾರೆ. ಈಶ್ವರಪ್ಪ ಅವರಿಗೆ ಹಣ ನೀಡಲು ಸಾಲ ಮಾಡಿದ್ದರು. ಸಿಎಂ ಕೂಡ ಈಶ್ವರಪ್ಪ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಸಿಎಂ ಮೇಲೂ ಆರೋಪಗಳು ಇದ್ದಾವೆ. ಈ ಪ್ರಕರಣದಲ್ಲಿ ಸಿಎಂ ಕೂಡ ಭಾಗಿಯಾಗಿದ್ದಾರೆ" ಎಂದು ಆರೋಪಿಸಿದರು.

ಈಶ್ವರಪ್ಪ ಅಧಿಕಾರದಲ್ಲಿ ಇದ್ದರೆ ತನಿಖೆ ಸರಿಯಾಗಿ ಆಗಲ್ಲ. ಹೈಕೋರ್ಟ್ ಅಡಿಯಲ್ಲಿ ತನಿಖೆಯಾಗಬೇಕು. ಸಿಎಂ ವಿರುದ್ಧ ಇವತ್ತು ಘೇರಾವ್ ಹಾಕುತ್ತಿದ್ದೇವೆ. ನಾಳೆಯಿಂದ ಐದು ದಿನ ಹೋರಾಟ ಜಿಲ್ಲಾವಾರು ಮಾಡುತ್ತೇವೆ ಎಂದು ಕಾಂಗ್ರೆಸ್ ಮುಂದಿನ ಹೋರಾಟದ ಬಗ್ಗೆ ವಿವರಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News