KGF-2 ಸಿನಿಮಾಗೂ ತಟ್ಟಿದ ʼಪೈರಸಿʼ ಬಿಸಿ : ತಮಿಳ್‌ ರಾಕರ್ಸ್‌ನಲ್ಲಿ ಲೀಕ್‌

ಪೈರಸಿ ಭೂತ ಕನ್ನಡ ಸಿನಿಮಾವನ್ನು ಕಾಡುತ್ತಿದ್ದು, ದುರದೃಷ್ಟವಶಾತ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಕೆಜಿಎಫ್ ಚಾಪ್ಟರ್ 2 ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಹೆಚ್‌ಡಿ ಕ್ವಾಲಿಟಿಯಲ್ಲಿ KGF- 2 ಸಿನಿಮಾವು ಹಲವಾರು ಟೊರೆಂಟ್ ಸೈಟ್‌ಗಳಲ್ಲಿ ಲೀಕ್ ಆಗಿದೆ.  

Written by - Bhavishya Shetty | Last Updated : Apr 14, 2022, 02:40 PM IST
  • KGF-2 ಸಿನಿಮಾಗೂ ಪೈರಸಿ ಭೀತಿ
  • ಹಲವಾರು ಟೊರೆಂಟ್ ಸೈಟ್‌ಗಳಲ್ಲಿ ಸಿನಿಮಾ ಲೀಕ್‌
  • ಪೈರಸಿ ವಿರುದ್ಧ ಸಮರ ಸಾರಿದ್ದ ಪ್ರಶಾಂತ್‌ ನೀಲ್‌
KGF-2 ಸಿನಿಮಾಗೂ ತಟ್ಟಿದ ʼಪೈರಸಿʼ ಬಿಸಿ : ತಮಿಳ್‌ ರಾಕರ್ಸ್‌ನಲ್ಲಿ ಲೀಕ್‌  title=
KGF Chapter 2 leak

ಬೆಂಗಳೂರು: ಹೊಂಬಾಳೆ ಫಿಲಂಸ್‌ ಅಡಿಯಲ್ಲಿ, ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಮೂಡಿಬಂದ ರಾಕಿಂಗ್‌ ಸ್ಟಾರ್‌ ಅಭಿನಯದ ಕೆಜಿಎಫ್‌-2 ಸಿನಿಮಾ ಇಂದು ಜಗತ್ತಿನಾದ್ಯಂತ ಗ್ರ್ಯಾಂಡ್‌ ರಿಲೀಸ್‌ ಆಗಿದೆ. ಆದರೆ ಈ ಸಿನಿಮಾದ ಮೇಲೆ ಪೈರಸಿ ಕಣ್ಣು ಬಿದ್ದಿದ್ದು, ತಮಿಳ್‌ ರಾಕರ್ಸ್‌ ಸೈಟ್‌ನಲ್ಲಿ ಸಿನಿಮಾ ಲೀಕ್‌ ಆಗಿದೆ. 

ಇದನ್ನು ಓದಿ: KGF 3: ಕೆಜಿಎಫ್‌ 2 ಬಳಿಕ ಬರಲಿದ್ಯಾ ಕೆಜಿಎಫ್ 3! ಚಿತ್ರದ ಕೊನೆಯಲ್ಲಿ ಟ್ವಿಸ್ಟ್‌ ಬಿಚ್ಚಿಟ್ಟ ಗುಟ್ಟೇನು?

ಪೈರಸಿ ಭೂತ ಕನ್ನಡ ಸಿನಿಮಾವನ್ನು ಕಾಡುತ್ತಿದ್ದು, ದುರದೃಷ್ಟವಶಾತ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಕೆಜಿಎಫ್ ಚಾಪ್ಟರ್ 2 ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಹೆಚ್‌ಡಿ ಕ್ವಾಲಿಟಿಯಲ್ಲಿ KGF- 2 ಸಿನಿಮಾವು ಹಲವಾರು ಟೊರೆಂಟ್ ಸೈಟ್‌ಗಳಲ್ಲಿ ಲೀಕ್ ಆಗಿದೆ.  

ಪೈರಸಿ ವಿರುದ್ಧ ಸಮರ ಸಾರಿದ್ದ ನೀಲ್‌: 
ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳಿರುವಾಗ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದ ನಿರ್ದೇಶಕ ಪ್ರಶಾಂತ್‌ ನೀಲ್‌ ಪೈರಸಿ ವಿರುದ್ಧ ಸಮರಸಾರಿದ್ದರು. 'ಪೈರಸಿ ವಿರುದ್ಧದ ಹೋರಾಟ ನಿಮ್ಮಿಂದ ಪ್ರಾರಂಭವಾಗುತ್ತದೆ. ದಯವಿಟ್ಟು ವೀಡಿಯೊ & ಫೋಟೋ ತೆಗೆದುಕೊಳ್ಳಬೇಡಿ ಮತ್ತು ಅವುಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಬೇಡಿ!' ಎಂದಿದ್ದರು. ಆದರೆ ಇದೀಗ ತಮಿಳ್‌ ರಾಕರ್ಸ್‌ ಸೇರಿದಂತೆ ಅನೇಕ ಟೊರೆಂಟ್ ಸೈಟ್‌ಗಳಲ್ಲಿ ಲೀಕ್ ಆಗಿದೆ.  

 

 

ಇದನ್ನು ಓದಿ: KGF 2: ಕೇರಳದಲ್ಲಿ ಚಿಂಗಾರಿ ಮೇಳದ ಮೂಲಕ ರಾಕಿಭಾಯ್‌ಗೆ ಸ್ವಾಗತ ಕೋರಿದ ಫ್ಯಾನ್ಸ್‌!

ಕನ್ನಡ ಸಿನಿಮಾಗಳಿಗೆ ಪೈರಸಿ ಭೂತ ಎಂಬುದೇ ದೊಡ್ಡ ತೊಡಕಾಗಿದೆ. ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಕರ್ನಾಟಕ ರತ್ನ, ಕನ್ನಡಿಗರ ಪಾಲಿನ ಪ್ರೀತಿಯ 'ಅಪ್ಪು' ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಕೊನೆಯ ಸಿನಿಮಾ 'ಜೇಮ್ಸ್'‌ ಚಿತ್ರಕ್ಕೂ ಇದೇ ರೀತಿ ಪೈರಸಿ ಕಾಟ ಕೊಟ್ಟಿತ್ತು. ಅಭಿಮಾನಿಗಳು ಕೂಡ ಪೈರಸಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಸದ್ಯ 'ಕೆಜಿಎಫ್‌-2' ಸಿನಿಮಾಗೂ ಪೈರಸಿ ಬಿಸಿ ತಟ್ಟಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News