ಎಸಿಬಿ ಮುಂದೆ ವಿಚಾರಣೆಗೆ ಹಾಜರಾದ ಶಾಸಕ ಜಮೀರ್
ಇಡಿ ದಾಖಲಿಸಿದ ಇಸಿಐಆರ್ ತನಿಖೆಯಲ್ಲಿ ಜಮೀರ್ ಅಹಮದ್ ಸಾರ್ವಜನಿಕ ಸೇವಕರಾಗಿದ್ದು, 2005 ರಿಂದ ಆಗಸ್ಟ್ 5, 2021ರ ಅವಧಿಯಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದು ಈ ವೇಳೆ ಅಪಾರ ಪ್ರಮಾಣದ ಆಸ್ತಿ ಗಳಿಸಿರುವ ಅಂಶ ಬೆಳಕಿಗೆ ಬಂದಿದೆ.
ಬೆಂಗಳೂರು: ಶಾಸಕ ಜಮೀರ್ ಅಹಮದ್ ಗೆ ಎಸಿಬಿ ಬುಲಾವ್ ಹಿನ್ನೆಲೆ ಎಸಿಬಿ ಕಚೇರಿಗೆ ಜಮೀರ್ ವಿಚಾರಣೆಗೆ ಹಾಜರಾಗಿದ್ದಾರೆ. ಎಸಿಬಿ ದಾಳಿ ವೇಳೆ ಅಸಮತೋಲನ ಆಸ್ತಿ ಗಳಿಕೆ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟೀಸ್ ನೀಡಿ10 ದಿನದ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಪಿಎಂಎಲ್ಎ ಕಾಯ್ದೆ ಅನ್ವಯ ಇಡಿ ಕೊಟ್ಟ ಮಾಹಿತಿ ಮೇರೆಗೆ ದೂರು ದಾಖಲಾಗಿತ್ತು.
ಇಡಿ ದಾಖಲಿಸಿದ ಇಸಿಐಆರ್ ತನಿಖೆಯಲ್ಲಿ ಜಮೀರ್ ಅಹಮದ್ ಸಾರ್ವಜನಿಕ ಸೇವಕರಾಗಿದ್ದು, 2005 ರಿಂದ ಆಗಸ್ಟ್ 5, 2021ರ ಅವಧಿಯಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದು ಈ ವೇಳೆ ಅಪಾರ ಪ್ರಮಾಣದ ಆಸ್ತಿ ಗಳಿಸಿರುವ ಅಂಶ ಬೆಳಕಿಗೆ ಬಂದಿದೆ.
ಇದನ್ನೂ ಓದಿ - ಕಾಂಗ್ರೆಸ್ನ ‘ರಾಹು’ ಕಾಲದಲ್ಲಿ ಅಧಿಕಾರಕ್ಕಾಗಿ ಬರೇ ಕಿತ್ತಾಟ!: ಬಿಜೆಪಿ ಟೀಕೆ
ಜಾರಿ ನಿರ್ದೇಶನಾಲಯ ನೀಡಿದ ಮಾಹಿತಿಯ ಪ್ರಕಾರ ಜಮೀರ್ ಒಟ್ಟು ಆಸ್ತಿ-73,94,36,027
ಆದಾಯ-4,30,48,790, ವೆಚ್ಚ-17,80,18,000 ಹಾಗೂ ಆದಾಯಕ್ಕಿಂತ 87,44,05,057 ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖವಾಗಿತ್ತು. ಜಮೀರ್ 20 ಗುಂಟೆ ಜಾಗದಲ್ಲಿ ಅಂದಾಜು 80 ಕೋಟಿಯ ಭವ್ಯ ಬಂಗಲೆ ನಿರ್ಮಿಸಿದ್ದಾರೆ.
ಇದನ್ನೂ ಓದಿ - ತಂದೆ ಸಿಎಂ ಆಗ್ಬೇಕು, ನಾನು ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಲ್ಲ: ನಿಖಿಲ್ ಕುಮಾರಸ್ವಾಮಿ!
ಮನೆ ನಿರ್ಮಾಣಕ್ಕೆ ಬಳಸಿರುವ ಶ್ವೇತ ಶಿಲೆ, ಅರೆಬಿಕ್ ಶೈಲಿಯಲ್ಲಿ ಮನೆಯ ನಿರ್ಮಾಣ ಇಟಾಲಿಯನ್ ಮಾರ್ಬಲ್ಸ್, ಸ್ಯಾಂಡ್ ವಿಚ್ ಗಾಜುಗಳ ಬಳಸಲಾಗಿದ್ದು ಟೀಕ್ ವುಡ್ ಕಿಟಿಕಿ ಮತ್ತು ಬಾಗಿಲುಗಳ ನಿರ್ಮಾಣ ವೈಭವಪೂರಿತ ಸೀಲಿಂಗ್ ಲೈಟ್ ಗಳ ಅಳವಡಿಕೆ ಮಾಡಿರುವುದಕ್ಕೆ ಎಸಿಬಿ ಬಿಲ್ ಕೇಳಿದೆ. ಇದರ ಜೊತೆಗೆ 87,44,05,057 ರೂಪಾಯಿ ಮೂಲದ ದಾಖಲೆ ಕೇಳಿದೆ.ಜೊತೆಗೆ ನ್ಯಾಷನಲ್ ಟ್ರಾವೆಲ್ಸ್ ನ ಆದಾಯದ ಮೊತ್ತ ಮಾಹಿತಿ ನೀಡುವಂತೆ ಜಮೀರ್ ಗೆ ಕೇಳಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.