ಹಳ್ಳ ದಾಟಲು ಹಗ್ಗವೇ ಆಸರೆ, ಮಕ್ಕಳಿಗೆ ಪಾಲಕರ ಹೆಗಲೇ ಗಟ್ಟಿ!

ಕಳೆದ 3 ದಶಕಗಳಿಂದ ಈ ಗ್ರಾಮದ ಜನ ಸೇತುವೆ ಬೇಡಿಕೆ ಈಡೇರದೇ ಪ್ರಾಣಭಯದಲ್ಲೇ ಹಳ್ಳ ದಾಟಬೇಕಾದ ಪರಿಸ್ಥಿತಿ ಪ್ರತಿಬಾರಿಯ ಜೋರು ಮಳೆ ಉಂಟು ಮಾಡುತ್ತಿದೆ.

Written by - Zee Kannada News Desk | Last Updated : Aug 5, 2022, 09:13 PM IST
  • ಜಿಲ್ಲೆಯ ಹನೂರು ತಾಲೂಕಿನ‌ ಪುಟ್ಟೇಗೌಡನದೊಡ್ಡಿ ಗ್ರಾಮ
  • ಶಾಲಾ ಮಕ್ಕಳಂತೂ ಪಾಲಕರ ಹೆಗಲೇರಿ ಭೋರ್ಗರೆಯುವ ನೀರು
  • ಕಳೆದ 5-6 ದಿನಗಳಿಂದ ಸುರಿಯುತ್ತಿರುವ ಜೋರು ಮಳೆ
ಹಳ್ಳ ದಾಟಲು ಹಗ್ಗವೇ ಆಸರೆ, ಮಕ್ಕಳಿಗೆ ಪಾಲಕರ ಹೆಗಲೇ ಗಟ್ಟಿ! title=

ಚಾಮರಾಜನಗರ : ಮಳೆ ಬಂದಾಗಲೆಲ್ಲಾ ಜಿಲ್ಲೆಯ ಹನೂರು ತಾಲೂಕಿನ‌ ಪುಟ್ಟೇಗೌಡನದೊಡ್ಡಿ ಗ್ರಾಮಸ್ಥರು ಹಗ್ಗ ಹುಡುಕಾಡುತ್ತಾರೆ, ಶಾಲಾ ಮಕ್ಕಳಂತೂ ಪಾಲಕರ ಹೆಗಲೇರಿ ಭೋರ್ಗರೆಯುವ ನೀರು ಕಂಡು ಭಯಗೊಳ್ಳುತ್ತಾರೆ. ಯಾಕಂದ್ರೆ, ಕಳೆದ 3 ದಶಕಗಳಿಂದ ಈ ಗ್ರಾಮದ ಜನ ಸೇತುವೆ ಬೇಡಿಕೆ ಈಡೇರದೇ ಪ್ರಾಣಭಯದಲ್ಲೇ ಹಳ್ಳ ದಾಟಬೇಕಾದ ಪರಿಸ್ಥಿತಿ ಪ್ರತಿಬಾರಿಯ ಜೋರು ಮಳೆ ಉಂಟು ಮಾಡುತ್ತಿದೆ.

ಹನೂರಿನ ಕಟ್ಟಕಡೆಯ ಗ್ರಾಮವಾದ ಮೀಣ್ಯಂ ಸಮೀಪದ ಹಳ್ಳದಾಚೆ ಇರುವ ಪುಟ್ಟೇಗೌಡನದೊಡ್ಡಿಯಲ್ಲಿ ಸರಿಸುಮಾರು 100 ಮನೆಗಳಿದ್ದು 600 ಎಕರೆಯಷ್ಟು ಕೃಷಿ ಭೂಮಿ ಹೊಂದಿದೆ. ಶಾಲೆ, ಆಸ್ಪತ್ರೆ, ದಿನಸಿ ಏನೆ ಬೇಕೆಂದರೂ ಮೀಣ್ಯಂಗೆ ಇಲ್ಲಿನ ಗ್ರಾಮಸ್ಥರು 100 ಅಡಿ ಉದ್ದದ ಹಳ್ಳ ದಾಟಿ  ಬರಬೇಕಿದ್ದು ಜೋರು ಮಳೆ ಬಂದ ವೇಳೆ ಹಳ್ಳದಲ್ಲಿ ಜೀವ ಬಾಯಿಗೆ ಬಂದಂತಾಗುತ್ತದೆ.

ಇದನ್ನೂ ಓದಿ : ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ವರುಣನ ಆರ್ಭಟ : ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಕಳೆದ  5-6 ದಿನಗಳಿಂದ ಸುರಿಯುತ್ತಿರುವ ಜೋರು ಮಳೆಗೆ ಹಳ್ಳ ರಭಸದಿಂದ ಹರಿಯುತ್ತಿದ್ದು ಮರಗಿಡಗಳನ್ನು ಹೊತ್ತು ತರುತ್ತಿದೆ. ಹಳ್ಳ ದಾಟಬೇಕಾದಾಗ ಮರ ಬಂದರೇ ಅವನ ಕಥೆ ಮುಗಿದಂತೆಯೇ., ಹಳ್ಳದ ಎರಡು ಬದಿಯಲ್ಲಿ ಹಗ್ಗ ಹಿಡಿದು ಯುವಕರು ನಿಂತು ಹಳ್ಳ ದಾಟಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳನ್ನು ಹೆಗಲ ಮೇಲೆ ಹೊತ್ತು ಶಾಲೆಗಳಿಗೆ ತಲುಪಿಸಬೇಕಿದೆ, ರೋಗಿ‌ ಮಹಿಳೆಯನ್ನು ಹೆಗಲ ಮೇಲೆ ಹಗ್ಗ ಹಿಡಿದು ದಾಟಿಸಿದ್ದೇವೆ ಗ್ರಾಮದ ಮಾದೇಶ್ ಹೇಳಿದ್ದಾರೆ.

ಇನ್ನಾದರೂ ಗ್ರಾಮಕ್ಕೆ ಸೇತುವೆ ನಿರ್ಮಿಸಿ ಇಲ್ಲವೇ ತಾತ್ಕಾಲಿಕ ಪರಿಹಾರ ಒದಗಿಸಬಹುದಾದ ಕ್ರಮಗಳನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಬೇಕಿದೆ. ಒಂದು ಮಳೆಗೆ ಈ ಪರಿ ಅವಾಂತರ ವಾರದ ಭವಿಷ್ಯದಲ್ಲಿ ಮಳೆ ಹೆಚ್ಚಾದಷ್ಟು ಅನಾಹುತ ಕಟ್ಟಿಟ್ಟ ಬುತ್ತಿ ಆಗಲಿದೆ.

ಇದನ್ನೂ ಓದಿ : Navyashree : ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವ ಆಸೆ ಬಿಚ್ಚಿಟ್ಟ ನವ್ಯಶ್ರೀ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News