details of accidents in 2024: ರಾಜಧಾನಿ ಬೆಂಗಳೂರಿನಲ್ಲಿ ಕಳೆದ 2 ವರ್ಷಗಳಿಗೆ ಹೋಲಿಸಿದರೆ 2024ರಲ್ಲಿ ಸಂಭವಿಸಿರುವ ಅಪಘಾತಗಳ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆಯ ವಾರ್ಷಿಕ ಅಂಕಿ ಅಂಶಗಳ ಪ್ರಕಾರ 2024ರಲ್ಲಿ (ಡಿಸೆಂಬರ್‌ 18ರವರೆಗಿನ ಅಂಕಿ ಅಂಶ) ನಗರದಲ್ಲಿ 824 ಗಂಭೀರ ಅಪಘಾತ ಪ್ರಕರಣಗಳು ವರದಿಯಾಗಿದ್ದು 845 ಜನ ಸಾವನ್ನಪ್ಪಿದ್ದಾರೆ. 3778 ಗಂಭೀರ ಸ್ವರೂಪವಲ್ಲದ ಅಪಘಾತಗಳು ಸಂಭವಿಸಿದ್ದು 3885 ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗ್ಯಾಸ್‌ನಲ್ಲಿಟ್ಟ ಹಾಲು ಉಕ್ಕಿ ಚೆಲ್ಲುತ್ತಿದ್ಯಾ? ಹಾಗಾದ್ರೆ ಹೀಗೆ ಮಾಡಿ


ಕಳೆದ ಮೂರು ವರ್ಷಗಳ ಅಂಕಿ ಅಂಶ


ವರ್ಷ : 2022


  • ಒಟ್ಟು ಅಪಘಾತಗಳು : 3822

  • ಗಂಭೀರ ಅಪಘಾತಗಳು : 752

  • ಮೃತಪಟ್ಟವರು : 772

  • ಗಂಭೀರವಲ್ಲದ ಅಪಘಾತಗಳು : 3070

  • ಗಾಯಾಳುಗಳು : 3189


ವರ್ಷ : 2023


  • ಒಟ್ಟು ಅಪಘಾತಗಳು : 4974

  • ಗಂಭೀರ ಅಪಘಾತಗಳು : 882

  • ಮೃತಪಟ್ಟವರು :910

  • ಗಂಭೀರವಲ್ಲದ ಅಪಘಾತಗಳು : 4092

  • ಗಾಯಾಳುಗಳು : 4191


ವರ್ಷ : 2024


  • ಒಟ್ಟು ಅಪಘಾತಗಳು : 4602

  • ಗಂಭೀರ ಅಪಘಾತಗಳು : 824

  • ಮೃತಪಟ್ಟವರು : 845

  • ಗಂಭೀರವಲ್ಲದ ಅಪಘಾತಗಳು : 3778

  • ಗಾಯಾಳುಗಳು : 3885


ಠಾಣಾವಾರು ಗರಿಷ್ಠ ಅಪಘಾತ ಪ್ರಕರಣಗಳು (2024)


  • ಕೆ.ಆರ್.ಪುರಂ ಸಂಚಾರಿ ಠಾಣೆ - 202

  • ಯಲಹಂಕ ಸಂಚಾರಿ ಠಾಣೆ - 198

  • ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಠಾಣೆ - 198

  • ವೈಟ್‌ಫೀಲ್ಡ್ ಸಂಚಾರಿ ಠಾಣೆ - 158

  • ಕೆಂಗೇರಿ ಸಂಚಾರಿ ಠಾಣೆ - 152

  • ಇಂದಿರಾನಗರ ಸಂಚಾರಿ ಠಾಣೆ - 100


ಕಳೆದ 2 ವರ್ಷಗಳಿಗೆ ಹೋಲಿಸಿದಾಗ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಸಹ ಗಣನೀಯವಾಗಿ ತಗ್ಗಿರುವುದು ಸಂಚಾರಿ ಪೊಲೀಸ್ ಇಲಾಖೆಯ ವಾರ್ಷಿಕ ಅಂಕಿ ಅಂಶಗಳಲ್ಲಿ ತಿಳಿಯುತ್ತದೆ. 2022ರಲ್ಲಿ ವಿವಿಧ ಸಂಚಾರಿ ನಿಯಮಗಳ ಉಲ್ಲಂಘನೆಯ ಆರೋಪದಡಿ ಒಟ್ಟು 1.04 ಕೋಟಿ ಪ್ರಕರಣಗಳನ್ನ ಸಂಚಾರಿ ಪೊಲೀಸರು ದಾಖಲಿಸಿದ್ದಾರೆ. 2023ರಲ್ಲಿ 89.99 ಲಕ್ಷ ಪ್ರಕರಣಗಳನ್ನ ದಾಖಲಿಸಿಕೊಂಡಿದ್ದರು. ಆದರೆ 2024ರಲ್ಲಿ (ಅಕ್ಟೋಬರ್ 31ರವರೆಗಿನ ಅಂಕಿ ಅಂಶಗಳ ಅನುಸಾರ) ಒಟ್ಟು 69.73 ಲಕ್ಷ ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗಿದೆ.


ಹೆಚ್ಚು ದಾಖಲಾದ ಪ್ರಕರಣಗಳು


  • ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆ - 27,41,532

  • ಹಿಂಬದಿ ಸವಾರ ಹೆಲ್ಮೆಟ್ ಧರಿಸದಿರುವುದು - 18,23,665

  • ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ - 8,18,996

  • ಸೀಟ್ ಬೆಲ್ಟ್ ಧರಿಸದೆ ಕಾರು ಚಾಲನೆ - 3,34,860

  • ದೋಷಪೂರಿತ ನಂಬರ್ ಪ್ಲೇಟ್ - 1,57,665

  • ಸಿಗ್ನಲ್ ಜಂಪ್ - 4,95,874


ಇದನ್ನೂ ಓದಿ: 2025ರಲ್ಲಿ ಮನೆ ನಿರ್ಮಿಸಲು ಈ ತಿಂಗಳು ತುಂಬಾ ಮಂಗಳಕರ; ನಿಮ್ಮ ಸಂಪತ್ತು ಹೆಚ್ಚಾಗುತ್ತದೆ!!


ನಗರದ ಬಹುತೇಕ ಕಡೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಾಧಾರಿತ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಪ್ರಮುಖ ಜಂಕ್ಷನ್‌ಗಳು ಮತ್ತು ಕಾರಿಡಾರ್‌ಗಳಲ್ಲಿ ಅಳವಡಿಸಲಾಗಿರುವ 1500ಕ್ಕೂ ಹೆಚ್ಚು ಕ್ಯಾಮೆರಾಗಳ ಸಹಾಯದಿಂದ ಸಂಚಾರ ನಿಯಂತ್ರಣ ಕೋಣೆಯಿಂದಲೇ ಕುಳಿತು ಲೈವ್ ಫೀಡ್‌ಗಳನ್ನು ರಿಯಲ್ ಟೈಮ್‌ನಲ್ಲಿ ವೀಕ್ಷಿಸಬಹುದಾಗಿದೆ. ಇದರಿಂದಾಗಿ ಮೊದಲಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ದಂಡ ವಿಧಿಸಲಾಗುತ್ತಿದೆ. ಹಾಗೂ ಹೆಚ್ಚು ದಂಡ ಬಾಕಿ ಇರುವ ವಾಹನಗಳ ಮಾಲೀಕರ ಪಟ್ಟಿ ಸಿದ್ಧಪಡಿಸಿಕೊಂಡು ಅಂಥವರ ಮನೆ ಬಾಗಿಲಿಗೆ ಹೋಗಿ ದಂಡ ವಸೂಲಿಯಂಥಹ ಕೆಲಸಗಳನ್ನ ಆರಂಭಿಸಿರುವುದರಿಂದ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್‌ ಮಾಡಿ