ಬೆಂಗಳೂರು: ಉದ್ಯಮಿ ವಿಜಯ್ ತಾತಾಗೆ ಬೆದರಿಕೆಯೊಡ್ಡಿದ ಆರೋಪದ ಹಿನ್ನೆಲೆ ತಮ್ಮ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.


COMMERCIAL BREAK
SCROLL TO CONTINUE READING

ಪ್ರಕರಣ ಸಂಬಂಧ ದಾಖಲಾಗಿರುವ ದೂರು ರದ್ದುಪಡಿಸುವಂತೆ ಕೋರಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಎಂಎಲ್‌ಸಿ  ರಮೇಶ್ ಗೌಡ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆ ಬಂದಿತ್ತು.


ಇದನ್ನೂ ಓದಿ: ಇಷ್ಟೆಲ್ಲ ಅವಮಾನ ಸಹಿಸದೇ ಬಿಗ್‌ ಬಾಸ್‌ ತೊರೆದರೆ ನಟ ಸುದೀಪ್‌? ಇಲ್ಲಿದೆ ರಿಯಾಲಿಟಿ ಶೋನ ʻರಿಯಲ್ʼ ಮ್ಯಾಟರ್‌‌ !


ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಹಾಜರಿದ್ದರು ವಾದ ಆಲಿಸಿದ ನ್ಯಾಯಪೀಠ ಅರ್ಜಿಯಲ್ಲಿನ ತಾಂತ್ರೀಕ ನ್ಯೂನತೆ ಸರಿಪಡಿಸಿಕೊಳ್ಳಿ ಎಂದು ಅರ್ಜಿದಾರರ ಪರ ವಕೀಲರಿಗೆ ಸಲಹೆ ನೀಡಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. 


ಏನಿದು ಪ್ರಕರಣ ?


2019ರ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಹೆಚ್.ಡಿ ಕುಮಾರ್ ಸ್ವಾಮಿ ಕರೆ ಮಾಡಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳನ್ನು ಕೈಗೊಂಡಿದ್ದು, ಇದಕ್ಕೆ ವೈಯಕ್ತಿಕವಾಗಿ ಕೋಟ್ಯಂತರ ರೂಪಾಯಿ ಹಣವನ್ನೂ ಸಹ ಖರ್ಚು ಮಾಡಿದ್ದೇನೆ. ಈ ಬಾರಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ನಮಗೆ ಗೆಲುವು ಅನಿವಾರ್ಯ. ಚುನಾವಣಾ ವೆಚ್ಚಕ್ಕಾಗಿ 50 ಕೋಟಿ ರೂಪಾಯಿ ಹಣ ಕೊಡಬೇಕಾಗುತ್ತದೆ’ ಎಂದರು. 


ನಾನು ಕೂಡಲೇ ‘ಸರ್ ನನ್ನ ಬಳಿ ಅಷ್ಟೊಂದು ಹಣವಿಲ್ಲ, ನಾನು ನನ್ನ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಬೇಕು. ಹೀಗಾಗಿ ಪಕ್ಷದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಅಷ್ಟೇ ಎಂದು ಉತ್ತರಿಸಿದೆ. ನನ್ನ ಮಾತಿನಿಂದ ಕೋಪಗೊಂಡ ಕುಮಾರಸ್ವಾಮಿ ಅವರು 50 ಕೋಟಿ ರೆಡಿ ಮಾಡಿ ಇಲ್ಲದೇ ಹೋದರೇ ನಾನು ಏನು ಮಾಡುತ್ತೀನೋ ಗೊತ್ತಿಲ್ಲ, ನೀವು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುವುದಷ್ಟೇ ಅಲ್ಲ, ಇಲ್ಲಿ ಬದುಕುವುದೇ ಕಷ್ಟವಾಗುತ್ತದೆ ಎಂದು ಬೆದರಿಕೆ ಹಾಕಿ ಕರೆ ಸ್ಥಗಿತಗೊಳಿಸಿದ್ದರು  ಮಾಡಿದರು.


ಮಾತ್ರವಲ್ಲದೇ, ರಮೇಶ್ ಗೌಡ ಅವರು ಕುಮಾರಣ್ಣ ಹೇಳಿದಂತೆ 50 ಕೋಟಿ ಸಿದ್ಧಪಡಿಸಿಕೊಳ್ಳಿ ಜತೆಗೆೆ ನಾನು ದೇವಾಲಯ ಹಾಗೂ ಶಾಲೆ ಕಟ್ಟಿಸುತ್ತಿದ್ದು, ಅದಕ್ಕಾಗಿ 5ಕೋಟಿ ನೀಡುವಂತೆ ಒತ್ತಾಯಿಸಿದರು. ಈ ಹಣವನ್ನು ನೀಡದಿದ್ದರೆ ನಿಮಗೆ ತೊಂದರೆ ಎದುರಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ವಿಜಯ್ ತಾತಾ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು  ದಾಖಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.


ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.