Golden Snake Video: ದೊಡ್ಡ ಹಾವನ್ನು ನೋಡಿರುತ್ತೇವೆ, ಎರಡು ತಲೆಯ ಹಾವನ್ನು ಕೂಡ ನೋಡಿರುತ್ತೇವೆ, ಅತಿ ವಿಷಕಾರಿ ಹಾವುಗಳ ಬಗ್ಗೆ ನಾವು ಅನೇಕ ಕಥೆಗಳನ್ನು ಕೇಳಿದ್ದೇವೆ ಆದರೆ ಇವೆಲ್ಲವೂ ಚಿನ್ನದ ಬಣ್ಣದ ಹಾವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡಿರುವ ಈ ವಿಡಿಯೋದ ಅಡಿ ಗೋಲ್ಡನ್ ಸ್ನೇಕ್ ಎಂಬ ಕ್ಯಾಪ್ಷನ್ ಕೊಡಲಾಗಿದೆ. ಈ ವಿಡಿಯೋವನ್ನು ಏಪ್ರಿಲ್ 1 ರಂದು ಹಂಚಿಕೊಳ್ಳಲಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: Viral Video: ಗೋಮಾತೆಯ ಎದುರು ಗರಿಬಿಚ್ಚಿ ಕುಣಿದ ನವಿಲು! ನವಿಲಿನ ನಾಟ್ಯಕ್ಕೆ ಮನಸೋತ ಕಾಮದೇನು
ಇನ್ನೂ ಟ್ವಿಟರ್ನಲ್ಲಿ ಈ ವಿಡಿಯೋ ಈಗಾಗಲೇ 23 ಮಿಲಿಯನ್ ವೀವ್ಸ್ ದಾಟಿದ್ದು, ವಿಡಿಯೋ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.
ಪೋಸ್ಟ್ನಲ್ಲಿ ಆರು ಅಡಿಯ ಹಾವು ಚಿನ್ನದಲ್ಲಿ ರಸ್ತೆ ದಾಟುತ್ತಿರುವ ವೀಡಿಯೊವನ್ನು ಕಾಣಬಹುದು. ಹಾವನ್ನು ಕಂಡು ಅಚ್ಚರಿಗೊಂಡ ಸ್ಥಳೀಯರು ರೆಕಾರ್ಡ್ ಮಾಡಿರುವ ದೃಶ್ಯಗಳನ್ನು ಈ ವಿಡಿಯೋದಲ್ಲಿ ನೋಡಬಹುದು.
ಈ ಟ್ವೀಟ್ 2 ವೀಡಿಯೊ ಕ್ಲಿಪ್ಗಳನ್ನು ಒಳಗೊಂಡಿದೆ. ಈ ವಿಡಿಯೋಗಳಲ್ಲಿ ಗೋಲ್ಡನ್ ಕಲರ್ ನಲ್ಲಿ ಕಾಣಸಿಗುವ ಆರು ಅಡಿಯ ಹಾವೊಂದು ರಸ್ತೆ ದಾಟಿದೆ. ಹಾವನ್ನು ನೋಡಿದ ಸ್ಥಳೀಯರು ಅಚ್ಚರಿಗೊಂಡಿದ್ದು, ಕೂಡಲೇ ಅದನ್ನು ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ. ಅವರು ನೋಡುತ್ತಿರುವಾಗಲೇ ಹಾವು ರಸ್ತೆಯ ಇನ್ನೊಂದು ಬದಿಯ ಹುಲ್ಲಿನ ಕಡೆಗೆ ತೆವಳುತ್ತಾ ಸಾಗಿದೆ.
ಇದು ನಿಜವಾದ ವಿಡಿಯೋವೋ ಅಥವಾ ನಕಲಿ ವಿಡಿಯೋವೋ ಎಂಬುದು ಗೊತ್ತಿಲ್ಲವಾದರೂ ವಿಡಿಯೋ ನೋಡಿದ ಅನೇಕರು ಇದು ಅಸಲಿ ಅಪರೂಪದ ಹಾವು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಾವಿನ ಜಾತಿ ಯಾವುದು ಎಂಬುದು ಖಚಿತವಾಗಿ ತಿಳಿದು ಬಂದಿಲ್ಲ. ಆದರೂ ಕೂಡ ಈ ವಿಡಿಯೋ ಹಾವಿನ ಬಣ್ಣದಿಂದಾಗಿ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಮಂದಿ ಕಾಮೆಂಟ್ ಮಾಡುತ್ತಿದ್ದು, ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.
ಇದು ಹಳದಿ ಹಾವು ಮತ್ತು ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದೆ ಎಂದು ಬಳಕೆದಾರರು ಹೇಳಿದ್ದಾರೆ. ಬೀದಿ ದೀಪದಿಂದಾಗಿ ಅದು ಹೊಳೆಯುತ್ತಿದೆ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಇದು ಚಿನ್ನದ ಹಾವೇ ಅಥವಾ ಹೊಳೆಯುವ ಹಾವೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
【#新島備忘録】
伊豆諸島新島に金色の蛇現る!?#新島 pic.twitter.com/8sb3IZjJ8c— うえまつそう🗿 (@sou_beebangboo) April 4, 2024
【#新島備忘録】
伊豆諸島新島に金色の蛇現る!?#新島 pic.twitter.com/8sb3IZjJ8c— うえまつそう🗿 (@sou_beebangboo) April 4, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.