“ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದ ನಂತರ ಗಾಂಧಿ ಪರಿವಾರದ ಸಲಹೆ ಪಡೆಯುತ್ತೇನೆ”
ಗಾಂಧಿ ಪರಿವಾರದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೀಗಾಗಿ ನೀವು ರಿಮೋಟ್ ಕಂಟ್ರೋಲ್ ಆಗಿ ಕಾರ್ಯನಿರ್ವಾಹನೆ ಮಾಡುತ್ತೀರಿ ಎಂಬ ಆರೋಪ ಇದೆ ಎಂಬ ಜೀ ಕನ್ನಡ ನ್ಯೂಸ್ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಅವರ (ಗಾಂಧಿ ಪರಿವಾರ) ಸಲಹೆ ಪಡೆಯುವುದು ನನ್ನ ಕರ್ತವ್ಯ ಎಂದು ಹೇಳಿದರು.
ಬೆಂಗಳೂರು : ಗಾಂಧಿ ಪರಿವಾರದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೀಗಾಗಿ ನೀವು ರಿಮೋಟ್ ಕಂಟ್ರೋಲ್ ಆಗಿ ಕಾರ್ಯನಿರ್ವಾಹನೆ ಮಾಡುತ್ತೀರಿ ಎಂಬ ಆರೋಪ ಇದೆ ಎಂಬ ಜೀ ಕನ್ನಡ ನ್ಯೂಸ್ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಅವರ (ಗಾಂಧಿ ಪರಿವಾರ) ಸಲಹೆ ಪಡೆಯುವುದು ನನ್ನ ಕರ್ತವ್ಯ ಎಂದು ಹೇಳಿದರು.
ಕೆಪಿಸಿಸಿ ಕಚೇರಿಗೆ ಮತಯಾಚನೆ ಮಾಡಲು ಆಗಮಿಸಿದ ಎ ಐ ಸಿ ಸಿ ಅಧ್ಯಕ್ಷ ಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ, ಸುದ್ದಿಗೋಷ್ಠಿ ನಡೆಸಿ ,ಶಶಿ ತರೂರ್ ಗೆ ಯಾವ ಸಂದೇಶ ಕೊಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು , ನಾನು ಅವರಿಗೆ ಏನೂ ಹೇಳುವುದಿಲ್ಲ.ಅದು ನಮ್ಮ ಮನೆಯಲ್ಲಿನ ವಿಚಾರ ಮನೆಯೊಳಗೆ ಚರ್ಚಿಸುತ್ತೇವೆ,ಇಲ್ಲಿ ಆ ಬಗ್ಗೆ ಏನೂ ಹೇಳುವುದಿಲ್ಲ ಎಂದರು. ಹಾಗೂ ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಆಗುತ್ತಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು ಅವರಿಗೆ ಮಾತನಾಡಲು ಬೇರೆ ವಿಷಯಗಳಿಲ್ಲ,ಹೀಗಾಗಿ ಏನೇನೊ ಮಾತನಾಡುತ್ತಾರೆ ಎಂದು ಅವರು ದೂರಿದರು.
ಇದನ್ನೂ ಓದಿ : T20 World Cup 2022: ಈ 3 ಆಟಗಾರರು ಟೀಂ ಇಂಡಿಯಾದಿಂದ ಔಟ್, ರೋಹಿತ್ ಶರ್ಮಾಗೆ ಟೆನ್ಷನ್!
ಆ ಕುಟುಂಬದವರು ಈ ದೇಶಕ್ಕೆ ಬಹಳಷ್ಟು ಕೊಡುಗೆಗಲನ್ನು ಕೊಟ್ಟಿದ್ದಾರೆ.ನಂತರ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ,ಬಹುಮತ ಬಂದಾಗಲೂ ಸೋನಿಯಾ ಗಾಂಧಿ ಅಧಿಕಾರ ಅನುಭವಿಸಲಿಲ್ಲ.ಅವರ ಸಲಹೆಯಿಂದ ನಮ್ಮ ಪಕ್ಷಕ್ಕೆ ಒಳ್ಳೆಯದಾಗಯತ್ತದೆ, ನಿಮ್ಮ ಸಲಹೆಯನ್ನೂ ನೀವು ಕೊಡಬಹುದು.ಹೀಗಾಗಿ ಅವರ ಸಲಹೆ ಪಡೆಯುವುದು ನನ್ನ ಕರ್ತವ್ಯ ನಾನು ಅವರ ಸಲಹೆಗಳನ್ನು ಪಡೆಯುತ್ತೇನೆ ಎಂದರು.
ಪಕ್ಷದಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಬಣದ ಜತೆ ಖರ್ಗೆ ಅವರ ಬಣ ಬರುತ್ತದೆಯೇ ಎಂದು ಕೇಳಿದಾಗ, ' ನಮ್ಮಲ್ಲಿ ಯಾವುದೇ ಬಣ ಇಲ್ಲ. ನಾವೆಲ್ಲರೂ ಸಮಾನರು. ಒಗ್ಗಟ್ಟಿದ್ದರೆ ನಮ್ಮ ಸರ್ಕಾರ ಬರುವುದು ಖಚಿತ ' ಎಂದು ತಿಳಿಸಿದರು.
ಈ ಚುನಾವಣೆ ರಾಜ್ಯದ ಮೇಲೆ ಪ್ರಭಾವ ಬೀರುತ್ತದೆಯೆ ಎಂಬ ಪ್ರಶ್ನೆಗೆ, ' ನಮ್ಮ ರಾಜ್ಯದಲ್ಲಿ ಸಾಕಷ್ಟು ಮುಖಂಡರು ಇದ್ದಾರೆ. ರಾಜ್ಯದಲ್ಲಿ ಸದನದ ಒಳಗೆ ಹಾಗೂ ಹೊರಗೆ ಹೋರಾಡುತ್ತಿದ್ದಾರೆ. ಹೀಗಾಗಿ ನನ್ನಿಂದ ಎಲ್ಲಾ ಪ್ರಯೋಜನ ಆಗಲಿದೆ ಎಂದು ನಾನು ಹೇಳುವುದಿಲ್ಲ. ಏನೇ ಆದರೂ ಅದು ಎಲ್ಲಾ ನಾಯಕರ ಸಾಮೂಹಿಕ ನೇತೃತ್ವದ ಫಲ. ಇದನ್ನೇ ನಾನು ನಂಬಿದ್ದೇನೆ ' ಎಂದರು.
ಇದನ್ನೂ ಓದಿ : Pro Kabaddi 2022 Season 9 :ಪಿಂಕ್ ಪ್ಯಾಂಥರ್ಸ್, ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್‌ಗೆ ಜಯ
ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಇವರು,RSS ಬೆಂಬಲಿತ ಕೇಂದ್ರ ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲ.ಅನೇಕ ಚುನಾಯಿತ ಸರ್ಕಾರ ತೆಗೆದು ಹಾಕಿದೆ,
ಸ್ವಾಯತ್ತ ಸಂಸ್ಥೆಗಳ ಮೂಲಕ ಸರ್ಕಾರಗಳನ್ನು ತೆಗೆದು ಹಾಕುತ್ತದೆ.ಯಾರು ಬೆಂಬಲ ಕೊಡಲ್ಲ, ಅವರ ಮೇಲೆ ಕೇಸ್ ದಾಖಲಾಗುತ್ತದೆ.ರಾಹುಲ್ ಗಾಂಧಿ ನೇತೃತ್ವದಲ್ಲಿ 6 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.ಬಿಜೆಪಿಯವರು ಎದುರಿಸಿ, ಬೆದರಿಸಿ ಅವರ ಸರ್ಕಾರ ರಚನೆ ಮಾಡಿಕೊಂಡಿದ್ದಾರೆ.ಇದನ್ನು ಎದುರಿಸಬೇಕು ಎಂದರೆ ಕಾಂಗ್ರೆಸ್ ಪಕ್ಷ ಸ್ಟ್ರಾಂಗ್ ಆಗಬೇಕು.ಒಬ್ಬನಿಂದ ಆಗುತ್ತೆ ಎಂದು ಹೇಳಲ್ಲ,ಎಲ್ಲರೂ ಸೇರಿ ಪಕ್ಷವನ್ನು ಕಟ್ಟಬೇಕು ಎಂದು ಸಂದೇಶ ನೀಡಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.