BBMP Election: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕೈ ಪಡೆ ಇದೀಗ ರಾಜ್ಯ ರಾಜಧಾನಿಯ ಮೇಲೆ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರು ಸಂಸದರ ಜೊತೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂಥಿ ಡಿ.ಕೆ. ಶಿವಕುಮಾರ್ ಸಭೆ ನಡೆಸಿದರ್ಫು. ಈ ಸಭೆಯಲ್ಲಿ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಸಾಕಷ್ಟ ಚರ್ಚೆಯಾಯಿತು. ಬ್ರಾಂಡ್ ಬೆಂಗಳೂರಿನ‌ ಬದಲು ಬೆಟರ್ ಬೆಂಗಳೂರಿಗೆ ನಾವು ಆದ್ಯತೆ ನೀಡಬೇಕೆಂದು ಡಿ‌.ಕೆ. ಶಿವಕುಮಾರ್ ಸಲಹೆ ನೀಡಿದರು. 


COMMERCIAL BREAK
SCROLL TO CONTINUE READING

ಸಭೆಗೆ ಡಿಕೆ ವಿಳಂಬ... ಬಿಜೆಪಿ ಶಾಸಕರು‌ ಸಭೆ ಸಭಾತ್ಯಾಗ: 
ಇನ್ನು ಸಭೆಯು ವಿಧಾನಸೌಧ ಮೂರನೇ ಮಹಡಿಯಲ್ಲಿ ಬೆಳಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ಆದರೆ, ಡಿಸಿಎಂ ಡಿಕೆ ಶಿವಕುಮಾರ್, ಮತ್ತೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಸಭೆಗೆ ಕೆಲ‌ ನಿಮಿಷಗಳ ಕಾಲ ತಡವಾಗಿ ಆಗಮಿಸಿದರು. ಈ ವೇಳೆ ಬಿಜೆಪಿ ಶಾಸಕರಾದ ಅಶ್ವಥ್ ನಾರಾಯಣ್, ಎಸ್ ವಿಶ್ವನಾಥ್, ಬೈರತಿ ಬಸವರಾಜು, ಮುನಿರತ್ನ ಹಾಗೂ ಎಸ್ ಟಿ ಸೋಮಶೇಖರ್ ಸಭೆಯ ಅರಂಭಕ್ಕೂ ಮುನ್ನ ಸಭೆಯಿಂದ ಹೊರ ನಡೆದು ಡಿಕೆಶಿ ವಿರುದ್ದ ಅಕ್ರೋಶ ಹೊರ ಹಾಕಿದರು. 


ಬ್ರಾಂಡ್ ಬೆಂಗಳೂರನ್ನ ಬೆಟರ್ ಬೆಂಗಳೂರು ‌ಆಗಬೇಕು ಡಿಕೆ..!
ಇನ್ನು ಬ್ರಾಂಡ್ ಬೆಂಗಳೂರು ಬೆಟರ್ ಬೆಂಗಳೂರು ಆಗಬೇಕು ಎನ್ನುವ ಉದ್ದೇಶದಿಂದ ಇಂದಿನ‌ ಸಭೆ ನಡೆಸಲಾಗಿದೆ ಎಂದು ಸಭೆಯ ಅರಂಭದಲ್ಲಿಯೇ ತಿಳಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸದ್ಯ ಚುನಾವಣೆ ಮುಗಿಯುವುದರ ಜೊತೆಯಲ್ಲಿ ರಾಜಕಾರಣ ಸಹ ಮುಗಿದಿದೆ. ಬೆಂಗಳೂರು ಅಭಿವೃದ್ಧಿ ನಮ್ಮೆಲ್ಲರ ಗುರಿ, ನಮ್ಮ ಬ್ರಾಂಡ್ ಬೆಂಗಳೂರು ಬೆಟರ್ ಬೆಂಗಳೂರು ಆಗಬೇಕು, ಕುಡಿಯುವ ನೀರು, ಕಸ ನಿರ್ವಹಣೆ, ಟ್ರಾಫಿಕ್ ಮಾಸ್ಟರ್ ಪ್ಲಾನ್ ಬಗ್ಗೆ ಚರ್ಚೆ ಮಾಡೋಣ ಎಂದರು. ಸಭೆಯಲ್ಲಿ ಮುಖ್ಯವಾಗಿ ಮಳೆಗಾಲದ ಸಂದರ್ಭದಲ್ಲಿ ತಲೆದೂರುವ ಮುಖ್ಯ ಸಮಸ್ಯೆಗಳಿಗೆ ಕಾರಣವಾಗಿರುವ ಒತ್ತುವರಿ ಹಾಗೂ ರಾಜಕಾಲುವೆ ನಿರ್ವಹಣೆ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಯಿತು.


ಇದನ್ನೂ ಓದಿ- ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: "ಶಕ್ತಿ ಯೋಜನೆ" ಅನುಮೋದನೆ ಆದೇಶದಲ್ಲಿ ಏನೇನಿದೆ


ಇನ್ನು ವಾರ್ಡಿಗೊಂದು ಪ್ರತ್ಯೇಕ ಕಡತ ಮಾಡಿ ಲೆಕ್ಕಚಾರ ಇಡಬೇಕು, ವಾರ್ಡ್ ವಾರು ಅಭಿವೃದ್ಧಿ ಕಾರ್ಯಗಳ ಆರಂಭ, ಮಧ್ಯಂತರ ಮತ್ತು ಪೂರ್ಣಗೊಂಡ ವಿಡಿಯೊ ಮತ್ತು ಛಾಯಾಚಿತ್ರಗಳನ್ನು ಕಡತದಲ್ಲಿ ಮಂಡಿಸಬೇಕು. ಅಕೌಂಟಿಬಿಲಿಟಿ ಮತ್ತು ಟ್ರಾನ್ಸಫರೆನ್ಸಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಡಿಕೆ ತಿಳಿಸಿದರು. ಹೊಸಕೆರೆಹಳ್ಳಿ ಕೆರೆಯ ಮಧ್ಯದಲ್ಲಿ ರಸ್ತೆ ಮಾಡಿರೋ ಅಧಿಕಾರಿಗಳನ್ನ ಈ‌ ಕೂಡಲೇ ಸಸ್ಪೆಂಡ್ ಮಾಡಬೇಕೆಂದು‌ ಪಕ್ಕದಲ್ಲಿ ಕೂತ್ತಿದ್ದ ಪಾಲಿಕೆ ಅಯುಕ್ತರಿಗೆ ಡಿಕೆ ಶಿವಕುಮಾರ್ ಇದೇ ವೇಳೆ ಆದೇಶಿಸಿದರು. 


ಬಿಬಿಎಂಪಿಯಲ್ಲಿ ಅಧಿಕಾರಿಗಳದ್ದೇ ಕಾರುಬಾರು: ಆದಷ್ಟು ಬೇಗೆ ಪಾಲಿಕೆಗೆ ಚುನಾವಣೆ ನಡೆಸುವಂತೆ ಒತ್ತಾಯ: 
ಇನ್ನು ಬಿಬಿಎಂಪಿ ಚುನಾವಣೆಯನ್ನ ಅದಷ್ಟು ಬೇಗ ನಡೆಸುವಂತೆ ಡಿಸಿಎಂಗೆ ಸಭೆಯಲ್ಲಿ ಬಹುತೇಕ ಶಾಸಕರು ಒತ್ತಾಯ ಮಾಡಿದರು. ಬೆಂಗಳೂರಿಗೆ ಪಾಲಿಕೆ ಸದಸ್ಯರಿಲ್ಲ. ಹೀಗಾಗಿ ಅಧಿಕಾರಗಳದ್ದೇ ಆಡಿದ್ದೆ ಆಟವಾಗುತ್ತಿದೆ.. ಹಾಗಾಗಿ ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ನಡೆಸಿ ಎಂದು ಮನವಿ ಮಾಡಿದರು. 


ಇದನ್ನೂ ಓದಿ- ಬಾಡಿಗೆದಾರರಿಗೂ ಉಚಿತ ವಿದ್ಯುತ್ ಅನ್ವಯ; ಮುಖ್ಯಮಂತ್ರಿ ಸಿದ್ದರಾಮಯ್ಯ


ಇನ್ನು ಹೊಸದಾಗಿ ವಾರ್ಡ್ ವಿಂಗಡಣೆ ಮಾಡಿ ಚುನಾವಣೆ ‌ಮಾಡಿ. ಆದ್ರೆ ಯಾರಿಗೂ ಆಕ್ಷೇಪ ಆಗದ ರೀತಿಯಲ್ಲಿ ಪುನರ್ ವಿಂಗಡನೆ ಮಾಡಿ ಎಂದು ಸಲಹೆ ನೀಡಿದರು. ಆರು ತಿಂಗಳ ಒಳಗಾಗಿ ಚುನಾವಣೆ ನಡೆಸುವುದರ ಜೊತೆಗೆ ಚೆನ್ನೈ ಮಾದರಿಯ  ಮೇಯರ್‌ ಅವಧಿ ಹೆಚ್ಚಿಸಿ ಎಂದು ಕೆಲವರು ಸಲಹೆ ನೀಡಿದರು. ಸದ್ಯ ಕೋರ್ಟ್ ನಲ್ಲಿ ಈ ಬಗ್ಗ ಚರ್ಚೆ ನಡೆಯುತ್ತಿದ್ದು ಅದೊಷ್ಟು ಬೇಗ ಅದನೆಲ್ಲ‌ಮುಗಿಸಿ ಚುನಾವಣೆ ನಡೆಸೋಣ ಎಂದರು. 


ಒಟ್ಟಾರೆ ಅಧಿಕಾರಕ್ಕೆ ಬಂದ ಕೆಲವೇ ಕೆಲವು ದಿನದಲ್ಲಿ ಡಿಸಿಎಂ ಡಿಕೆ ಪುಲ್ ಅಕ್ಟೀವ್ ಅಗಿದ್ದು ಬೆಂಗಳೂರಿನ ಕಡೆ ಜಾಸ್ತಿ ಗಮನ ಕೊಟ್ಟಿದ್ದಾರೆ. ಉತ್ಸಾಹ ಆರಂಭದ ಸ್ವೀಡ್ ಇಡೀ  ಐದು ವರ್ಷ ಅಗೇ ಇರಲಿ ಎಂಬುವುದು  ರಾಜಧಾನಿ ಜನರ ಅಶಯ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ