ಬಿಜೆಪಿ ವಾರ್ಡ್ ವಿಂಗಡನೆ ಪ್ಲಾನ್‌ಗೆ ಠಕ್ಕರ್ ಕೊಡಲು ಮುಂದಾದ ಕಾಂಗ್ರೆಸ್ ಸರ್ಕಾರ

ಕೋವಿಡ್‌ ಇದ್ದಾಗ ಚುನಾವಣೆ ನಡೆಸೋದು ಸೂಕ್ತವಲ್ಲ,ಆದಾದ ನಂತರವಾದ್ರೂ ಎಲೆಕ್ಷನ್ ನಡೆಸಬೇಕಿದ್ದ ಅಂದಿನ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಎಲೆಕ್ಷನ್ ಮಾಡಲೇ ಇಲ್ಲ,ಆಮೇಲೆ ಚುನಾವಣೆ ಮಾಡಿಯೇ ಬಿಡ್ತೀವಿ ಅಂತ 198 ವಾರ್ಡ್‌ಗಳನ್ನು 243 ವಾರ್ಡ್‌ಗಳಾಗಿ ಡೀಲಿಮಿಟ್ ಮಾಡಿದ್ರು, ಇದೀಗ ಬಿಜೆಪಿ ವಾರ್ಡ್ ವಿಂಗಡನೆ ಪ್ಲಾನ್‌ಗೆ ಕಾಂಗ್ರೆಸ್ ಸರ್ಕಾರ ಠಕ್ಕರ್ ಕೊಡೋಕೆ ತಯಾರಿ ಆರಂಭಿಸಿದೆ.

Written by - Bhavya Sunil Bangera | Edited by - Manjunath N | Last Updated : Jun 5, 2023, 06:15 PM IST
  • 2015 ರಲ್ಲಿ ಆಯ್ಕೆಯಾಗಿದ್ದ ಕಾರ್ಪೋರೇಟರ್‌ಗಳ ಅವಧಿ 2020 ರಲ್ಲೇ ಮುಗಿದುಹೋಗಿತ್ತು
  • 2020ರಲ್ಲಿ ಕೋವಿಡ್ ಇದ್ದ ಕಾರಣದಿಂದಾಗಿ ಎಲೆಕ್ಷನ್ ಮಾಡಿರಲಿಲ್ಲ
  • ಆದ್ರೆ, ಆಮೇಲಾದ್ರೂ ಎಲೆಕ್ಷನ್ ಮಾಡಬೇಕಿದ್ದ ಬಿಜೆಪಿ ಸರ್ಕಾರ, ನಗರದ ಶಾಸಕರ ಒತ್ತಡದಿಂದ ಎಲೆಕ್ಷನ್ ಮಾಡಲೇ ಇಲ್ಲ
ಬಿಜೆಪಿ ವಾರ್ಡ್ ವಿಂಗಡನೆ ಪ್ಲಾನ್‌ಗೆ ಠಕ್ಕರ್ ಕೊಡಲು ಮುಂದಾದ ಕಾಂಗ್ರೆಸ್ ಸರ್ಕಾರ title=
file photo

ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆದು ಸರಿಯಾಗಿ ಎರಡುವರೆ ವರ್ಷಗಳಾಗಿ ಹೋಗಿವೆ.2020 ರಿಂದ ಜನರು ಸಣ್ಣಪುಟ್ಟ ಸಮಸ್ಯೆಗಳಿಗೂ ಶಾಸಕರ ಮನೆ ಬಾಗಿಲನ್ನು ಕಾಯುವಂತಾಗಿದೆ.ಕೋವಿಡ್‌ ಇದ್ದಾಗ ಚುನಾವಣೆ ನಡೆಸೋದು ಸೂಕ್ತವಲ್ಲ,ಆದಾದ ನಂತರವಾದ್ರೂ ಎಲೆಕ್ಷನ್ ನಡೆಸಬೇಕಿದ್ದ ಅಂದಿನ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಎಲೆಕ್ಷನ್ ಮಾಡಲೇ ಇಲ್ಲ, ಆಮೇಲೆ ಚುನಾವಣೆ ಮಾಡಿಯೇ ಬಿಡ್ತೀವಿ ಅಂತ 198 ವಾರ್ಡ್‌ಗಳನ್ನು 243 ವಾರ್ಡ್‌ಗಳಾಗಿ ಡೀಲಿಮಿಟ್ ಮಾಡಿದ್ರು, ಇದೀಗ ಬಿಜೆಪಿ ವಾರ್ಡ್ ವಿಂಗಡನೆ ಪ್ಲಾನ್‌ಗೆ ಕಾಂಗ್ರೆಸ್ ಸರ್ಕಾರ ಠಕ್ಕರ್ ಕೊಡೋಕೆ ತಯಾರಿ ಆರಂಭಿಸಿದೆ.

ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ 

2015 ರಲ್ಲಿ ಆಯ್ಕೆಯಾಗಿದ್ದ ಕಾರ್ಪೋರೇಟರ್‌ಗಳ ಅವಧಿ 2020ರಲ್ಲೇ ಮುಗಿದುಹೋಗಿತ್ತು. 2020ರಲ್ಲಿ ಕೋವಿಡ್ ಇದ್ದ ಕಾರಣದಿಂದಾಗಿ ಎಲೆಕ್ಷನ್ ಮಾಡಿರಲಿಲ್ಲ.ಆದ್ರೆ, ಆಮೇಲಾದ್ರೂ ಎಲೆಕ್ಷನ್ ಮಾಡಬೇಕಿದ್ದ ಬಿಜೆಪಿ ಸರ್ಕಾರ, ನಗರದ ಶಾಸಕರ ಒತ್ತಡದಿಂದ ಎಲೆಕ್ಷನ್ ಮಾಡಲೇ ಇಲ್ಲ. ಆಮೇಲೆ ಇನ್ನೇನು ಎಲೆಕ್ಷನ್ ಮಾಡಿಯೇ ಬಿಡ್ತೀವಿ ಅಂತ ತೋರಿಸಿಕೊಳ್ಳೋಕೆ 198 ವಾರ್ಡ್‌ಗಳನ್ನು 243 ವಾರ್ಡ್‌ಗಳಾಗಿ ಮರುವಿಂಗಡಣೆ ಮಾಡಿತ್ತು.ಇದು ಆರ್‌ಎಸ್‌ಎಸ್ ಹಾಗು ಬಿಜೆಪಿ ಅನುಕೂಲಕ್ಕಾಗಿ ಮಾಡಿರೋ ಡೀಲಿಮಿಟೇಶನ್ ಹೊರತು ಜನರ ಅನುಕೂಲಕ್ಕಲ್ಲ ಅಂತ ಕಾಂಗ್ರೆಸ್ ಅಂದಿನಿಂದಲೂ ಆರೋಪಿಸಿತ್ತು.ಈಗ ಕಾಂಗ್ರೆಸ್ ಸರ್ಕಾರ ರಚನೆಯಾದ ಬೆನ್ನಲ್ಲೆ 243 ವಾರ್ಡ್‌ಗಳು ಬೇಡವೇ ಬೇಡ, ಮತ್ತೆ ಹೊಸದಾಗಿ ಡೀಲಿಮಿಟೇಶನ್ ಮಾಡಲು ಮುಂದಾಗಿದೆ.

ಇದನ್ನೂ ಓದಿ: ಅಭಿಷೇಕ್ ಅಂಬರೀಷ್​ ಅವಿವಾ ಅದ್ದೂರಿ ವಿವಾಹ: ಸಿನಿ ತಾರೆಯರ ಸಮಾಗಮ

198 ವಾರ್ಡ್‌ಗಳನ್ನು ಬಿಜೆಪಿ ಸರ್ಕಾರ ತನಗೆ ಅನುಕೂಲವಾಗುವಂತೆ 243 ವಾರ್ಡ್‌ಗಳನ್ನಾಗಿ ಮಾಡಿಕೊಂಡಿತ್ತು.ಆದ್ರೆ 243 ರ ಬದಲಾಗಿ 250 ವಾರ್ಡ್‌ಗಳನ್ನು ಮಾಡೋಣ ಬಿಡಿ ಅಂತಾರೆ ಕೆಲ ಕಾಂಗ್ರೆಸ್‌ನ ನಾಯಕರು.ಈ ರೀತಿ ಮಾಡೋದ್ರಿಂದ ಜನರಿಗೂ ಅನುಕಾಲವಾಗುತ್ತೆ. ಆಯ್ಕೆಯಾಗೋ ಕಾರ್ಪೋರೇಟರ್‌ಗಳಿಗೂ ಅನುಕೂಲವಾಗುತ್ತೆ.ಈ ಕುರಿತ ಈಗಾಗಲೇ ಮಾಜಿ ಮೇಯರ್‌ಗಳ ಜೊತೆ ಡಿಸಿಎಂ ಡಿಕೆಶಿ ನಡೆಸಿದ ಸಭೆಯಲ್ಲಿ ಚರ್ಚಿಸಲಾಗಿದ್ದು, ಅವರಿಂದಲೂ ಈ ಪ್ಲಾನ್‌ಗೆ ಒಲುವು ತೋರಲಾಗಿದೆ ಎಂಬ ಮಾತುಗಳು ಕೇಳಿಬಂದಿದೆ.ಇನ್ನು, ಇದೇ ವಿಚಾರವಾಗಿ ನಗರದ ಹಿರಿಯ ಶಾಸಕ ಹಾಗು ಸಚಿವರಾದ ರಾಮಲಿಂಗಾರೆಡ್ಡಿರವರ ಸಲಹೆಯನ್ನೂ ಡಿಸಿಎಂ ಡಿಕೆಶಿ ಈಗಾಗಲೇ ಪಡೆದಿದ್ದಾರೆ ಎನ್ನಲಾಗಿದೆ. ಪಾಲಿಕೆಯ ಇಂಚಿಂಚೂ ಮಾಹಿತಿಯನ್ನು ಅರಿದು ಕುಡಿದಿರೋ ರಾಮಲಿಂಗಾರೆಡ್ಡಿಯವರ ಸಲಹೆಯಂತೆ 250 ವಾರ್ಡಗಳ ವಿಂಗಡಣೆಗೆ ಚಿಂತನೆ ನಡೆಸಿದ್ದು, ಕಾನೂನು ಕೋಷ ಕೂಡ ಸಾಧಕ ಭಾದಕಗಳ ಬಗ್ಗೆ ಸಿದ್ದತೆ ನಡೆಸುತ್ತಿದೆ.

ವಾರ್ಡ್‌ಗಳ ಮರುವಿಂಗಡಣೆ ಮಾಡಿ ಡಿಸೆಂಬರ್ ಒಳಗೆ ಪಾಲಿಕೆಯ ಚುನಾವಣೆಯನ್ನು ನಡೆಸೋದಕ್ಕೆ ಡಿಕೆಶಿ ಹೊಸ ತಂತ್ರ ರೂಪಿಸಿದ್ದಾರೆ.ರಾಜ್ಯವನ್ನು ಗೆದ್ದ ಹಾಗೆ ನಗರವನ್ನೂ ಗೆಲ್ಲೋದಕ್ಕೆ ಕಾಂಗ್ರೆಸ್ ರಣತಂತ್ರ ರೂಪಿಸುತ್ತಿರೋದ್ರ ಬಿಜೆಪಿಗೆ ನುಂಗಲಗದ ತುತ್ತಗಿದೆ, ಇತ್ತ ಶತಾಯಗತಾಯ ಮೇಯರ್ ಪಟ್ಟ ಹಿಡಿಬೇಕು ಅಂತ ಕಾಂಗ್ರೇಸ್ ತೆರೆಮರೆಯಲ್ಲೇ ಅಟ ಶುರುಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News