ಧಾರವಾಡ: ಧಾರವಾಡ ಗ್ರಾಮೀಣಭಾಗದ ಅನೇಕ ಹಳ್ಳಿಗಳಲ್ಲಿ ಅನಧಿಕೃತವಾಗಿ ಇಸ್ಪೆಟ್ ಅಡ್ಡೆ, ಮನೆಗಳಲ್ಲಿ ಸಾರಾಯಿ ಮಾರಾಟ ಮಾಡುತ್ತಿರುವ ಕುರಿತು ಗ್ರಾಮಸ್ಥರಿಂದ ವಿಶೇಷವಾಗಿ ಮಹಿಳೆಯರಿಂದ ದೂರುಗಳು ಬಂದಿದ್ದು, ಪೆÇಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಇಂದಿನಿಂದಲೇ ಕಾರ್ಯಚರಣಿ ಕೈಗೊಂಡು ಅಕ್ರಮಗಳನ್ನು ತಕ್ಷಣದಿಂದ ನಿಲ್ಲಿಸಲು ಕ್ರಮ ವಹಿಸಬೇಕೆಂದು ಶಾಸಕ ವಿನಯ ಕುಲಕರ್ಣಿ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಇದನ್ನೂ ಓದಿ: ಬಿಜೆಪಿ ವಾರ್ಡ್ ವಿಂಗಡನೆ ಪ್ಲಾನ್‌ಗೆ ಠಕ್ಕರ್ ಕೊಡಲು ಮುಂದಾದ ಕಾಂಗ್ರೆಸ್ ಸರ್ಕಾರ
ಅವರು ಇಂದು ಬೆಳಿಗ್ಗೆ ಸಮೀಪದ ಕಿತ್ತೂರು ಪಟ್ಟಣದ ಡೊಂಬರಕೊಪ್ಪ ಐ.ಬಿ.ಯಲ್ಲಿ ಧಾರವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ವಿವಿಧ ಇಲಾಖೆಗಳ ಕಾಮಗಾರಿ ಹಾಗೂ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಮಾತನಾಡಿದರು.ಹಳ್ಳಿಗಳಲ್ಲಿ ಇಸ್ಪೆಟ್ ದಂದೆ, ಸಾರಾಯಿ ಮಾರಾಟದಿಂದ ಕುಟುಂಬಗಳು ಹಾಳಾಗುತ್ತಿವೆ. ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು.ಯಾವ ಪ್ರಭಾವಿ, ಜನಪ್ರತಿನಿಧಿ ಹೆಸರು ಹೇಳಿದರೂ ಸಹ ಮುಲಾಜಿಲ್ಲದೆ ಅವರ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಜರುಗಿಸಿ ಎಂದು ಶಾಸಕರು ತಿಳಿಸಿದರು.
ನನ್ನ ಮತ ಕ್ಷೇತ್ರದ ಅಭಿವೃದ್ಧಿಗೆ ನನ್ನ ಆದ್ಯತೆ. ನಿಯಮಾನಸಾರ ಕಾಮಗಾರಿ ಕೈಗೊಂಡ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಭಯ ಪಡಬೇಕಿಲ್ಲ; ಯಾವುದೋ ಒತ್ತಡ ಒತ್ತಾಯಕ್ಕೆ ಒಳಗಾಗಿ ಕೆಲಸ ಮಾಡಿದ್ದರೆ ತಿದ್ದಿಕೊಳ್ಳಲು ಅವಕಾಶ ನೀಡುತ್ತೇನೆ. ಆದರೆ ಅದು ಹಳ್ಳಿಗಳ ಅಭಿವೃದ್ಧಿಗೆ, ಜನಸಾಮಾನ್ಯರ ಕಲ್ಯಾಣಕ್ಕೆ ಪೂರಕವಾಗಿರಬೇಕು.ಸರಕಾರಿ ನಿಯಮ ಮೀರಿ ಯಾರು ವರ್ತಿಸಬಾರದು ಎಂದು ಶಾಸಕರು ಎಚ್ಚರಿಸಿದರು.ಸರ್ಕಾರ ಈಗಾಗಲೇ ಕಾಮಗಾರಿಗಳ ಸ್ಥಗಿತಕ್ಕೆ ಮತ್ತು ಹೊಸ ಕಾಮಗಾರಿ ಆರಂಭಿಸದಂತೆ ಸೂಚನೆ ನೀಡಿದೆ. ಅದರ ಅನ್ವಯ ಯಾವ ಇಲಾಖೆ ಅಧಿಕಾರಿಗಳು ಹಳೇ ಕಾಮಗಾರಿ ಪುನರಾರಂಭ, ಹೊಸ ಕಾಮಗಾರಿಗೆ ಚಾಲನೆ ನೀಡಬಾರದು ಎಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಇದನ್ನೂ ಓದಿ: ಅಭಿಷೇಕ್ ಅಂಬರೀಷ್ ಅವಿವಾ ಅದ್ದೂರಿ ವಿವಾಹ: ಸಿನಿ ತಾರೆಯರ ಸಮಾಗಮ
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಾಸ್ತಾವಿಕ ಮಾತನಾಡಿ, ಅಧಿಕಾರಿಗಳನ್ನು ಪರಿಚಯಿಸಿದರು.ವಿವಿಧ ಇಲಾಖೆಯ ಕಾಮಗಾರಿಗಳಿಗೆ ಬಿಡುಗಡೆ ಆದ ಅನುದಾನ ಮತ್ತು ಕಾಮಗಾರಿಗಳ ಪ್ರಗತಿ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಕಂದಾಯ ಇಲಾಖೆಯ ಯೋಜನೆಗಳ ಕುರಿತು ಶಾಸಕರಿಗೆ ವಿವರಿಸಿದರು.
ಅಧಿಕಾರಿಗಳಿಂದ ತನಿಖೆ : ಧಾರವಾಡ ಗ್ರಾಮೀಣ ಭಾಗದ ಕೆಲವು ಕಡೆ ನಿಯಮ ಮೀರಿ ಕಾಮಗಾರಿ ಕೈಗೊಂಡಿರುವ, ಕಾಮಗಾರಿ ಅಪೂರ್ಣವಾಗಿರುವ ಮತ್ತು ಕಳಪೆ ಗುಣಮಟ್ಟದ ಸಾಮಗ್ರಿ ಬಳಸಿ ಕಾಮಗಾರಿ ಕೈಗೊಂಡಿರುವ ದೂರುಗಳು ಬಂದಿವೆ. ಪೂರ್ಣವಾಗಿರುವ ಕೆಲವು ಕಾಮಗಾರಿಗಳು ಗುಣಮಟ್ಟದಿಂದ ಆಗಿಲ್ಲ. ಈ ಎಲ್ಲವುಗಳ ಕುರಿತು ಹಿರಿಯ ಅಧಿಕಾರಿಗಳ ಸಮಿತಿ ರಚಿಸಿ, ಸಮಗ್ರವಾಗಿ ತನಿಖೆ ಕೈಗೊಳ್ಳಬೇಕೆಂದು ಶಾಸಕರು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು.
ಕೋಳಿಕೆರೆ, ಸಾಧನಕೇರಿಕೆರೆ ಅಭಿವೃದ್ಧಿಪಡಿಸಿ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಧಾರವಾಡ ಕೋಳಿಕೆರೆ ಮತ್ತು ಸಾಧನಕೇರಿ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಪಡೆಯಲು ಪ್ರಸ್ತಾವನೆ ಸಲ್ಲಿಸಿ ಎಂದು ಹುಡಾ ಆಯುಕ್ತ ಡಾ. ಸಂತೋಷ್ ಬಿರಾದರ್ ಅವರಿಗೆ ಶಾಸಕರು ಹೇಳಿದರು.ಬೀಜ ಗೊಬ್ಬರ ಕೊರತೆ ಆಗದಂತೆ ಎಚ್ಚರವಹಿಸಿ ರೈತರು ಕೃಷಿ ಭೂಮಿ ಬಿತ್ತನೆಗೆ ಸಿದ್ದಗೊಳಿಸಿ ಮಳೆಗಾಗಿ ಕಾಯುತ್ತಿದ್ದಾರೆ. ಮಳೆ ಆದ ತಕ್ಷಣ ರೈತರು ಬೀಜ ಗೊಬ್ಬರಕ್ಕಾಗಿ ದಾವಂತ ಮಾಡುತ್ತಾರೆ. ಯಾವುದೇ ತೊಂದರೆ ಆಗದಂತೆ ಎಲ್ಲಾ ರೀತಿಯ ಬೀಜ ಗೊಬ್ಬರ ದಾಸ್ತಾನು ಹೊಂದುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಷ್ಮಾ ಮಳಿಮಠಗೆ ಶಾಸಕರು ಸೂಚಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.