ಬೆಂಗಳೂರು : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಮಾಲಿನ್ಯ ಗಾಳಿಯಿಂದಾಗಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆ ಈ ಮಾಲಿನ್ಯದ ಭೂತ ಇದೀಗ ರಾಜ್ಯ ರಾಜಧಾನಿಯನ್ನು ಕೂಡಾ ಕಾಡುತ್ತಿದೆ. ದೀಪಾವಳಿ ವೇಳೆ ಬೆಂಗಳೂರಲ್ಲಿ ಪಟಾಕಿ ಅಬ್ಬರ ಜೋರಾಗಿತ್ತು. ಪರಿಣಾಮವಾಗಿ ವಾಯು ಮಾಲಿನ್ಯ ಕೂಡಾ ಮಿತಿಮೀರಿದೆ. ರಾಜ್ಯ ರಾಜಧಾನಿಯ ವಾಯುಮಾಲಿನ್ಯ ಅಪಾಯದ ಮಟ್ಟ ಮೀರಿದೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ. ಕೇವಲ ಮೂರೇ ದಿನಗಳಲ್ಲಿ ಅಂದರೆ ದೀಪಾವಳಿ ಹಬ್ಬದ ವೇಳೆಯಲ್ಲಿ ಮಾಲಿನ್ಯ ಪ್ರಮಾಣ ಅಪಾಯದ ಮಟ್ಟವನ್ನು ಮೀರಿದೆ.  


COMMERCIAL BREAK
SCROLL TO CONTINUE READING

ಅಪಾಯ ಮಟ್ಟ ಮೀರಿದ ಮಾಲಿನ್ಯ : 
ವಾಯುಮಾಲಿನ್ಯ ನಿಯಂತ್ರಣಕ್ಕೆ ಈ ಬಾರಿ ಹಸಿರು ಪಟಾಕಿಯನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೂ ನಿಯಮ ಮೀರಿ ಹಲವಡೆ ರಾಸಾಯನಿಕಯುಕ್ತ ಪಟಾಕಿ ಬಳಕೆಯಾಗಿದೆ. ಪರಿಣಾಮವಾಗಿ  ನಗರದ ಹಲವು ಭಾಗಗಲ್ಲಿ ವಾಯು ಮಾಲಿನ್ಯ  ಅಪಾಯ ಮಟ್ಟಕ್ಕೆ ತಲುಪಿದೆ. 


ಇದನ್ನೂ ಓದಿ : ಸೈಟ್ ಅಥವಾ ಹಣ ಕೊಡದ ಕಂಪನಿಗೆ ರೂ.7 ಲಕ್ಷ 60 ಸಾವಿರ ದಂಡ


ವಾಯು ಮಾಲಿನ್ಯದಲ್ಲಿ  ಏರಿಕೆ : 
ಬೆಂಗಳೂರಿನ ನಾನಾ ಭಾಗದಲ್ಲಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಅಳೆಯಲು ಮಾಪನ ಆಳವಡಿಸಲಾಗಿದೆ. ಇದರ ಪ್ರಕಾರ ಹಲವು ಭಾಗಗಳಲ್ಲಿ ವಾತಾವರಣ ಡೇಂಜರ್ ಝೋನ್‍ನಲ್ಲಿ ಇರುವುದು ಬೆಳಕಿಗೆ ಬಂದಿದೆ.  ಪ್ರತಿನಿತ್ಯ ವಾಹನಗಳ ಹೊಗೆ, ಧೂಳಿನಿಂದ ವಾಯು ಮಾಲಿನ್ಯ  ಆಗುತ್ತಿತ್ತು. ಆದ್ರೆ ಈ ಬಾರಿ ಸಾಲು ಸಾಲು ರಜೆಯಿದ್ದರೂ ವಾಹನಗಳ ಓಡಾಟ ಕಡಿಮೆಯಿದ್ದರೂ ವಾಯು ಮಾಲಿನ್ಯ ಏರಿಕೆಯಾಗಿದೆ. 


ಯಾವ ಪ್ರದೇಶದಲ್ಲಿ ಗಾಳಿ ಗುಣಮಟ್ಟ ಕಳೆದುಕೊಂಡಿದೆ ? :
1. ಜಯನಗರ

ದೀಪಾವಳಿ ಮೊದಲ ದಿನ    282 AQI
ದೀಪಾವಳಿ ಕೊನೆಯ ದಿನ.  239 AQI 
ದೀಪಾವಳಿಗೂ ಮುನ್ನ       105 AQI 


2. ಹೆಬ್ಬಾಳ
ದೀಪಾವಳಿ ಮೊದಲ ದಿನ   176 AQI
ಇಂದಿನ ಗಾಳಿ ಗುಣಮಟ್ಟ    206 AQI 
ದೀಪಾವಳಿಗೂ ಮುನ್ನ         57 AQI


3. ಬಾಪೂಜಿ ನಗರ 
ದೀಪಾವಳಿ ಮೊದಲ ದಿನ      185 AQI
ಇಂದಿನ ಗಾಳಿ ಗುಣಮಟ್ಟ      251 AQI 
 ದೀಪಾವಳಿಗೂ ಮುನ್ನ.       90 AQI


4. ಸಿಲ್ಕ್ ಬೋರ್ಡ್-
ದೀಪಾವಳಿ ಮೊದಲ ದಿನ   226 AQI
ಇಂದಿನ ಗಾಳಿಗುಣಮಟ್ಟ.  239 AQI
ದೀಪಾವಳಿಗೂ ಮುನ್ನ     85 AQI 


ಇದನ್ನೂ ಓದಿ : ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಭಾರಿಸಬೇಕು: ವಿಜಯೇಂದ್ರ


5. ಹೊಂಬೇಗೌಡ ನಗರ
ದೀಪಾವಳಿ ಮೊದಲ ದಿನ    171 AQI
ಇಂದಿನ ಗಾಳಿ ಗುಣಮಟ್ಟ.     176 AQI 
ದೀಪಾವಳಿಗೂ ಮುನ್ನ.        92 AQI 


6. ಜಿಗಣಿ
ದೀಪಾವಳಿ ಮೊದಲ ದಿನ     161 AQI
ಇಂದಿನ ಗಾಳಿ ಗುಣಮಟ್ಟ.     127 AQI
ದೀಪಾವಳಿಗೂ ಮುನ್ನ.        80 AQI


7. ಸಿಟಿ ರೈಲ್ವೆ ಸ್ಟೇಷನ್
ದೀಪಾವಳಿ ಮೊದಲ ದಿನ        100AQI
ಇಂದಿನ ಗಾಳಿ ಗುಣಮಟ್ಟ.       127 AQI 
ದೀಪಾವಳಿಗೂ ಮುನ್ನ              67 AQI


8. ಮೈಲಸಂದ್ರ
ದೀಪಾವಳಿ ಮೊದಲ ದಿನ    186 AQI
ಇಂದಿನ ಗಾಳಿ ಗುಣಮಟ್ಟ    176 AQI
ದೀಪಾವಳಿಗೂ ಮುನ್ನ        67 AQI


9. ಶಿವಪುರ, ಪೀಣ್ಯ
ದೀಪಾವಳಿ ಮೊದಲ ದಿನ      104 AQI
ಇಂದಿನ ಗಾಳಿ ಗುಣಮಟ್ಟ    ‌‌.  180 AQI 
ದೀಪಾವಳಿಗೂ ಮುನ್ನ     80 AQI


10. ಬಾಪೂಜಿ ನಗರ-
ದೀಪಾವಳಿ ಮೊದಲ ದಿನ      210 AQI
ಇಂದಿನ ಗಾಳಿ ಗುಣಮಟ್ಟ.     251 AQI
ದೀಪಾವಳಿಗೂ ಮುನ್ನ      85 AQI


ಇದನ್ನೂ ಓದಿ : ವಿದ್ಯುತ್ ಕಳ್ಳತನ ಒಪ್ಪಿಕೊಂಡ ಕುಮಾರಸ್ವಾಮಿಗೆ ಅಭಿನಂದನೆ : ಡಿಸಿಎಂ ಡಿ.ಕೆ.ಶಿವಕುಮಾರ್


ಕಳೆದ ವರ್ಷ  ಹೇಗಿತ್ತು ಗಾಳಿಯ ಗುಣಮಟ್ಟ :                    
ಮೆಜೆಸ್ಟಿಕ್
 
ಹಬ್ಬದ ನಂತರ   -  AQI 114   
 ಹಬ್ಬಕ್ಕೂ ಮೊದಲು - AQI 90


ಹೊಂಬೇಗೌಡನಗರ   
ಹಬ್ಬದ ನಂತರ   -  AQI 120    
 ಹಬ್ಬಕ್ಕೂ ಮೊದಲು -AQI 96                    


ಜಯನಗರ 5TH ಬ್ಲಾಕ್  
ಹಬ್ಬದ ನಂತರ   - AQI 210  


ಹಬ್ಬಕ್ಕೂ ಮೊದಲು -AQI93


BTM ಲೇಔಟ್
ಹಬ್ಬದ ನಂತರ   - AQI 102    


ಹಬ್ಬಕ್ಕೂ ಮೊದಲು -AQI 72


ಸಿಲ್ಕ್ ಬೋರ್ಡ್  
ಹಬ್ಬದ ನಂತರ   -AQI 246 
ಹಬ್ಬಕ್ಕೂ ಮೊದಲು -AQI 180 - 190


ಹೆಬ್ಬಾಳ     
ಹಬ್ಬದ ನಂತರ   - AQI 180
ಹಬ್ಬಕ್ಕೂ ಮೊದಲು -AQI 100 - 115


ಪೀಣ್ಯ   
ಹಬ್ಬದ ನಂತರ   -    AQI 190 - 210
ಹಬ್ಬಕ್ಕೂ ಮೊದಲು -  AQI 108


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.