ಸೈಟ್ ಅಥವಾ ಹಣ ಕೊಡದ ಕಂಪನಿಗೆ ರೂ.7 ಲಕ್ಷ 60 ಸಾವಿರ ದಂಡ

ಹುಬ್ಬಳ್ಳಿಯ ಅಮರಗೋಳದ ನಿವಾಸಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವ ಚೇತನ ಅಥಣಿ ಅನ್ನುವವರು 2017ರಲ್ಲಿ ರಾಯಭಾಗನ ಎಸ್.ಎಸ್.ಗೋಲ್ಡನ್ ಕಂಪನಿಗೆ ಸದಸ್ಯರಾಗಿದ್ದರು. ಎದುರುದಾರರ ಜಾಹಿರಾತಿಗೆ ಮಾರು ಹೋಗಿ ಅವರು ದಿ:30/06/2017 ರಂದು ರೂ.3,50,000/- ಹಣ ನೀಡಿದ್ದರು.

Written by - Manjunath N | Last Updated : Nov 14, 2023, 03:46 PM IST
  • ಮೂರುವರೆ ವರ್ಷದ ಅವಧಿ ಮುಗಿದ ನಂತರ ಎದುರುದಾರ ಗೋಲ್ಡನ್ ಲೈಪ್ ಕಂಪನಿಯವರು ದೂರುದಾರರಿಗೆ ಪ್ಲಾಟ್ ಕೊಡಲಿಲ್ಲ
  • ಒಪ್ಪಂದದಂತೆ ರೂ.7 ಲಕ್ಷ ಹಣವನ್ನು ವಾಪಸ್ಸು ಕೊಡಲಿಲ್ಲ
  • ಈ ಬಗ್ಗೆ ದೂರುದಾರ ಹಲವು ಬಾರಿ ವಿನಂತಿಸಿದರೂ ಎದುರುದಾರರು ಅದಕ್ಕೆ ಸ್ಪಂದಿಸಿಲ್ಲ
 ಸೈಟ್ ಅಥವಾ ಹಣ ಕೊಡದ ಕಂಪನಿಗೆ ರೂ.7 ಲಕ್ಷ 60 ಸಾವಿರ ದಂಡ  title=

ಧಾರವಾಡ : ಹುಬ್ಬಳ್ಳಿಯ ಅಮರಗೋಳದ ನಿವಾಸಿ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುವ ಚೇತನ ಅಥಣಿ ಅನ್ನುವವರು 2017ರಲ್ಲಿ ರಾಯಭಾಗನ ಎಸ್.ಎಸ್.ಗೋಲ್ಡನ್ ಕಂಪನಿಗೆ ಸದಸ್ಯರಾಗಿದ್ದರು. ಎದುರುದಾರರ ಜಾಹಿರಾತಿಗೆ ಮಾರು ಹೋಗಿ ಅವರು ದಿ:30/06/2017 ರಂದು ರೂ.3,50,000/- ಹಣ ನೀಡಿದ್ದರು.

ಇದನ್ನೂ ಓದಿ: ಯಲಹಂಕದಲ್ಲಿ ವಿಜಯೇಂದ್ರ ಪರ S.R.ವಿಶ್ವನಾಥ್ ಬ್ಯಾಟಿಂಗ್‌

ಮೂರುವರೆ ವರ್ಷದಲ್ಲಿ ರೂ.7 ಲಕ್ಷ ಕಿಮ್ಮತ್ತಿನ ಪ್ಲಾಟ್ ಕೊಡುವುದಾಗಿ ಅಥವಾ ರೂ.7 ಲಕ್ಷ ಹಣ ವಾಪಸ್ಸು ಕೊಡುವುದಾಗಿ ಎದುರುದಾರರು ಒಪ್ಪಿ ಆ ಬಗ್ಗೆ ಸರ್ಟಿಫಿಕೇಟ್ ಕೊಟ್ಟಿದ್ದರು. ಮೂರುವರೆ ವರ್ಷದ ಅವಧಿ ಮುಗಿದ ನಂತರ ಎದುರುದಾರ ಗೋಲ್ಡನ್ ಲೈಪ್ ಕಂಪನಿಯವರು ದೂರುದಾರರಿಗೆ ಪ್ಲಾಟ್ ಕೊಡಲಿಲ್ಲ. ಒಪ್ಪಂದದಂತೆ ರೂ.7 ಲಕ್ಷ ಹಣವನ್ನು ವಾಪಸ್ಸು ಕೊಡಲಿಲ್ಲ. ಈ ಬಗ್ಗೆ ದೂರುದಾರ ಹಲವು ಬಾರಿ ವಿನಂತಿಸಿದರೂ ಎದುರುದಾರರು ಅದಕ್ಕೆ ಸ್ಪಂದಿಸಿಲ್ಲ. ಕಾರಣ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ದಿ:02/01/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಸಲ್ಲಿಸಿದ್ದರು.

ಇದನ್ನೂ ಓದಿ: ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಭಾರಿಸಬೇಕು: ವಿಜಯೇಂದ್ರ

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಎದುರುದಾರರು ನೀಡಿರುವ ಸರ್ಟಿಫಿಕೇಟನಲ್ಲಿ ಹಣ ವಿನಿಯೋಗಿಸಿದ ಮೂರುವರೆ ವರ್ಷಕ್ಕೆ ರೂ.7 ಲಕ್ಷ ಮೌಲ್ಯದ ಸೈಟು ಅಥವಾ ರೂ.7 ಲಕ್ಷ ಹಣ ಹಿಂದಿರುಗಿಸುವ ಬಗ್ಗೆ ಎದುರುದಾರ ಗೋಲ್ಡನ್ ಲೈಫ್ ಕಂಪನಿಯವರು ಒಪ್ಪಿರುತ್ತಾರೆ. ಆದರೆ ಮೂರುವರೆ ವರ್ಷ ಅವಧಿ ಮುಗಿದ ಮೇಲೆ ಸೈಟು ಅಥವಾ ರೂ.7 ಲಕ್ಷ ಹಣ ಕೊಡಲು ಎದುರುದಾರರು ಒಪ್ಪುತ್ತಿಲ್ಲ. ಅಂತಹ ಅವರ ನಡಾವಳಿಕೆ ಗ್ರಾಹಕರ ಹಿತರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ರೂ.7 ಲಕ್ಷ ಹಣ ಮತ್ತು ಅದರ ಮೇಲೆ ದಿ:30/12/2020 ರಿಂದ ಶೇ.8 ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ನೀಡುವಂತೆ ಎದುರುದಾರರಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗೆ ರೂ. 50,000/- ಪರಿಹಾರ ಮತ್ತು ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಎದುರುದಾರರಿಗೆ ನಿರ್ದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News