ಬೆಂಗಳೂರು : ವರನಟ ಡಾ.ರಾಜ್‌ಕುಮಾರ್​ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪದಡಿ ಪುನೀತ್​ ಕೆರೆಹಳ್ಳಿಗೆ ಕನ್ನಡಪರ ಹೋರಾಟಗಾರರು ಧರ್ಮದೇಟು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ನಿನ್ನೆ ರಾತ್ರಿ ಚಾಮರಾಜಪೇಟೆಯಲ್ಲಿ ಘಟನೆ ನಡೆದಿದ್ದು, ಇತ್ತೀಚೆಗೆ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಸಂಬಂಧಪಟ್ಟಂತೆ ಫೇಸ್‍ಬುಕ್ ನಲ್ಲಿ ಮಾತನಾಡಿದ್ದ ಪುನೀತ್ ಕೆರೆಹಳ್ಳಿಗೆ ಕರೆ ಮಾಡಿದ್ದ ಕನ್ನಡಪರ ಸಂಘಟನೆಯ ಸಿ.ಎಂ.ಶಿವಕುಮಾರ್ ನಾಯ್ಕ್ ಬಣ 'ರಾಜ್ ಕುಮಾರ್ ಫ್ಯಾಮಿಲಿ ಬಗ್ಗೆ ಹಗುರವಾಗಿ ಮಾತನಾಡಿದ್ದೀಯಾ? ನೀನು ಕ್ಷಮೆ ಕೇಳಬೇಕು' ಎಂದಿದ್ದರಂತೆ.


ಇದನ್ನೂ ಓದಿ: BBK 9 Finale : ಈ ದಿನದಂದು ನಡೆಯಲಿದೆ ಬಿಗ್ ಬಾಸ್ ಗ್ರ್ಯಾಂಡ್‌ ಫಿನಾಲೆ


ಇದಕ್ಕೆ ಪ್ರತಿಯಾಗಿ ಪುನಿತ್ ಕೆರೆಹಳ್ಳಿ 'ರಾಜ್ ಕುಟುಂಬದ ಕುರಿತು ನಾನು ಮಾತನಾಡಿಲ್ಲ, ಕ್ಷಮೆ ಕೇಳುವುದಿಲ್ಲ. ಮಾತನಾಡುವುದಾದರೆ ಚಾಮರಾಜಪೇಟೆಗೆ ಬನ್ನಿ' ಎಂದಾಗ ರೊಚ್ಚಿಗೆದ್ದ ಶಿವಕುಮಾರ್ ನಾಯ್ಕ್ ಬಣ ಚಾಮರಾಜಪೇಟೆಗೆ ತೆರಳಿದೆ. ಈ ಸಂದರ್ಭದಲ್ಲಿ ಪುನೀತ್ ಕೆರೆಹಳ್ಳಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಎರಡೂ ಬಣಗಳ ನಡುವೆ ಗಲಾಟೆಯಾಗಿದೆ‌. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಚಾಮರಾಜಪೇಟೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.


ಸದ್ಯ ಶಿವಕುಮಾರ್ ನಾಯ್ಕ್ ನೀಡಿದ ದೂರಿನನ್ವಯ ಪುನೀತ್ ಕೆರೆಹಳ್ಳಿ‌ ವಿರುದ್ಧ ಜಾತಿ ನಿಂದನೆ ಕೇಸ್ ಹಾಗೂ ಪುನಿತ್ ಕೆರೆಹಳ್ಳಿ‌ ನೀಡಿದ ದೂರಿನನ್ವಯ ಶಿವಕುಮಾರ್ ನಾಯ್ಕ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.