ದಕ್ಷಿಣ ಕನ್ನಡ: ದೇಶಾದ್ಯಂತ ಇದೀಗ ದೇವಸ್ಥಾನಗಳ ಕುರುಹು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ರಾಜರ ಕಾಲದಲ್ಲಿ ದೇವಸ್ಥಾನಗಳನ್ನು ಒಡೆದು ಅಲ್ಲಿ ಮಸೀದಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಕುರುಹು ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಇತ್ತೀಚೆಗೆ ಉತ್ತರಪ್ರದೇಶದ ವಾರಣಾಸಿಯಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನಲಾಗಿತ್ತು. ಸದ್ಯ ಆ ವಿಚಾರ ಕೋರ್ಟ್‌ನಲ್ಲಿ ನಿರ್ಧಾರವಾಗಲಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟಕ್ಕೆ ಕೊನೆ ಯಾವಾಗ!?


ಅದೇ ಮಾದರಿಯಲ್ಲಿ ಕರ್ನಾಟಕದ ಮಂಗಳೂರಿನ ಮಳಲಿ ಎಂಬಲ್ಲಿರುವ ಮಸೀದಿಯಲ್ಲಿ ದೇವಸ್ಥಾನದ ಕುರುಹು ಇದೆ ಎಂದು ಆರೋಪಿಸಿ ಇಂದು ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ತಾಂಬೂಲ ಪ್ರಶ್ನೆಯನ್ನು ಇಡಲಾಗುತ್ತಿದೆ. 


ಇಲ್ಲಿನ ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆಯನ್ನು ಇಡಲು ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಗಣಪತಿ ಪೂಜೆ ಮತ್ತು ನವಗ್ರಹ ಪೂಜೆಯ ಮೂಲಕ ತಾಂಬೂಲ ಪ್ರಶ್ನೆ ಆರಂಭಿಸಲಾಗುತ್ತಿದ್ದು, ಕೇರಳದ ಗೋಪಾಲಕೃಷ್ಣ ಪೊದುವಾಳ್ ಮತ್ತು ಒಬ್ಬರು ಜ್ಯೋತಿಷಿಗಳಿಂದ ಪ್ರಶ್ನಾ ಚಿಂತನೆ ನೆರವೇರಲಿದೆ. 


ರಾಮಾಂಜನೇಯ ಭಜನಾ ಮಂದಿರವು ಮಳಲಿಯ ಬದ್ರಿಯಾ ಜುಮ್ಮಾ ಮಸೀದಿಯಿಂದ 1ಕೀ.ಮಿ ದೂರದಲ್ಲಿದೆ.  ಹಿಂದೂ ಪ್ರಮುಖರು, ಮಳಲಿ ಗ್ರಾಮಸ್ಥರು ಹಾಗೂ ಬಿಜೆಪಿ ಶಾಸಕರಾದ ರಾಜೇಶ್ ನಾಯ್ಕ್,  ಭರತ್ ಶೆಟ್ಟಿ ಮತ್ತು ಉಮಾನಾಥ್ ಕೋಟ್ಯಾನ್ ಭಾಗಿಯಾಗಲಿದ್ದಾರೆ. 


ತಾಂಬೂಲ ಪ್ರಶ್ನೆಯೆಂದರೆ ವೀಳ್ಯದೆಲೆಯ ರೇಖೆ ನೋಡಿ ಕಾಲ ಮತ್ತು ಗ್ರಹ ಗತಿಗಳ ಆಧಾರದಲ್ಲಿ ನಿರ್ಧಾರ ಮಾಡುವುದು ಅಥವಾ ಉತ್ತರ ಕಂಡುಕೊಳ್ಳುವುದು. 


ಇನ್ನು ತಾಂಬೂಲ ಪ್ರಶ್ನೆ ನಡೆಯಲಿರುವ ಭಜನಾ ಮಂದಿರದ ಸುತ್ತ ಭಾರಿ‌ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಡಿಸಿಪಿ ಹರಿರಾಂ ಶಂಕರ್ ನೇತೃತ್ವ ವಹಿಸಲಿದ್ದಾರೆ. 2 ಎಸಿಪಿ, 7 ಇನ್ಸ್‌ಪೆಕ್ಟರ್, 12 ಪಿಎಸ್ಐ, 10 ಎಎಸ್‌ಐ, 120 ಸಿವಿಲ್ ಸ್ಟಾಪ್‌ಗಳನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ 3 ಕೆಎಸ್ಆರ್‌ಪಿ ತುಕಡಿ, 3 ಸಿಎಆರ್ ತುಕಡಿ ಸ್ಥಳದಲ್ಲಿ ನಿಯೋಜನೆಗೊಂಡಿದೆ. ಇನ್ನು ಮಸೀದಿಯ 500 ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. 


ಮಂಗಳೂರು ನಗರ ಹೊರವಲಯದ ಮಳಲಿ ಪೇಟೆ ಜುಮಾ ಮಸೀದಿಯ ಪುನ‌ರ್ ನಿರ್ಮಾಣದ ವೇಳೆ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸಂಘ ಪರಿವಾರದ ಸಂಘಟನೆಗಳು ತಾಂಬೂಲ ಪ್ರಶ್ನೆ ಕಾರ್ಯಕ್ರಮ ನಡೆಸುತ್ತಿವೆ. ಮಳಲಿ ಮಸೀದಿಯ ಸುತ್ತಮುತ್ತ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. 


ಇದನ್ನು ಓದಿ: BSNLಗಿಂತ ಹಲವು ಪಟ್ಟು ಅಗ್ಗದ ದರದಲ್ಲಿದೆ ಈ ಇಂಟರ್ನೆಟ್ ಪ್ಲಾನ್, ನಿತ್ಯ ₹29 ಕ್ಕೆ 300 Mbps ವೇಗ


ಇನ್ನು ಮಂಗಳೂರು ನಗರ  ಪೊಲೀಸ್ ಆಯುಕ್ತ ಶಶಿಕುಮಾರ್ ಈ ಬಗ್ಗೆ ಮಾತನಾಡಿದ್ದು, "ಹಿಂದುತ್ವ ಸಂಘಟನೆಗಳ ನೇತೃತ್ವದಲ್ಲಿ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ತೆಂಕ ಉಳಿಪಾಡಿ ಗ್ರಾಮದ ಜೋಡು ತಡಮೆಯ ಬಳಿಯ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ಪೂರ್ವಾಪರ ತಿಳಿದುಕೊಳ್ಳಲು ಮೇ 25ರಂದು ಬೆಳಗ್ಗೆ 8.30ರಿಂದ ತಾಂಬೂಲ ಪ್ರಶ್ನೆ ಕಾರ್ಯಕ್ರಮ ನಡೆಸಲು ಹೊರಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಳಲಿ ಪೇಟೆ ಜುಮಾ ಮಸೀದಿಯ ಸುತ್ತಮುತ್ತಲಿನ 500 ಮೀಟರ್ (ಕಾಚಿಲಕೋಡಿಯಿಂದ ಮಳಲಿ ಕಡೆಗೆ ಬರುವ ರಸ್ತೆ, ಗಂಜಿಮಠದಿಂದ ಮಳಲಿ ಮಸೀದಿ ಕಡೆಗೆ ಬರುವ ರಸ್ತೆ ಹಾಗೂ ಕೈಕಂಬ ಕಡೆಯಿಂದ ಜೋಡು ತಡಮೆ ರಸ್ತೆ)ವರೆಗೆ ಮೇ 24ರ ರಾತ್ರಿ 8ರಿಂದ ಮೇ 26ರ ಬೆಳಗ್ಗೆ 8ರವರೆಗೆ ಸೆಕ್ಷನ್ 144ರ ಅನ್ವಯ ಸೆಕ್ಷನ್ ಜಾರಿಗೊಳಿಸಲಾಗಿದೆ" ಎಂದು ತಿಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.