Cheap And Best Broadband Internet Plan - ಒಂದು ವೇಳೆ ನೀವೂ ಕೂಡ ಅತ್ಯುತ್ತಮ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಯೋಜನೆಯ ಹುಡುಕಾಟದಲ್ಲಿದ್ದರೆ, ನಿಮ್ಮ ಹುಡುಕಾಟಕ್ಕೆ ಇಂದೇ ಅಂತ್ಯಹಾಡಿ. ಹಾಗೆ ನೋಡಿದರೆ BSNL ಹಾಗೂ Excitel ಎರಡೂ ಕಂಪನಿಗಳ ಅಗ್ಗದ ಯೋಜನೆಗಳನ್ನು ಚಲಾಯಿಸುತ್ತವೆ. ಇಂದು ನಾವು ನಮಗೆ ಈ ಎರಡೂ ಕಂಪನಿಗಳ 300 ಎಂಬಿಪಿಎಸ್ ಯೋಜನೆಗಳಲ್ಲಿ ಯಾವುದು ಉತ್ತಮ ಎಂಬುದನ್ನು ಹೇಳಿಕೊಡಲಿದ್ದೇವೆ. ಈ ಪ್ಲಾನ್ ಗಳ ಕುರಿತು ಅಧಿಕ ಮಾಹಿತಿ ಪಡೆದುಕೊಳ್ಳೋಣ.
ಇದನ್ನೂ ಓದಿ-WhatsApp ಬಳಕೆದಾರರಿಗೊಂದು ಮಹತ್ವದ ಮಾಹಿತಿ, ಈ ಫೋನ್ ಗಳಲ್ಲಿ ವಾಟ್ಸ್ ಆಪ್ ತನ್ನ ಕೆಲಸ ನಿಲ್ಲಿಸಲಿದೆ
Excitel 300 Mbps ಬ್ರಾಡ್‌ಬ್ಯಾಂಡ್ ಯೋಜನೆ
ಈ ಲೇಖನದಲ್ಲಿ ನಾವು ನಿಮಗೆ ಅತ್ಯಂತ ಕೈಗೆಟುಕುವ ದರದ ಬ್ರಾಡ್‌ಬ್ಯಾಂಡ್ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ನೀವು ಮಾಸಿಕ ಆಯ್ಕೆಗೆ ಹೋಗುತ್ತಿದ್ದರೆ, Excitel ನ 300 Mbps ಬ್ರಾಡ್‌ಬ್ಯಾಂಡ್ ಯೋಜನೆಯು ತಿಂಗಳಿಗೆ 899 ರೂಪಾಯಿಗಳ ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಆದರೆ, ಬಳಕೆದಾರರು ಒಂದು ವೇಳೆ ದೀರ್ಘಾವಧಿಯ ಯೋಜನೆಯನ್ನು ಆಯ್ದುಕೊಂಡರೆ, ಯೋಜನೆಯ ಮಾಸಿಕ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. ಡೇಟಾದ ಮೇಲೆ ಯಾವುದೇ ನ್ಯಾಯೋಚಿತ-ಬಳಕೆ-ನೀತಿ (FUP) ಮಿತಿ ಇರುವುದಿಲ್ಲ, ಆದ್ದರಿಂದ ಬಳಕೆದಾರರು ಡೇಟಾ ಖಾಲಿಯಾಗುವ ಬಗ್ಗೆ ಚಿಂತಿಸದೆ ಮನಸೋಇಚ್ಚೆ ಇಂಟರ್ನೆಟ್ ಅನ್ನು ಬಳಸಬಹುದು.
ಇದನ್ನೂ ಓದಿ-Smartphone Tips: ನಿಮ್ಮೀ ತಪ್ಪುಗಳು ನಿಮ್ಮ ಸ್ಮಾರ್ಟ್ ಫೋನ್ ಜೀವಿತಾವಧಿಗೆ ಮಾರಕ, ಎಚ್ಚರ!
BSNL 300 Mbps ಯೋಜನೆ
ದೇಶದ ಪ್ರಮುಖ ISP ಗಳಲ್ಲಿ ಒಂದಾಗಿರುವ BSNL ಕೂಡ 300 Mbps ಯೋಜನೆಯನ್ನು ನೀಡುತ್ತದೆ, ಇದು ಟೆಲ್ಕೊ ಮೂಲಕ ನೀಡಲಾಗುವ ಅತ್ಯುನ್ನತ ಯೋಜನೆಯಾಗಿದೆ. ಈ ಯೋಜನೆಯನ್ನು 'ಫೈಬರ್ ಅಲ್ಟ್ರಾ' ಎಂದು ಕರೆಯಲಾಗುತ್ತದೆ. ತಿಂಗಳಿಗೆ 1,499 ರೂ. ಬೆಲೆಯ ಈ ಯೋಜನೆಯಲ್ಲಿ ಬಳಕೆದಾರರು 4000GB ಡೇಟಾ ಬಲಕೆಗಾಗಿ 300 Mbps ಇಂಟರ್ನೆಟ್ ವೇಗವನ್ನು ಪಡೆಯಬಹುದು, ನಂತರ ಇಂಟರ್ನೆಟ್ ವೇಗ 4 Mbps ಗೆ ಇಳಿಯುತ್ತದೆ. ಈ BSNL ಯೋಜನೆಯು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಪ್ರೀಮಿಯಂ ಪ್ಯಾಕ್‌ಗೆ ಉಚಿತ ಪ್ರವೇಶ ಒಳಗೊಂಡಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.