ಶನಿ ಕೋಪದಿಂದ ಪಾರಾಗಲು ಈ ಕೆಲಸಗಳಿಂದ ದೂರವಿರಿ; ಇಲ್ಲದಿದ್ರೆ ಸಮಸ್ಯೆ ತಪ್ಪಿದ್ದಲ್ಲ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದರಿಂದ ಶನಿದೇವನ ಕೋಪದಿಂದ ಪಾರಾಗಬಹುದಂತೆ.   

Written by - Puttaraj K Alur | Last Updated : May 24, 2022, 08:53 PM IST
  • ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಲೆಕ್ಕವನ್ನು ಇಡುತ್ತಾನಂತೆ
  • ಶನಿದೇವನ ಅನುಗ್ರಹ ಪಡೆಯಲು ಜನರು ಶನಿವಾರದಂದು ವಿಶೇಷ ಪೂಜೆ ಸಲ್ಲಿಸುತ್ತಾರೆ
  • ಹಿಂದೂ ಧರ್ಮದಲ್ಲಿ ಶನಿವಾರ ಕೆಲವು ಕೆಲಸಗಳನ್ನು ಮಾಡದಂತೆ ಸಲಹೆ ನೀಡಲಾಗಿದೆ
ಶನಿ ಕೋಪದಿಂದ ಪಾರಾಗಲು ಈ ಕೆಲಸಗಳಿಂದ ದೂರವಿರಿ; ಇಲ್ಲದಿದ್ರೆ ಸಮಸ್ಯೆ ತಪ್ಪಿದ್ದಲ್ಲ! title=
ಶನಿದೇವನ ಮೆಚ್ಚಿಸಲು ಈ ವಿಷಯ ನೆನಪಿನಲ್ಲಿಡಿ

ನವದೆಹಲಿ: ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲಾ 9 ಗ್ರಹಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಇದರಲ್ಲಿ ಶನಿ ಗ್ರಹವನ್ನು ನ್ಯಾಯ ಮತ್ತು ಕ್ರಿಯೆಯ ದೇವರು ಎಂದು ಹೇಳಲಾಗುತ್ತದೆ. ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಲೆಕ್ಕವನ್ನು ಇಡುತ್ತಾನಂತೆ. ಶನಿದೇವನಿಗೆ ಮನುಷ್ಯರು ಮಾತ್ರವಲ್ಲದೆ ದೇವರುಗಳು ಸಹ ಹೆದರುತ್ತಾರೆ. ಶನಿದೇವನ ಅನುಗ್ರಹ ಪಡೆಯಲು ಜನರು ಶನಿವಾರದಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದರಿಂದ ಶನಿದೇವನ ಕೋಪದಿಂದ ಪಾರಾಗಬಹುದಂತೆ.   

ಹಿಂದೂ ಧರ್ಮದಲ್ಲಿ ಶನಿವಾರದಂದು ಕೆಲವು ಕೆಲಸಗಳನ್ನು ಮಾಡದಂತೆ ಸಲಹೆ ನೀಡಲಾಗಿದೆ. ಈ ವಿಷಯಗಳ ಬಗ್ಗೆ ಕಾಳಜಿ ವಹಿಸುವುದರಿಂದ  ಯಾವುದೇ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಶನಿಯ ದುಷ್ಟ ಕಣ್ಣಿನಿಂದ ತಪ್ಪಿಸಿಕೊಳ್ಳಬಹುದು. ವ್ಯಕ್ತಿಯ ಜಾತಕದಲ್ಲಿ ಶನಿಯು ದುರ್ಬಲನಾಗಿದ್ದರೆ, ಶನಿಯು ದುಷ್ಟ ಗ್ರಹಗಳಿಂದ ಪೀಡಿತನಾಗಿದ್ದರೆ, ಶನಿಯ ಮಹಾದಶಾದಲ್ಲಿ ವ್ಯಕ್ತಿಯು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಜ್ಯೋತಿಷ್ಯವು ನಂಬುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶನಿಯ ಕೋಪವನ್ನು ತಪ್ಪಿಸಲು ವ್ಯಕ್ತಿಯು ಈ ಕೆಳಗಿನ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಇದನ್ನೂ ಓದಿ: Name Astrology: ಈ ಹೆಸರಿನ ಹುಡುಗಿಯರು ತುಂಬಾ ಮುದ್ದಾಗಿರುತ್ತಾರೆ!

ಶನಿದೇವನ ಮೆಚ್ಚಿಸಲು ಈ ವಿಷಯಗಳನ್ನು ನೆನಪಿನಲ್ಲಿಡಿ

  • ನಿಮ್ಮ ಜಾತಕದಲ್ಲಿ ಶನಿಯ ಉತ್ತಮ ಪರಿಣಾಮ ಬಯಸಿದರೆ, ಯಾವುದೇ ರೀತಿಯ ತಪ್ಪು ಕಾರ್ಯಗಳನ್ನು ತಕ್ಷಣವೇ ನಿಲ್ಲಿಸಬೇಕು. ಒಂದು ವೇಳೆ ಹೀಗೆ ಮಾಡಿದ್ರೆ ಶನಿದೇವನಿಗೆ ಕೋಪ ಬರುತ್ತದೆ.
  • ಸುಳ್ಳು ಹೇಳುವವರನ್ನು ಶನಿದೇವ ಎಂದಿಗೂ ಕ್ಷಮಿಸುವುದಿಲ್ಲ. ಆದ್ದರಿಂದ ನೀವು ನಿಮ್ಮ ಜೀವನದಲ್ಲಿ ಶಾಂತಿಯನ್ನು ಬಯಸಿದರೆ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು.
  • ಬಡವರು ಮತ್ತು ನಿರ್ಗತಿಕರೊಂದಿಗೆ ಎಂದಿಗೂ ಅನುಚಿತವಾಗಿ ವರ್ತಿಸಬೇಡಿ. ಅಲ್ಲದೆ, ಯಾರೊಂದಿಗೂ ನಿಂದನೀಯ ಪದಗಳನ್ನು ಬಳಸಬಾರದು.
  • ಮನೆಗೆ ಬಂದ ಅತಿಥಿಯನ್ನು ದೇವರಂತೆ ಗೌರವಿಸಬೇಕು. ಅವರಿಗೆ ಆದರದ ಸ್ವಾಗತ ಕೋರಿ ಸತ್ಕರಿಸಬೇಕು.   
  • ಮಹಿಳೆಯರನ್ನು ಯಾವತ್ತೂ ಅವಮಾನಿಸಬಾರದು. ನಿಮ್ಮ ಪತ್ನಿಯನ್ನು ಗೌರವಿಸಿ ಮತ್ತು ಅವರಿಗೆ ಸಂಪೂರ್ಣ ಗೌರವವನ್ನು ನೀಡಬೇಕು.
  • ಶನಿದೇವನನ್ನು ಮೆಚ್ಚಿಸಲು ಮದ್ಯಪಾನದಿಂದ ದೂರವಿರಬೇಕು.
  • ಅನೈತಿಕ ಕೃತ್ಯಗಳನ್ನು ಮಾಡುವುದನ್ನು ತಪ್ಪಿಸಬೇಕು. ಒಬ್ಬ ವ್ಯಕ್ತಿಯು ಅನೈತಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಆತನ ಕಾರ್ಯಗಳು ತಪ್ಪಾಗುತ್ತವೆ. ಮತ್ತು ಶನಿ ದೇವನು ತಪ್ಪು ಕೆಲಸಗಳಿಗೆ ಕೆಟ್ಟ ಫಲಿತಾಂಶಗಳನ್ನು ನೀಡುತ್ತಾನೆ.
  • ಯಾರಿಗಾದರೂ ಲಾಭ ಅಥವಾ ಹಾನಿಗಾಗಿ ಸುಳ್ಳು ಸಾಕ್ಷ್ಯವನ್ನು ನೀಡಬಾರದು. ಈ ರೀತಿ ಮಾಡುವವರನ್ನು ಶನಿದೇವ ಎಂದಿಗೂ ಕ್ಷಮಿಸುವುದಿಲ್ಲ ಮತ್ತು ಅವರನ್ನು ಕಠಿಣವಾಗಿ ಶಿಕ್ಷಿಸುತ್ತಾನೆ.
  • ದುಡಿಯುವ ಜನರನ್ನು ಅವಮಾನಿಸಬೇಡಿ. ಅವರಿಗೆ ಸಂಪೂರ್ಣ ಗೌರವವನ್ನು ನೀಡಿ ಮತ್ತು ಅದೇ ರೀತಿ ಅವರ ಶ್ರಮಕ್ಕೆ ಸಂಪೂರ್ಣ ಪರಿಹಾರ ನೀಡಬೇಕು.
  • ಶನಿದೇವನ ಆಶೀರ್ವಾದ ಪಡೆಯಲು ಈ ದಿನ ಶನಿದೇವನನ್ನು ಕ್ರಮಬದ್ಧವಾಗಿ ಪೂಜಿಸಬೇಕು. ಶನಿದೇವನಿಗೆ ಸಾಸಿವೆ ಎಣ್ಣೆ, ಕಪ್ಪು ಎಳ್ಳು ಇತ್ಯಾದಿಗಳನ್ನು ಅರ್ಪಿಸಿ. ಶನಿಗೆ ಸಂಬಂಧಿಸಿದ ವಸ್ತುಗಳನ್ನು ಬಡವರಿಗೆ ದಾನ ಮಾಡಿ.

ಇದನ್ನೂ ಓದಿ: Vastu Tips: ದಂಪತಿ ಮಧ್ಯೆ ಕಲಹ ತಪ್ಪಿಸಲು ಬೆಡ್‌ ರೂಮ್‌ ವಾಸ್ತು ಹೀಗಿರಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News