ಬೆಂಗಳೂರು: ಅಂಬರೀಶ್ ಪಾರ್ಥೀವ ಶರೀರವನ್ನು ಅವರ ತವರು ಜಿಲ್ಲೆ ಮಂಡ್ಯಕ್ಕೆ ಕೊಂಡೊಯ್ಯಲು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಅಂಬುಲೆನ್ಸ್ ನಲ್ಲಿ ರವಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಎಚ್ಎಎಲ್ ವಿಮಾನ ನಿಲ್ದಾಣದಿಂದ ಮಂಡ್ಯದ ಗಂಡಿನ ಪಾರ್ಥೀವ ಶರೀರ ಹೆಲಿಕಾಪ್ಟರ್ ಮೂಲಕ ಮಂಡ್ಯದತ್ತ ಸಾಗಲಿದೆ.


ರಾತ್ರಿಯಿಡೀ ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂ ನಲ್ಲಿ 'ಅಮರನಾಥ್' ಪಾರ್ಥೀವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಬೆಳಿಗ್ಗೆ 7 ಗಂಟೆಗೆ ಪುನಃ ಕಂಠೀರವ ಸ್ಟೇಡಿಯಂಗೆ ತರಲಾಗುವುದು.


ಅಂಬರೀಶ್ ಅವರು ಮಂಡ್ಯದ ಗಂಡು. ರೆಬಲ್ ಸ್ಟಾರ್ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಬೇಕೆಂದು ಒತ್ತಾಯಿಸಿ ಅಂಬರೀಶ್ ಅಭಿಮಾನಿಗಳು ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಹೆಲಿಕಾಫ್ಟರ್‌ ಮೂಲಕ ಮಂಡ್ಯಗೆ ಪಾರ್ಥಿವ ಶರೀರವನ್ನು ರವಾನಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು.


ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೇನಾ ಹೆಲಿಕಾಪ್ಟರ್ ಮೂಲಕ ಅಂಬಿ ಮೃತ ಶರೀರ ರವಾನೆಗೆ ಹೆಲಿಕಾಪ್ಟರ್ ನೀಡುವಂತೆ ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದರು. 
 
ಈಗ ಎಚ್​ಎಎಲ್​​ಗೆ ಪಾರ್ಥಿವ ಶರೀರ ರವಾನೆಯಾಗುತ್ತಿದ್ದು. ಅಲ್ಲಿಂದ ಸೇನಾ ಹೆಲಿಕಾಪ್ಟರ್​ ಮೂಲಕ ಮಂಡ್ಯಕ್ಕೆ ಕೊಂಡೊಯ್ಯಲಾಗುತ್ತದೆ. ಮಾಹಿತಿ ಪ್ರಕಾರ ಪಾರ್ಥಿವ ಶರೀರದ ಜತೆ ಆಪ್ತರು ತೆರಳಲು ಎರಡು ಪ್ರತ್ಯೇಕ ಚಾಪರ್​ಗಳನ್ನ ರೆಡಿ ಮಾಡಲಾಗಿದೆ.