ವಾಷಿಂಗ್ಟನ್: ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಜಾಗತಿಕ ಮಟ್ಟದ ಸುದ್ದಿಯಾಗಿದೆ. ಕೆಲವು ವಿದೇಶಿ ಸೆಲೆಬ್ರಿಟಿಗಳು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರೆ, ಅಮೆರಿಕ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದೆ.


COMMERCIAL BREAK
SCROLL TO CONTINUE READING

ರೈತರ ಪ್ರತಿಭಟನೆ ಬಗ್ಗೆ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ(America)ದ ಗೃಹ ಇಲಾಖೆ, ಶಾಂತಿಯುತ ಪ್ರತಿಭಟನೆಗಳು ಬಲಿಷ್ಠ ಪ್ರಜಾಪ್ರಭುತ್ವದ ಲಕ್ಷಣವಾಗಿದೆ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.


2.5 ಕೋಟಿ ರೈತರಿಗೆ ಸಿಗಲಿದೆ Kissan Credit Card.! ಈ ಕ್ರೆಡಿಟ್ ಕಾರ್ಡ್ ಲಾಭ ತಿಳಿಯಿರಿ


ಇದೇ ವೇಳೆ ಅಮೆರಿಕದ ಜೋ ಬೈಡನ್ ಆಡಳಿತ, ರೈತರಿಗೆ ಹೆಚ್ಚಿನ ಮಾರುಕಟ್ಟೆ ಆಯ್ಕೆಗಳನ್ನು ನೀಡುವ, ಖಾಸಗಿ ಹೂಡಿಕೆಗೆ ಅವಕಾಶ ಮಾಡಿಕೊಡುವ, ಕೃಷಿ ಕ್ಷೇತ್ರದ ಸುಧಾರಣೆಗಳಿಗೆ ಭಾರತ ಸರ್ಕಾರದ ಕ್ರಮಗಳನ್ನು ಬೆಂಬಲಿಸುತ್ತದೆ ಎಂದು ಅಮೆರಿಕ ಹೇಳಿದೆ.


ರೈಲು 3 ಗಂಟೆ ಲೇಟಾಗಿ ಓಡುತ್ತಿತ್ತು. ಎಕ್ಸಾಂ ಮಿಸ್ಸಾಗ್ತಾ ಇತ್ತು.ಆಗ ಬಂತೊಂದು ಟ್ವೀಟ್..!ಮುಂದೇನಾಯ್ತ..?!


'ಸಾಮಾನ್ಯವಾಗಿ, ಭಾರತದ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುವ ಮತ್ತು ಹೆಚ್ಚಿನ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸುವ ಕ್ರಮಗಳನ್ನು ಯುನೈಟೆಡ್ ಸ್ಟೇಟ್ಸ್ ಸ್ವಾಗತಿಸುತ್ತದೆ' ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.


Aero India : ಭವಿಷ್ಯದ ಅತಿದೊಡ್ಡ ಆಯುಧದ ಫಸ್ಟ್ ಝಲಕ್ ಅನಾವರಣಗೊಳಿಸಿದ HAL


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.