ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದಿನಿಂದ ಎರಡು ದಿನ ಕರ್ನಾಟಕ (Karnataka) ಪ್ರವಾಸ ಕೈಗೊಂಡಿದ್ದು, ಈ ವೇಳೆ ಬಿಜೆಪಿಯ ಅತೃಪ್ತರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ವಿರುದ್ಧ ದೂರು ನೀಡುವ ಸಾಧ್ಯತೆಗಳಿವೆ.


COMMERCIAL BREAK
SCROLL TO CONTINUE READING

ಕರ್ನಾಟಕ ಪ್ರವಾಸದ ವೇಳೆ ಅಮಿತ್ ಶಾ ಬೆಂಗಳೂರು, ಭದ್ರಾವತಿ ಹಾಗೂ ಬೆಳಗಾವಿಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲು ಭದ್ರಾವತಿಗೆ ತೆರಳಿ ಅಲ್ಲಿ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಸೆಂಟರ್ (Rapid Action Force Center)ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.


ಅಲ್ಲಿಂದ ಬೆಂಗಳೂರಿಗೆ ಬರುವ ಅಮಿತ್ ಶಾ (Amit Shah) ವಿಧಾನಸೌಧದಲ್ಲಿ ಇಆರ್ ಎಸ್ ಎಸ್ (ERSS) ವಾಹನಗಳಿಗೆ ಚಾಲನೆ ನೀಡುವರು. ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಪ್ರತ್ಯೇಕವಾಗಿ ಸಭೆ ನಡೆಸುವರು.


ಜನವರಿ 17ರಂದು ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ತೆರಳುವರು. ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ಬಾಗಲಕೋಟೆಗೆ ತೆರಳಿ ಅಲ್ಲಿ ಮುರುಗೇಶ ನಿರಾಣಿ ಅವರ ಎಂಆರ್ ಎನ್ ಲಿಮಿಟೆಡ್ (MRN Limited) ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಪ್ರೊಜೆಕ್ಟ್ ಗೆ ಚಾಲನೆ ನೀಡುವರು. ನಂತರ ಬೆಳಗಾವಿಗೆ ಆಗಮಿಸಿ ಕೆಎಲ್ ಇ ಆಸ್ಪತ್ರೆಗೆ (KEL Hospital)ಗೆ ಭೇಟಿ ನೀಡುವರು. ಇದಾದ ಮೇಲೆ ಜಿಲ್ಲಾ ಕ್ರೀಡಾಂಗಣದಲ್ಲಿ ಜನಪ್ರತಿನಿಧಿಗಳ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಜೊತೆಗೆ ಇತ್ತೀಚಿಗೆ ನಿಧನರಾದ ಸುರೇಶ ಅಂಗಡಿ ಅವರ ನಿವಾಸಕ್ಕೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವರು. ಬಳಿಕ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪದಾಧಿಕಾರಿಗಳ ಸಭೆ ನಡೆಸುವರು.


ಇದನ್ನೂ ಓದಿ - ಯಡಿಯೂರಪ್ಪಗೆ ಕುಟುಕಿ ಪುಸ್ತಕ ಬರೆಯಲು ಹೊರಟ ‘ಹಳ್ಳಿಹಕ್ಕಿ’


ಈ ರೀತಿ ಅಮಿತ್ ಶಾ (Amit Shah) ಬ್ಯುಸಿ ಷೆಡ್ಯೂಲ್ (Busy Schedule) ಹೊಂದಿದ್ದರೂ ಬೆಂಗಳೂರಿನಲ್ಲಿ ರಾತ್ರಿ ತಂಗುವ ವೇಳೆ ಮತ್ತು ಬೆಳಗಾವಿಯಲ್ಲಿ ವಿಶ್ರಾಂತಿಗೆ ಸಮಯ ನಿಗಧಿಯಾಗಿರುವ ವೇಳೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವವರು ಭೇಟಿ ಮಾಡಿ ದೂರು ಹೇಳಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಯಡಿಯೂರಪ್ಪ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ಸಂಪುಟ ರಚನೆಯಲ್ಲಿ ಜಾತಿವಾರು, ಜಿಲ್ಲಾವಾರು ಪ್ರಾತಿನಿಧ್ಯ ಸಿಕ್ಕಿಲ್ಲ. ಹಿರಿಯರು, ಪಕ್ಷ ನಿಷ್ಠರು, ಅರ್ಹರನ್ನು ಕಡೆಗಣಿಸಲಾಗಿದೆ. ಇದೊಂದು ರೀತಿಯಲ್ಲಿ ಬೆಂಗಳೂರು-ಬೆಳಗಾವಿಯ ಸಂಪುಟವಾಗಿದೆ. ಸಿಡಿ ತೋರಿಸಿ ಬ್ಲ್ಯಾಕ್ ಮೇಲ್ (Black Mail) ಮಾಡಿ ಮತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ‌. ಹಣ ನೀಡಿ ಸಚಿವ ಸ್ಥಾನವನ್ನು ಖರೀದಿಸಿದ್ದಾರೆ. ಸೋತವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಮಂತ್ರಿ ಸ್ಥಾನವನ್ನೂ ನೀಡಲಾಗಿದೆ (ಸಿ.ಪಿ. ಯೋಗೇಶ್ವರ್) ಎಂಬಿತ್ಯಾದಿ ದೂರುಗಳನ್ನು ಹೇಳಿಕೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ - Cabinet Crisis : ಸಮಯ ನಿಗದಿಯಾದರೂ ನಿವಾರಣೆಯಾಗದ ಸಮಸ್ಯೆ


ಸರ್ಕಾರದಲ್ಲಿ, ಸಂಪುಟ ರಚನೆಯಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪವೂ ಅತಿಯಾಯಿತು ಎಂದು ಅಸಮಾಧಾನ ತೋಡಿಕೊಳ್ಳುವ ಸಂಭವವೂ ಇದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.