ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ ಮಿಷನ್ 150 ಗುರಿ ಹೊಂದಿದ್ದರೆ, ಕಾಂಗ್ರೆಸ್ 'ನಮಗೆ ಯಾವ ಮಿಷನ್ ಇಲ್ಲ, ಇರುವುದು ಕೇವಲ ವಿಶನ್ ಒಂದೇ ಎಂದು ಹೇಳುತ್ತಾ' ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಎರಡನೇ ಅವಧಿಗೆ ಮುಂದುವರೆಯುವ ವಿಶ್ವಾಸ ಹೊಂದಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತಮ್ಮ ತವರಿನಲ್ಲಿ ಪ್ರವಾಸ ಕೈಗೊಂಡಿದ್ದ ಬೆನ್ನಲ್ಲೇ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಇಂದು(ಮಾರ್ಚ್ 30) ಮತ್ತು ಮಾರ್ಚ್ 31ರಂದು  ಹಳೇ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. 


COMMERCIAL BREAK
SCROLL TO CONTINUE READING

ವಿಡಿಯೋ: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಡೈರಿ ಉದ್ಘಾಟಿಸದ ಸಿಎಂ ಸಿದ್ಧರಾಮಯ್ಯ


'ಕರುನಾಡ ಜಾಗೃತಿ ಯಾತ್ರೆ' ಭಾಗವಾಗಿ ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಅಮಿತ್ ಷಾ ಭೇಟಿ ನೀಡಲಿದ್ದಾರೆ. ಒಟ್ಟು 26 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಭಾಗವನ್ನು ಒಕ್ಕಲಿಗರ ಭದ್ರಕೋಟೆ ಎಂದೇ ಹೇಳಲಾಗುತ್ತದೆ. 


ಕಾಂಗ್ರೆಸ್ ಟಿಕೆಟ್: ಹಾಲಿ v/s ಮಾಜಿ ಗೃಹ ಸಚಿವರ ನಡುವೆ ಟಿಕೆಟ್ ಫೈಟ್


ಇಂದು ಬೆಳಿಗ್ಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಜೊತೆ ಮಾತುಕತೆ ನಡೆಸಲಿರುವ ಷಾ, ಬಳಿಕ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ನಂತರ ಕ್ಯಾತಮಾರನಹಳ್ಳಿ ನಿವಾಸಿ  ಬಿಜೆಪಿ ಮೃತ ಕಾರ್ಯಕರ್ತ ರಾಜು ಮನೆಗೆ ತೆರಳಲಿರುವ ಷಾ ಸಂತಾಪ ಸೂಚಿಸಲಿದ್ದಾರೆ. 


ಬೆಳಿಗ್ಗೆ 11 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಕೃಷ್ಣರಾಜ, ನರಸಿಂಹರಾಜ, ಚಾಮರಾಜ ಕ್ಷೇತ್ರದ ಬಿಜೆಪಿ ನವಶಕ್ತಿ ಸಮಾವೇಶದಲ್ಲಿ ಷಾ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12:30ಕ್ಕೆ ರಾಜೇಂದ್ರ ಕಲಾಮಂದಿರದಲ್ಲಿ ದಲಿತ ಮುಖಂಡರೊಂದಿಗೆ ಸಭೆ ನಡೆಸಿ ಸಹಪಂಕ್ತಿ ಭೋಜನ ಸ್ವೀಕರಿಸಲಿದ್ದಾರೆ.


ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಎಷ್ಟು ಬಾರಿ ಸ್ಪರ್ಧೆಸಿದ್ದೇನೆಂದು ಕುಮಾರಸ್ವಾಮಿಗೆ ಗೊತ್ತಿದೆಯೇ? ಸಿದ್ದರಾಮಯ್ಯ


ನಂತರ ಚಾಮರಾಜನಗರ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿರುವ ಷಾ, ಮಧ್ಯಾಹ್ನ 02:30ಕ್ಕೆ ಕೊಳ್ಳೆಗಾಲದ ವಿಧಾನ ಕ್ಷೇತ್ರಗಳ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 04:30ಕ್ಕೆ ಚಾಮರಾಜನಗರದ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪರಿಶಿಷ್ಟ ವರ್ಗದ ನಾಯಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.


ಪ್ರವಾಸದಲ್ಲಿ ಷಾ ಟೆಂಪಲ್ ರನ್
ಮಾರ್ಚ್ 30ರಂದು ಸಂಜೆ 06:30ಕ್ಕೆ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಾಲಯ ಹಾಗೂ ಸಂಜೆ 07:30ಕ್ಕೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ.