Kantara Movie: ‘ಕಾಂತಾರ’ ಹೋಲುವ ಘಟನೆ: ದೈವಸ್ಥಾನ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ನಿಗೂಢ ಸಾವು!
Similar Incident to Kantara Cinema: ಇದೀಗ ಕಾಂತಾರ ಸಿನಿಮಾದಲ್ಲಿ ಕಂಡುಬಂದ ದೃಶ್ಯವೊಂದು ನಿಜವಾಗಿದ್ದು, ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಕಾಂತಾರ ಸಿನಿಮಾದಲ್ಲಿ ಅನಾವರಣಗೊಂಡ ದೈವ ಮತ್ತು ಕೋರ್ಟ್ ನ ಸನ್ನಿವೇಶದ ಕಥೆ ಉಡುಪಿಯಲ್ಲಿ ನಡೆದಿದೆ. ದೈವದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಆಕಸ್ಮಿಕವಾಗಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ
Similar Incident to Kantara Cinema: ಕಾಂತಾರ ಸಿನಿಮಾ ಎಲ್ಲರನ್ನೂ ನಿಬ್ಬೆರಗುಗೊಳಿಸಿದ್ದು ಮಾತ್ರವಲ್ಲದೆ, ಕರ್ನಾಟಕದ ಕರಾವಳಿಯ ಸಂಸ್ಕೃತಿಯನ್ನು ದೇಶ ವಿದೇಶಗಳಲ್ಲಿ ಪಸರಿಸುವಂತೆ ಮಾಡಿದ್ದು ಸುಳ್ಳಲ್ಲ. ಇದರಲ್ಲಿ ಕಂಡು ಬಂದ ಅದೆಷ್ಟೋ ದೃಶ್ಯಗಳು ನೈಜತೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ದೈವ-ದೇವರ ಮೇಲಿನ ನಂಬಿಕೆ ಇಲ್ಲಿನ ಜನರನ್ನು ಯಾವ ರೀತಿ ಕಾಪಾಡಿಕೊಂಡು ಬಂದಿದೆ ಎಂಬುದನ್ನು ಸಿನಿಮಾದಲ್ಲಿ ಅಚ್ಚುಕಟ್ಟಾಗಿ ಬಿಂಬಿಸಲಾಗಿದೆ.
ಇದೀಗ ಕಾಂತಾರ ಸಿನಿಮಾದಲ್ಲಿ ಕಂಡುಬಂದ ದೃಶ್ಯವೊಂದು ನಿಜವಾಗಿದ್ದು, ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಕಾಂತಾರ ಸಿನಿಮಾದಲ್ಲಿ ಅನಾವರಣಗೊಂಡ ದೈವ ಮತ್ತು ಕೋರ್ಟ್ ನ ಸನ್ನಿವೇಶದ ಕಥೆ ಉಡುಪಿಯಲ್ಲಿ ನಡೆದಿದೆ. ದೈವದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಆಕಸ್ಮಿಕವಾಗಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಯುವಜನೋತ್ಸವ: ಅರಬಿಂದೋ ಸೊಸೈಟಿಯಿಂದ 7 ಸಾವಿರ ಪುಸ್ತಕಗಳ ಕೊಡುಗೆ
ಕಾಂತಾರ ಸಿನಿಮಾದಲ್ಲಿ, “ಜನರ ಜಾಗದ ವಿಚಾರ ಕೋರ್ಟಿಗೆ ಹೋದರೆ, ಅದರ ನ್ಯಾಯ ತೀರ್ಮಾನ ಮೆಟ್ಟಿಲಿನಲ್ಲಿ ನಾನು ಮಾಡುತ್ತೇನೆ” ಎಂಬ ನುಡಿಯನ್ನು ದೈವ ನೀಡುವುದು ನಾವೆಲ್ಲರೂ ಕಂಡಿದ್ದೇವೆ. ಅಂತೆಯೇ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಅಲ್ಲಿಯೇ ರಕ್ತ ಕಕ್ಕಿ ಸಾವನ್ನಪ್ಪಿರುವುದು ಕೂಡ ಸಿನಿಮಾದಲ್ಲಿ ಕಂಡುಬಂದ ದೃಶ್ಯ. ಇದರ ಅರ್ಥ ಅನ್ಯಾಯದ ವಿರುದ್ಧ ಸಾಗಿದಾತನಿಗೆ ತಕ್ಕ ಶಾಸ್ತಿಯನ್ನು ದೈವ ಮಾಡುತ್ತದೆ ಎಂಬುದಾಗಿದೆ.
ಇದೀಗ ಇಂತಹದ್ದೇ ವಿಚಾರವನ್ನು ಹೋಲುವ ಪ್ರಕರಣ ಉಡುಪಿಯ ಪಡುಬಿದ್ರಿಯಲ್ಲಿ ನಡೆದಿದೆ. ಕಾಪು ತಾಲೂಕು ಪಡುಹಿತ್ಲು ಜಾರಂದಾಯ ದೇವಸ್ಥಾನದಲ್ಲಿ ನಡೆದ ಘಟನೆಯ ಹೋಲಿಕೆಯನ್ನು ಕಾಂತಾರ ಸಿನಿಮಾದ ಜೊತೆ ಮಾಡಲಾಗುತ್ತಿದೆ.
500 ವರ್ಷಗಳ ಇತಿಹಾಸವಿರುವ ಕಾಪು ತಾಲೂಕಿನ ಜಾರಂದಾಯ ದೈವಸ್ಥಾನದ ಆಡಳಿತ ವಿಚಾರದಲ್ಲಿ ಎರಡು ಸಮಿತಿಗಳ ನಡುವೆ ವಾದ ಭುಗಿಲೆದ್ದಿತ್ತು. ಇದೀಗ ಈ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಆಕಸ್ಮಿಕವಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಎರಡು ಸಮಿತಿಗಳ ನಡುವಿನ ಘರ್ಷಣೆ ವಿಚಾರವಾಗಿ ಕೋರ್ಟಿನಿಂದ ತಡೆ ಆಜ್ಞೆ ತಂದ ಮರುದಿನವೇ ಜಯ ಪೂಜಾರಿ ಎಂಬ ವ್ಯಕ್ತಿ ಮೃತಪಟ್ಟಿರುವುದು ವಿಚಿತ್ರ ಎನಿಸಿದೆ.
ಏನಿದು ಸಂಘರ್ಷ?
ಇಲ್ಲಿನ ಇತಿಹಾಸ ಪ್ರಸಿದ್ಧ ಪಡುಹಿತ್ಲು ಜಾರಂದಾಯ ದೇವಸ್ಥಾನವನ್ನು ಬಂಟ ಸೇವಾ ಸಮಿತಿ ನೋಡಿಕೊಳ್ಳುತ್ತಿತ್ತು. ಆದರೆ ಯಾವಾಗ ಹೊಸ ಸೇವಾ ಸಮಿತಿ ಅಧಿಕಾರಕ್ಕೆ ಬಂದಿತೋ, ಅಂದಿನಿಂದ ಇಲ್ಲಿ ಘರ್ಷಣೆ ಆರಂಭವಾಗಿದೆ. ಅಷ್ಟೇ ಅಲ್ಲದೆ ಪ್ರಕಾಶ ಶೆಟ್ಟಿ ಎಂಬವರು ನ್ಯಾಯಾಲಯದ ಮೆಟ್ಟಿಲೇರಿ, ಬಳಿಕ ಪ್ರತ್ಯೇಕ ಟ್ರಸ್ಟ್ ರಚಿಸಿದ್ದಾರೆ. ಇನ್ನು ದೈವಸ್ಥಾನದ ಗುರಿಕಾರ (ಮುಖ್ಯಸ್ಥ)ರಾದ ಜಯ ಪೂಜಾರಿ ಅವರನ್ನು ಟ್ರಸ್ಟ್ ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಆದರೆ ಇವರು ದೈವಸ್ಥಾನದ ಮೇಲೆ ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿವಾದಿಗಳು ಆರೋಪಿಸಿದ್ದರು.
ಇದೇ ವಿಚಾರವಾಗಿ ಪ್ರಕಾಶ್ ಶೆಟ್ಟಿ ಮತ್ತು ಜಯ ಪೂಜಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಳಿಕ ತಡೆಯಾಜ್ಞೆಯನ್ನು ತಂದಿದ್ದರು. ಆದರೆ ಮರುದಿನವೇ ಜಯ ಪೂಜಾರಿ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಈ ಘಟನೆ ನಡೆದ ಬಳಿಕ ಇಲ್ಲಿನ ಜನರು ನ್ಯಾಯಾಲಯ ಮೆಟ್ಟಿಲೇರಿದರೆ ನೋಡಿಕೊಳ್ಳುತ್ತೇನೆ ಎಂಬ ಕಾಂತಾರ ದೈವದ ನುಡಿಯನ್ನು ನೆನಪಿಸಿಕೊಂಡಿದ್ದಾರೆ. ಘಟನೆ ನಡೆದ ಬಳಿಕ ಇದೀಗ ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ತೆರವು ಮಾಡಲಾಗಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ-2023: ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಬಿಡುಗಡೆ
ಇನ್ನೊಂದೆಡೆ ದೈವ ನರ್ತಕರಿಗೂ ಪ್ರಕಾಶ್ ಶೆಟ್ಟಿ ಮತ್ತು ಅವರ ಸಹಚರರು ಕಿರುಕುಳ ನೀಡಿದ್ದು, ತಮ್ಮ ಪರವಾಗಿ ದೈವ ನುಡಿ ನೀಡಬೇಕೆಂದು ಒತ್ತಡ ಹೇರಿದ್ದಾಗಿ ಆರೋಪ ಮಾಡಿದ್ದಾರೆ. ಆದರೆ ಹಳೆ ಸಮಿತಿ ಪರವಾಗಿ ನಿಂತ ದೈವ ನರ್ತಕ ಭಾಸ್ಕರ ಬಂಗೇರ ಇದನ್ನು ನಿರಾಕರಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.