ಬೆಂಗಳೂರು: ರೈಲು ಸರಿಯಾದ ಸಮಯಕ್ಕೆ ತಲುಪದೆ, ಪರೀಕ್ಷೆಗೆ ತಡವಾಗಿ ಆಗಮಿಸಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಮತ್ತೊಂದು ಅವಕಾಶ ನೀಡಿದೆ. ಡಿಸೆಂಬರ್ 14 ರಂದು ಲೋಕಸೇವಾ ಆಯೋಗ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ (KPSC AE Exam) ಆಯೋಜಿಸಿತ್ತು. ಆದರೆ ರೈಲು ಸರಿಯಾದ ಸಮಯಕ್ಕೆ ತಲುಪದ ಕಾರಣ ಕಲಬುರಗಿ ಪರೀಕ್ಷಾ ಕೇಂದ್ರ ತಲುಪಲು ಅಭ್ಯರ್ಥಿಗಳು ಪರದಾಡಿದ್ದರು.


COMMERCIAL BREAK
SCROLL TO CONTINUE READING

ಕಲಬುರಗಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಲು ಹಾಸನ-ಸೋಲಾಪುರ ಎಕ್ಸ್ ಪ್ರೆಸ್ (Hassan-Solapur Train) ಮತ್ತು ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಭ್ಯರ್ಥಿಗಳು ಸಮಸ್ಯೆಗೆ ಸಿಲುಕಿದ್ದರು. ಅಭ್ಯರ್ಥಿಗಳು ಪ್ರಯಾಣಿಸುತ್ತಿದ್ದ ರೈಲು ಸಮಯಕ್ಕೆ ಸರಿಯಾಗಿ ಕಲಬುರಗಿ ತಲುಪದೆ ಬೆಳಗ್ಗಿನ ಪರೀಕ್ಷೆಗೆ ಸಾವಿರಾರು ಅಭ್ಯರ್ಥಿಗಳು ಹಾಜರಾಗಿರಲಿಲ್ಲ. ಹೀಗಾಗಿ ಮಧ್ಯಾಹ್ನದ ಪರೀಕ್ಷೆಗೆ (Exam) ಮಾತ್ರ ಹಾಜರಾಗಿದ್ದರು. ಈ ಅಭ್ಯರ್ಥಿಗಳಿಗೆ ಮಾತ್ರ ಸಾಮಾನ್ಯ ಪತ್ರಿಕೆ-1 ರ ಮರು ಪರೀಕ್ಷೆಯನ್ನು ಡಿಸೆಂಬರ್ 29 ರಂದು ನಡೆಸಲು ಕರ್ನಾಟಕ ಲೋಕಸೇವಾ ಆಯೋಗ (KPSC) ತೀರ್ಮಾನಿಸಿದೆ.


ಇದನ್ನೂ ಓದಿ : 1,600 ಕೋಟಿ ರೂ. ವೆಚ್ಚದ ಹೆದ್ದಾರಿ ಯೋಜನೆಗೆ ಒಪ್ಪಿಗೆ: ಗಡ್ಕರಿಗೆ ಸಂಸದ ಪ್ರತಾಪ್ ಸಿಂಹ ಧನ್ಯವಾದ


ಬೆಂಗಳೂರು ಕೇಂದ್ರದಲ್ಲಿ ಮರು ಪರೀಕ್ಷೆ ನಡೆಯಲಿದ್ದು, ಮರು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಮನವಿ ಪತ್ರ, ರೈಲಿನ ಟಿಕೆಟ್ (train ticket) ಪ್ರತಿ, ಆಯೋಗ ನೀಡಿದ್ದ ಪ್ರವೇಶ ಪತ್ರದ ಪ್ರತಿಯನ್ನ ಡಿಸೆಂಬರ್ 22 ರ ಒಳಗಾಗಿ ಸ್ಪೀಡ್ ಪೋಸ್ಟ್ ಮೂಲಕ 'ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು' ಕಚೇರಿಗೆ ತಲುಪಿಸಬೇಕಿದೆ.


ಕಾಮಗಾರಿ ಎಫೆಕ್ಟ್..!
ಹಿಂದೂಪುರದಲ್ಲಿ ನಡೆಯುತ್ತಿದ್ದ ಕಾಮಗಾರಿಯಿಂದಾಗಿ ತಾಂತ್ರಿಕ ಸಮಸ್ಯೆ ಎದುರಾದ ಕಾರಣ ಅಭ್ಯರ್ಥಿಗಳು ಪ್ರಯಾಣಿಸುತ್ತಿದ್ದ ರೈಲು ತಡವಾಗಿತ್ತು. ಹೀಗಾಗಿ ಅಭ್ಯರ್ಥಿಗಳಿಗೆ ಸಮಸ್ಯೆ ಎದುರಾಗಿತ್ತು. 1000ಕ್ಕೂ ಹೆಚ್ಚು ಅಭ್ಯರ್ಥಿಗಳು ರೊಚ್ಚಿಗೆದ್ದು ರೈಲು ತಡೆದು ಪ್ರತಿಭಟನೆ ಕೂಡಾ ನಡೆಸಿದ್ದರು. ಅರ್ಜಿ ಸಲ್ಲಿಸಿ 3 ವರ್ಷಗಳ ಬಳಿಕ ಪರೀಕ್ಷೆ ನಡೆಸಲಾಗುತ್ತಿತ್ತು. ಮತ್ತೆ ಪರೀಕ್ಷೆ ಕೈತಪ್ಪಿದ್ದಕ್ಕೆ ಬೇಸರಗೊಂಡ ಅಭ್ಯರ್ಥಿಗಳು ರೈಲು ಟ್ರ್ಯಾಕ್ ಮೇಲೆ  ನಿಂತು ಆಕ್ರೋಶ ಹೊರಹಾಕಿದ್ದರು. ಇದೀಗ ಅಭ್ಯರ್ಥಿಗಳ ಸಮಸ್ಯೆ ಅರ್ಥ ಮಾಡಿಕೊಂಡಿರುವ ಕರ್ನಾಟಕ ಲೋಕಸೇವಾ ಆಯೋಗ  ಮರುಪರೀಕ್ಷೆಗೆ ಮುಹೂರ್ತ ನಿಗದಿ ಮಾಡಿದೆ.


ಇದನ್ನೂ ಓದಿ : ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತಾಗ ನಿಮ್ಮ ‘ಧಮ್’ ಎಲ್ಲಿತ್ತು: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.