IRCTCನಲ್ಲಿ ತತ್ಕಾಲ್ ಬುಕಿಂಕ್ ಗೆ ಈ ಟ್ರಿಕ್ ಬಳಸಿ: ಚಿಟಿಕೆಯಲ್ಲಿ ನಿಮ್ಮ ಸೀಟ್ Confirm ಆಗುತ್ತದೆ

ನೀವು ದೃಢೀಕೃತ ಟಿಕೆಟ್ ಬಯಸಿದರೆ ತತ್ಕಾಲ್ ಟಿಕೆಟ್ ಬುಕ್ ಮಾಡುವ ಮೊದಲು ಮಾಸ್ಟರ್‌ಲಿಸ್ಟ್ ಅನ್ನು ತಯಾರಿಸಿ. ಮಾಸ್ಟರ್‌ಲಿಸ್ಟ್‌ ನಲ್ಲಿ ನೀವು ಟಿಕೆಟ್‌ಗಳನ್ನು ಬುಕ್ ಮಾಡಲು ಬಯಸುವ ಎಲ್ಲಾ ಪ್ರಯಾಣಿಕರ ವಿವರಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಟ್ಟುಕೊಳ್ಳಬೇಕು.

Written by - Puttaraj K Alur | Last Updated : Dec 10, 2021, 09:47 PM IST
  • ಮಾಸ್ಟರ್‌ಲಿಸ್ಟ್‌ ನಲ್ಲಿ ಪ್ರಯಾಣಿಕರ ವಿವರಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಬೇಕು
  • ತತ್ಕಾಲ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವಾಗ ವೇಗದ ಇಂಟರ್ನೆಟ್ ಬಹಳ ಮುಖ್ಯ
  • ತತ್ಕಾಲ್ ಕೋಟಾ ತೆರೆಯುವ ಕೆಲವು ನಿಮಿಷಗಳ ಮೊದಲೇ ನೀವು ಲಾಗಿನ್ ಆಗಿರಬೇಕು
IRCTCನಲ್ಲಿ ತತ್ಕಾಲ್ ಬುಕಿಂಕ್ ಗೆ ಈ ಟ್ರಿಕ್ ಬಳಸಿ: ಚಿಟಿಕೆಯಲ್ಲಿ ನಿಮ್ಮ ಸೀಟ್ Confirm ಆಗುತ್ತದೆ title=
ಕೆಲವೇ ನಿಮಿಷಗಳಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್

ನವದೆಹಲಿ: ಭಾರತೀಯ ರೈಲ್ವೆ(Indian Railway) ವಿಶ್ವದಲ್ಲಿಯೇ 4ನೇ ಅತಿದೊಡ್ಡ ರೈಲ್ವೆ ಜಾಲವಾಗಿದೆ. ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಹಿಂದಿನಂತೆ ಈಗ ಜನರು ನಿಲ್ದಾಣದಲ್ಲಿ ಉದ್ದನೆಯ ಸಾಲಿನಲ್ಲಿ ಕ್ಯೂ ನಿಂತು ಟಿಕೆಟ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಮನೆಯಲ್ಲಿಯೇ ಕುಳಿತು ಟಿಕೆಟ್ ಬುಕ್ ಮಾಡಬಹುದು. ತುರ್ತು ಪರಿಸ್ಥಿತಿಯಲ್ಲಿ ನೀವು ಎಲ್ಲಿಗಾದರೂ ಹೋಗಬೇಕಾದರೆ ತತ್ಕಾಲ್ ಟಿಕೆಟ್ ಬುಕ್ಕಿಂಗ್(Tatkal Ticket Booking Tips) ಮಾಡಬಹುದು. ಆದರೆ ತತ್ಕಾಲ್‌ನಲ್ಲಿ ಹಲವು ಟಿಕೆಟ್‌ಗಳ ಕನ್ಫರ್ಮೇಷನ್ ಪಡೆಯುವುದು ಸ್ವಲ್ಪ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ನಾವು ನಿಮಗೊಂದು ಟ್ರಿಕ್ ಬಗ್ಗೆ ತಿಳಿಸುತ್ತಿದ್ದೇವೆ. ಇದು ನಿಮ್ಮ ತತ್ಕಾಲ್ ಟಿಕೆಟ್ ಕನ್ಫರ್ಮ್ ಆಗುವ ಸಾಧ್ಯತೆಯನ್ನು ಹೆಚ್ಚಿಸಲಿದೆ.

ಕೆಲವೇ ನಿಮಿಷಗಳಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್

ಎಸಿ ಕೋಚ್‌ ನ ತತ್ಕಾಲ್ ಟಿಕೆಟ್‌ನ ಬುಕಿಂಗ್ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಸಾಮಾನ್ಯ ಟಿಕೆಟ್‌ನ ಬುಕಿಂಗ್ 11 ಗಂಟೆಗೆ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ನೀವು ಎಲ್ಲಾ ಮಾಹಿತಿಯನ್ನು ಭರ್ತಿ ಮಾಡುವ ಹೊತ್ತಿಗೆ ಎಲ್ಲಾ ಟಿಕೆಟ್‌ಗಳು ಬುಕ್(Train Ticket) ಆಗಿರುತ್ತವೆ. ಏಕೆಂದರೆ ಬಾಕಿ ಇರುವ ಕೆಲವೇ ಕೆಲವು ಟಿಕೆಟ್‌ಗಳಿಗಾಗಿ ಸಾವಿರಾರು ಜನರು ಒಟ್ಟಿಗೆ ಬುಕ್ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಇದಾದ ನಂತರವೂ ಬಹುತೇಕ ಬಾರಿ ಟಿಕೆಟ್ ಬುಕ್ ಆಗುವುದಿಲ್ಲ. ಇದರಿಂದ ನಿಮಗೆ ಅನೇಕ ಬಾರಿ ನಿರಾಸೆಯಾಗುತ್ತಿರುತ್ತದೆ.

ಇದನ್ನೂ ಓದಿ: ರೈತರಗೆ ಸಿಹಿ ಸುದ್ದಿ : ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಿಗಲಿದೆ ಶೇ.50 ರಷ್ಟು ಸಬ್ಸಿಡಿ!

ಮುಂಚಿತವಾಗಿ ಮಾಸ್ಟರ್‌ಲಿಸ್ಟ್ ತಯಾರಿಸಿ

ನೀವು ದೃಢೀಕೃತ ಟಿಕೆಟ್ ಬಯಸಿದರೆ ತತ್ಕಾಲ್ ಟಿಕೆಟ್ ಬುಕ್(Tatkal Ticket Booking) ಮಾಡುವ ಮೊದಲು ಮಾಸ್ಟರ್‌ಲಿಸ್ಟ್ ಅನ್ನು ತಯಾರಿಸಿ. ಮಾಸ್ಟರ್‌ಲಿಸ್ಟ್‌ ನಲ್ಲಿ ನೀವು ಟಿಕೆಟ್‌ಗಳನ್ನು ಬುಕ್ ಮಾಡಲು ಬಯಸುವ ಎಲ್ಲಾ ಪ್ರಯಾಣಿಕರ ವಿವರಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಈ ಸೌಲಭ್ಯವು IRCTC ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. IRCTC ಖಾತೆಯ ನನ್ನ ಪ್ರೊಫೈಲ್ ವಿಭಾಗಕ್ಕೆ ಹೋಗುವ ಮೂಲಕ ನೀವು ಮಾಸ್ಟರ್‌ಲಿಸ್ಟ್ ಅನ್ನು ಸಿದ್ಧಪಡಿಸಬಹುದು. ಹೀಗೆ ಮಾಡುವುದರಿಂದ ಟಿಕೆಟ್ ಬುಕ್ ಮಾಡುವಾಗ ಸಮಯ ಉಳಿತಾಯವಾಗುತ್ತದೆ ಮತ್ತು ಒಂದೇ ಕ್ಲಿಕ್ ನಲ್ಲಿ ಪ್ರಯಾಣಿಕರ ಮಾಹಿತಿ ಸಿಗುತ್ತದೆ.

ವೇಗದ ಇಂಟರ್ನೆಟ್ ಅಗತ್ಯ

ತತ್ಕಾಲ್ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವಾಗ ವೇಗದ ಇಂಟರ್ನೆಟ್(Speed Internet) ಬಹಳ ಮುಖ್ಯ. ನಿಧಾನಗತಿಯ ಇಂಟರ್ನೆಟ್ ನಿಂದ ಕೆಲವೊಮ್ಮೆ Payment ವಿಫಲಗೊಳ್ಳುತ್ತದೆ ಮತ್ತು ನಿಮ್ಮ ಟಿಕೆಟ್ ಬುಕ್ ಆಗುವುದಿಲ್ಲ. ನೀವು ಈ ಪ್ರಕ್ರಿಯೆಯನ್ನು ಪುನರಾವರ್ತಿಸುವ ಹೊತ್ತಿಗೆ ಆಸನಗಳು ಸಂಪೂರ್ಣವಾಗಿ ಭರ್ತಿಯಾಗಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಇಂಟರ್ನೆಟ್ ವೇಗದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. IRCTC ಟಿಕೆಟ್ ಬುಕಿಂಗ್‌ಗೆ ಇಂಟರ್ನೆಟ್ ಬ್ಯಾಂಕಿಂಗ್ ಅತ್ಯಂತ ವೇಗವಾಗಿರಬೇಕು. ಇದಲ್ಲದೇ ಪೇಟಿಎಂ ವಾಲೆಟ್ ಅಥವಾ ಯುಪಿಐ ಮೂಲಕವೂ ಟಿಕೆಟ್ ಬುಕ್ ಮಾಡಬಹುದು. ಇದು ನಿಮ್ಮ ಸಮಯವನ್ನು ಸಹ ಉಳಿಸುತ್ತದೆ ಮತ್ತು TPಯ ತೊಂದರೆ ಇರುವುದಿಲ್ಲ.

ಇದನ್ನೂ ಓದಿ: ವಾಹನ ಚಾಲನೆ ವೇಳೆ ಆದರೆ ಈ ತಪ್ಪು, ಬೀಳಲಿದೆ 10 ಸಾವಿರ ರೂ.ಗಳ ದಂಡ, ಬಚಾವಾಗುವುದು ಹೇಗೆ ತಿಳಿಯಿರಿ

ಟಿಕೆಟ್ ಕಾಯ್ದಿರಿಸುವ ಮೊದಲು ಲಾಗಿನ್ ಮಾಡಿ

ತತ್ಕಾಲ್ ಕೋಟಾ(Tatkal Ticket Booking Trick) ತೆರೆಯುವ ಕೆಲವು ನಿಮಿಷಗಳ ಮೊದಲು ನೀವು ಲಾಗಿನ್ ಆಗಿರಬೇಕು. ಇದರಿಂದ ಸಮಯವೂ ಉಳಿತಾಯವಾಗುತ್ತದೆ. ಕೋಟಾವನ್ನು ತೆರೆಯುವ ಮೊದಲು ನೀವು ಲಾಗಿನ್ ಮಾಡಿ ಮತ್ತು ಸ್ಟೇಷನ್ ಕೋಡ್, ಬರ್ತ್ ಇತ್ಯಾದಿಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ. ನಂತರ ಕೋಟಾ ತೆರೆದ ತಕ್ಷಣ ನೀವು ಮಾಸ್ಟರ್‌ಲಿಸ್ಟ್‌ ನಿಂದ ಪ್ರಯಾಣಿಕರ ಹೆಸರನ್ನು ಆಯ್ಕೆ ಮಾಡಿ ಮತ್ತು ನೇರವಾಗಿ Paymentಗೆ ಮುಂದುವರಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News