ಬೆಂಗಳೂರು: ಸಾಮಾನ್ಯವಾಗಿ ಮುಂಗಾರಿನ ಬೆಳೆ ಸಂದರ್ಭದಲ್ಲಿ ರೈತರಿಗೆ ಸಾಮಾನ್ಯವಾಗಿ ಬಸವನಹುಳಗಳ ಸಮಸ್ಯೆ ಕಾಡುತ್ತದೆ.ಈ ಸಂದರ್ಭದಲ್ಲಿ ಈಗ ಕೃಷಿ ಇಲಾಖೆ ಅಧಿಕಾರಿಗಳು ಇದರ ಹಾವಳಿಗಳನ್ನು ನಿಯಂತ್ರಿಸುವ ಕುರಿತಾಗಿ ಹಲವು ಟಿಪ್ಸ್ ಗಳನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಬಸವನಹುಳು ಜೀವಿಯು ನಿಶಾಚರಿಯಾಗಿದ್ದು ರಾತ್ರಿ ಹೊತ್ತಿನಲ್ಲಿ ಬೆಳೆಯನ್ನು ಬಾಧಿಸುತ್ತದೆ. ಹಗಲು ಹೊತ್ತಿನಲ್ಲಿ ಬದುಗಳಲ್ಲಿ, ಕಸದ ಗುಂಪುಗಳ ಕೆಳಗಡೆ ಆಶ್ರಯಿಸುತ್ತದೆ. ಕೆಲವೊಮ್ಮೆ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿದ್ದಾಗ ದಿನವಿಡೀ ಬೆಳೆಯನ್ನು ತಿನ್ನುತ್ತದೆ. ಇದರ ಬಾಧೆಯು ಬೆಳೆಯ ಪ್ರಾರಂಭಿಕ  ಹಂತ ಅಂದರೆ ಬೆಳೆ 10 ರಿಂದ 15 ದಿನಗಳವರೆಗೆ ಹೆಚ್ಚು ಕಂಡು ಬರುತ್ತದೆ. ತದನಂತರ ಕಾಂಡವು ಗಡುಸಾದಾಗ ಈ ಕೀಟದ ಬಾಧೆ ಇರುವುದಿಲ್ಲ ಎಂದು ರೈತರಿಗೆ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ : Presidential polls 2022 : ರಾಷ್ಟ್ರಪತಿ ಚುನಾವಣೆ 2022: ದೀದಿ ನೇತೃತ್ವದ 'ವಿರೋಧ ಸಭೆ'ಯಲ್ಲಿ ಬಿರುಕು!


ಬಸವನಹುಳು ನಿರ್ವಹಣೆ: ಶಂಖದ ಪೀಡೆಯಲ್ಲಿ ಶೇ.60 ರಷ್ಟು ಸಸಾರಜನಕ ಅಂಶವಿರುವುದರಿಂದ ಬಾತುಕೋಳಿ, ಕೋಳಿ ಹಾಗೂ ಹಂದಿಗಳಿಗೆ ಆಹಾರವಾಗಿ ಬಳಸಬಹುದು. ಕೈಯಿಂದ ಆರಿಸಿ ಸಾಯಿಸುವುದು ಹೆಚ್ಚು ಪರಿಣಾಮಕಾರಿ. ಹೊಲದ ಸುತ್ತಲೂ ನೀರಿನಲ್ಲಿ ನೆನೆಸಿದ ಗೋಣಿ ಚೀಲಗಳನ್ನು ಹರಡಿ ಅಲ್ಲಿ ಆಸರೆ ಪಡೆದ ಹುಳುಗಳನ್ನು ಆರಿಸಿ ಸಾಯಿಸಬೇಕು. ಏಕದಳ ಬೆಳೆ ಬೆಳೆದರೆ ಶಂಖದ ಪೀಡೆಯ ಹಾನಿ ಪ್ರಮಾಣ ಕಡಿಮೆಯಾಗುತ್ತದೆ. ಬದು ಮತ್ತು ಬದುವಿನ ಸುತ್ತಲೂ ಸುಮಾರು ಅರ್ಧ ಅಡಿ ಅಗಲ ಹಾಗೂ ಅರ್ಧ ಸೆಂ.ಮೀ. ದಪ್ಪನೆಯ ಪಟ್ಟಿಯನ್ನು ಮೆಲಾಥಿಯಾನ್, ಕ್ವಿನಾಲ್‍ಫಾಸ್, ಫನವಲರೆಟ್ ಪುಡಿ ರೂಪದ ಕೀಟನಾಶಕ ಬಳಸಿ ಹಾಕಬೇಕು. ಬದುಗಳಿಗೂ ಇವೇ ಕೀಟನಾಶಕಗಳನ್ನು ಸಿಂಪಡಿಸಬೇಕು.


ಇದನ್ನೂ ಓದಿ : ಮೂರನೇ ದಿನವೂ ED ವಿಚಾರಣೆಗೆ ರಾಹುಲ್‌ ಹಾಜರು : ರೊಚ್ಚಿಗೆದ್ದ ಕಾಂಗ್ರೆಸ್ ನಾಯಕರು!


ಮೋನೋ ಕ್ರೋಟೋಫಾಸ್ ಮಿಶ್ರಿತ ವಿಷ ಪಾಷಾಣವನ್ನು ಹೊಲದ ಸುತ್ತಲೂ ಹಾಗೂ ಅಡುಗು ತಾಣಗಳ ಸುತ್ತ ಹಾಕುವುದು ಪರಿಣಾಮಕಾರಿ. ಮೆಟಾಲ್ಡಿಹೈಡ್ ಶೇ.2.5 ರ ಮಾತ್ರೆಯನ್ನು ಪ್ರತಿ ಹೆಕ್ಟೇರಿಗೆ 5 ಕೆಜಿ ಯಂತೆ ಹುಳುಗಳು ಅಡಗಿಕೊಳ್ಳುವ ಜಾಗದ ಸುತ್ತಲೂ ಹಾಗೂ ಅವು ಓಡಾಡುವ ಜಾಗ ಪತ್ತೆಹಚ್ಚಿ ಹಾಕಬೇಕು. ಮಾತ್ರೆಯನ್ನು ಹಾಕುವ ಮೊದಲು ಕೃಷಿ ತ್ಯಾಜ್ಯವಸ್ತು ಅಥವಾ ತರಕಾರಿ ತ್ಯಾಜ್ಯವಸ್ತು ಬಾಧಿತ ಹೊಲದಲ್ಲಿ ಅಲ್ಲಲ್ಲಿ ಗುಂಪು ಗುಂಪಾಗಿ ಹಾಕುವುದರಿಂದ ಪೀಡೆಗಳು ಪದಾರ್ಥಗಳನ್ನು ತಿಂದು ಸಾವನ್ನಪ್ಪುತ್ತವೆ ಎಂದು ಕೃಷಿ ತಜ್ಞರು ತಿಳಿಸಿದ್ದಾರೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.