ಬೆಂಗಳೂರು:ನಗರದಲ್ಲಿ ಟ್ರಾಫಿಕ್ ಎಷ್ಟರ ಮಟ್ಟಿಗೆ ಇದೆ ಎಂದರೆ ಒಬ್ಬರನ್ನು ಬಲಿ ಪಡೆಯುವಷ್ಟು ಬೆಂಗಳೂರಿನಲ್ಲಿ   ಟ್ರಾಫಿಕ್  ಹಾವಳಿ ಹೆಚ್ಚಿದೆ.  ಈ ಕೆಟ್ಟ   ಟ್ರಾಫಿಕ್  ಒಂದೂವರೆ ವರ್ಷದ ಕಂದಮ್ಮನನ್ನು ಬಿಡದೇ ಬಲಿ ಪಡೆದಿದೆ. 


COMMERCIAL BREAK
SCROLL TO CONTINUE READING

ಹಾಸನದಿಂದ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಬರುತ್ತಿದ್ದ  ವೇಳೆ ಅತಿಯಾದ  ಟ್ರಾಫಿಕ್ ನಿಂದ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಮಗುವಿದ್ದ  ಅಂಬ್ಯುಲೇನ್ಸ್  ಹಾಸನದಿಂದ  ಮೂಲಕ ಕೇವಲ ಒಂದು ಗಂಟೆಯಲ್ಲೇ ಜಿರೋ ಟ್ರಾಫಿಕ್ ನಲ್ಲಿ ನೆಲಮಂಗಲ ತಲುಪಿತ್ತು. 


ಇದನ್ನೂ ಓದಿ: ದೇವರ ಮಾತು ಕೇಳಿ ವಿಚ್ಛೇದನಕ್ಕೆ ಮುಂದಾದ ಜೋಡಿ, ಮುಂದೆ...
ಆದರೆ ನೆಲಮಂಗಲದಿಂದ ಗೊರಗುಂಟೆಪಾಳ್ಯ ರಸ್ತೆ ಟ್ರಾಫಿಕ್  ಹಿನ್ನೆಲೆ 20 ನಿಮಿಷಕ್ಕೂ ಹೆಚ್ಚು ಸಮಯ ವ್ಯರ್ಥವಾಗಿತ್ತು.    ಟ್ರಾಫಿಕ್  ವೇಳೆ    ಅಂಬ್ಯುಲೇನ್ಸ್ ಗೂ ದಾರಿ ಬಿಡದೇ  ಮಾನವೀಯತೆ ಮರೆತ್ತಿರುವುದು ಕಂಡುಬಂದಿದೆ. 


ಇದನ್ನೂ ಓದಿ:ಶೀಲ ಶಂಕೆ.. ಡಂಬಲ್ಸ್ ನಿಂದ ಹೊಡೆದು ಹೆಂಡತಿಯನ್ನು ಕೊಂದ ಗಂಡ


ಈ ವೇಳೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಮಗು ಉಳಿಯುವ ಸಾಧ್ಯತೆ ಇತ್ತು.  ಚಿಕಿತ್ಸೆ ಸಿಗದೇ  ಪ್ರಾಣ  ಬಿಟ್ಟಿರೋ ಕಂದಮ್ಮನ ಸಾವಿಗೆ   ಯಾರು ಹೊಣೆ ಎಂಬುದು ಪ್ರಶ್ನಿಸಬೇಕಾಗಿದೆ.  ಮುಂದಿನ ದಿನಗಳಲ್ಲಿ ತುರ್ತು ಪರಿಸ್ಥಿತಿ ವೇಳೆ ಸಾರ್ವಜನಿಕರು,  ಟ್ರಾಫಿಕ್  ಪೊಲೀಸ್‌ ರ ಜೊತೆ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೇ ಬೇರೆ ಕಡೆಗಳಿಂದ  ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುವ ರೋಗಿಗಳು ಎಳೆ ಕಂದಮ್ಮನಂತೆ ರಸ್ತೆ ಮಧ್ಯದಲ್ಲಿ ಪ್ರಾಣ ಬಿಡಬೇಕಾದ  ಪರಿಸ್ಥಿತಿ ಎದುರಾಗುವುದರಲ್ಲಿ ಯಾವ ಸಂದೇಹವಿಲ್ಲ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.