ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲೋದಕ್ಕೆ ಹೆದರ್ತಿದ್ದ: ಹಣೆಬರಹದಲ್ಲಿ ಬರೆದಿತ್ತು ಸಿಎಂ ಆಗ್ಬಿಟ್ಟ!
ನೀವು ಮಂತ್ರಿ ಆಗುವುದು ಯಾವಾಗ ಎಂಬ ಕಾರ್ಯಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ನ ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ, ‘ನೀವು ದುಃಖ ಪಡುವ ಅಗತ್ಯವಿಲ್ಲ. ಒಮ್ಮೊಮ್ಮೆ ಸಚಿವನಾಗಲು ಸಾಧ್ಯವಿಲ್ಲ. ಅದಕ್ಕೂ ಹಣೆಬರಹ ಬೇಕಾಗುತ್ತದೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ನನ್ನ ಪಕ್ಕ ನಿಂತುಕೊಳ್ಳಲು ಹೆದರುತ್ತಿದ್ದ, ಆದ್ರೆ ಆತನ ಹಣೆಬರಹದಲ್ಲಿ ಬರೆದಿತ್ತು 2 ಬಾರಿ ಮುಖ್ಯಮಂತ್ರಿ ಆಗಿಬಿಟ್ಟ ಎಂದು ಕಾಂಗ್ರೆಸ್‍ನ ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕರ ಸಭೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಮಗೆ ಸಚಿವ ಸ್ಥಾನ ನೀಡದೆ ಕಡೆಗಣಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.
ನೀವು ಮಂತ್ರಿ ಆಗುವುದು ಯಾವಾಗ?ಎಂಬ ಕಾರ್ಯಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನೀವು ದುಃಖ ಪಡುವ ಅಗತ್ಯವಿಲ್ಲ. ಒಮ್ಮೊಮ್ಮೆ ಸಚಿವನಾಗಲು ಸಾಧ್ಯವಿಲ್ಲ. ಅದಕ್ಕೂ ಹಣೆಬರಹ ಬೇಕಾಗುತ್ತದೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ಫುಡ್ ಸ್ಟ್ರೀಟ್ ಮತ್ತು ಗಂಗಾಧರೇಶ್ವರ ದೇವಸ್ಥಾನದ ಗೋಡೆ ಕುಸಿದ ಸ್ಥಳಕ್ಕೆ ವಲಯ ಆಯುಕ್ತರು ಭೇಟಿ
ಎಚ್.ಡಿ.ದೇವೆಗೌಡರ ಸಂಪುಟದಲ್ಲಿ ನಾನು ಮಿನಿಸ್ಟರ್ ಆಗಿದ್ದೆ. ಆಗ ಈ ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲೋದಕ್ಕೇ ಹೆದರುತ್ತಿದ್ದ. ಆದ್ರೆ ಏನ್ ಮಾಡೋದು ಆತನ ಹಣೆಬರಹದಲ್ಲಿ ಬರೆದಿತ್ತು, 2 ಬಾರಿ ಮುಖ್ಯಮಂತ್ರಿ ಆಗಿಬಿಟ್ಟ ಎಂದು ಹೇಳಿದರು.
ಒಮ್ಮೊಮ್ಮೆ ಅದೃಷ್ಟ ಕೂಡಿಬರುತ್ತದೆ. ಸಿದ್ದರಾಮಯ್ಯನವರು ಕಾಂಗ್ರೆಸ್‍ಗೆ ಬಂದು 2 ಬಾರಿ ಸಿಎಂ ಆಗಿದ್ದಾರೆ. ಇದರಿಂದ ಕಾಂಗ್ರೆಸ್‌ನ ಹಳೆ ಮಂದಿ ಏನಂತಿರಬಹುದು? ಇದೆಲ್ಲಾ ಮನುಷ್ಯನಿಗೆ ಒದಗಿಬರುವ ಸಮಯ ಮತ್ತು ಅದೃಷ್ಟ. ಹಿಂದೆ ನನ್ನ ಹಿಂದೆ ಓಡಾಡಿದವರೆಲ್ಲಾ ಈಗ ಮಂತ್ರಿ ಆಗಿದ್ದಾರೆ. ಸುಮಾರು 20 ಮಂದಿ ಮಂತ್ರಿ ಆಗಿದ್ದಾರೆ, ಅವರ ಅಪ್ಪಂದಿರ ಜೊತೆಗೆ ನಾನು ಕೆಲಸ ಮಾಡಿದ್ದೇನೆ. ಈಗ ಅವರೇ ನಮ್ಮ ಮುಂದೆ ಧಿಮಾಕು ಮಾಡ್ಕೊಂಡು ಓಡುತ್ತಿದ್ದಾರೆ ಅಂತಾ ಟೀಕಿಸಿದರು.
ಬಸವರಾಜ ಬೊಮ್ಮಾಯಿಯವರ ತಂದೆ ಜೊತೆಗೆ ನಾನು ಶಾಸಕ ಮತ್ತು ಸಂಸದನಾಗಿದ್ದೆ. ಬಹಳ ಜನರಿಗೆ ಹೀಗೆ ಅದೃಷ್ಟ ಕೈಹಿಡಿಯುವುದಿಲ್ಲ. ನಾವು ಕಡಿಮೆ, ಅವರು ಹೆಚ್ಚು ಅನ್ನೋದು ಇದರರ್ಥವಲ್ಲ. ಯಾರು ಏನೇ ಆಗಲಿ ಅವರಿಗೆ ಸೇವಾಮನೋಭಾವನೆ ಇರಬೇಕು. ಅಧಿಕಾರ ಬರುತ್ತದೆ-ಹೋಗುತ್ತದೆ, ನಾವು ಜನರ ಸೇವೆ ಮಾಡಬೇಕು ಎಂದು ರಾಯರೆಡ್ಡಿ ಹೇಳಿದರು.
ಇದನ್ನೂ ಓದಿ: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತ, ಹವಾ ಕ್ರಿಯೇಟ್ ಮಾಡಿದ 68 ವರ್ಷದ ಮಹಿಳೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.