ಬೆಂಗಳೂರು: ಸಹಾಯಕ ಪ್ರಾಧ್ಯಾಪಕ ಹುದ್ದೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಆರೋಪಿ ಸೌಮ್ಯಾಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲು ಪೊಲೀಸರ ಸಿದ್ಧತೆ ನಡೆಸಿದ್ದಾರೆ. ಕೋರ್ಟ್‍ನಲ್ಲಿಂದು ಆರೋಪಿಯನ್ನು ಕಸ್ಟಡಿಗೆ ಪಡೆಯಲು ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಸದ್ಯ ಮೈಸೂರಿನಲ್ಲಿ ಆರೋಪಿ ಸೌಮ್ಯಾಳ ಸಂಪರ್ಕದಲ್ಲಿದ್ದವರ ವಿಚಾರಣೆ ನಡೆಯುತ್ತಿದೆ. ಸೌಮ್ಯಾ ಜೊತೆ ಸ್ಟಡಿ ಗ್ರೂಪ್‍ನಲ್ಲಿದ್ದ ಮೂವರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಈ ಮೂವರು ಯುವತಿಯರು ವಾಟ್ಸ್​ಆ್ಯಪ್‍ನಲ್ಲಿ ಪರಸ್ಪರ ಪ್ರಶ್ನೆ ಪತ್ರಿಕೆ ಹಂಚಿಕೊಂಡಿದ್ದಾರೆಂದ ಆರೋಪವಿದೆ. ಮೈಸೂರು ಮೂಲದ ಐವರು ಯುವತಿಯರನ್ನು ಈ ಬಗ್ಗೆ ಮಲ್ಲೇಶ್ವರಂ ಪೊಲೀಸರು ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ. ಒಂದು ವೇಳೆ ಆರೋಪ ಸಾಬೀತಾದರೆ ಯುವತಿಯರನ್ನು ಬಂಧಿಸುವ ಸಾಧ‍್ಯತೆ ಇದೆ. 


ಇದನ್ನೂ ಓದಿ: Karnataka PSI Scam: ‘ಆರೋಪಿ ಎಷ್ಟೇ ಪ್ರಭಾವಿ, ಚಾಣಾಕ್ಷನಾಗಿದ್ದರೂ ಹೆಡೆಮುರಿಕಟ್ಟುತ್ತೇವೆ’


ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇರ ನೇಮಕಾತಿಗೆ ನಡೆದ ಭೂಗೋಳ ವಿಜ್ಞಾನ ಪರೀಕ್ಷೆಯ ಸುಮಾರು 18 ಪ್ರಶ್ನೆಗಳು ಸೌಮ್ಯಾ ಆರ್. ಅವರ ಮೊಬೈಲ್ ಸಂಖ್ಯೆಯಿಂದ ವಿವಿಧ ಮೊಬೈಲ್‍ಗಳಿಗೆ ವಾಟ್ಸ್​ಆ್ಯಪ್‍ ಮೂಲಕ ರವಾನೆ ಆಗಿದೆಯೇ? ಎಂದು ತನಿಖೆ ನಡೆಸುವಂತೆ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ದೂರು ನೀಡಿದ್ದರು.


ಮಾರ್ಚ್ 14ರಂದು ಭೂಗೋಳ ವಿಜ್ಞಾನ ವಿಷಯದ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಅಂದು ಬೆಳಗ್ಗೆ 8.30ಕ್ಕೆ ವಾಟ್ಸ್​ಆ್ಯಪ್‍ ಮೂಲಕ ಹಂಚಿಕೆಯಾಗಿದೆ ಎಂದು ಅಭ್ಯರ್ಥಿಗಳು ದೂರು ನೀಡಿದ್ದರು. ಈ ದೂರಿನ ಸತ್ಯಾಸತ್ಯತೆ ತಿಳಿಯಲು ತನಿಖೆ ನಡೆಸುವಂತೆ ದೂರು ನೀಡಲಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿ ರಮ್ಯಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ನೊಟೀಸ್ ಜಾರಿ: ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ತೀವ್ರ ತರಾಟೆ


545 ಪಿಎಸ್‍ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರ ಬೆಳಕಿಗೆ ಬಂದಿರುವ ಬೆನ್ನಲ್ಲಿಯೇ ಇದೀಗ ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯ ಪಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಕೂಡ ಸಖತ್ ಸೌಂಡ್ ಮಾಡುತ್ತಿದೆ. ಮೈಸೂರು ವಿವಿಯಲ್ಲಿ ಎಂಎಸ್ಸಿ ಪದವಿ ಪಡೆದಿರುವ ಆರೋಪಿ ಸೌಮ್ಯಾ ಪಿಎಚ್‍ಡಿ ಪದವಿಧರೆ. ಈಕೆ ಮೈಸೂರು ವಿವಿಯಲ್ಲಿ ಭೂಗೋಳ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.