Siddaramaiah : 'ಪಿಎಸ್ಐ ನೇಮಕಾತಿ ಅಕ್ರಮ : ಇದು ಜಾಮೀನು ರಹಿತ ಅಫೆನ್ಸ್'

ಈ ಘಟನೆ ಜಾಮೀನು ರಹಿತ ಅಫೆನ್ಸ್. ಕೆಲವರಿಗೆ ಬಹಳ ಅನ್ಯಾಯವಾಗಿದೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

Written by - Zee Kannada News Desk | Last Updated : Apr 22, 2022, 03:27 PM IST
  • ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ರೂ ಕೂಡಲೇ ಕ್ರಮ‌ ಕೈಗೊಳ್ಳಬೇಕು
  • ಈ ಘಟನೆ ಜಾಮೀನು ರಹಿತ ಅಫೆನ್ಸ್. ಕೆಲವರಿಗೆ ಬಹಳ ಅನ್ಯಾಯವಾಗಿದೆ
  • ಗೃಹ ಸಚಿವ ಅರಗ ಗ್ಞಾನೇಂದ್ರ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
Siddaramaiah : 'ಪಿಎಸ್ಐ ನೇಮಕಾತಿ ಅಕ್ರಮ : ಇದು ಜಾಮೀನು ರಹಿತ ಅಫೆನ್ಸ್' title=

ಹುಬ್ಬಳ್ಳಿ : ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ರೂ ಕೂಡಲೇ ಕ್ರಮ‌ ಕೈಗೊಳ್ಳಬೇಕು. ಕಾನೂನಿನ ರಿತ್ಯ ಬಂಧನ ಮಾಡಬೇಕು. ಈ ಘಟನೆ ಜಾಮೀನು ರಹಿತ ಅಫೆನ್ಸ್. ಕೆಲವರಿಗೆ ಬಹಳ ಅನ್ಯಾಯವಾಗಿದೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ನಗರದಲ್ಲಿ ಈ ಕುರಿತು ಮಾತನಾಡಿದ ಸಿದ್ದರಾಮಯ್ಯ,  ಹುಬ್ಬಳ್ಳಿ ಗಲಭೆಯನ್ನ ಈಗಾಗಲೇ ಖಂಡಿಸಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ನಿರಪರಾಧಿಗಳ ಮೇಲೆ ಕ್ರಮ ಕೈಗೊಳ್ಳಬೇಡಿ ಎಂದಿದ್ದೇನೆ. ಯಾರೋ ಒಬ್ಬ ಮೌಲ್ವಿ ತಪ್ಪು ಮಾಡಿದ್ದಾರೆ ಅಂತ ಎಲ್ಲರ ವಿಚಾರಣೆ ಸಲ್ಲದು. ಇದರಿಂದ ಮತ್ತಷ್ಟು ಕೆಸರೆರೆಚುವ ಕೆಲಸ ಆಗುತ್ತೆ. ಶಾಂತಿ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು. 

ಇದನ್ನೂ ಓದಿ : 'ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬಿಜೆಪಿಯಿಂದ ಬೆಂಕಿ, ಕಾಂಗ್ರೆಸ್‌ನಿಂದ ಪೆಟ್ರೋಲ್‌'

ಗೃಹ ಸಚಿವ ಅರಗ ಗ್ಞಾನೇಂದ್ರ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ : 

ಅರಗ, ಬೇಜವಾಬ್ದಾರಿಯುತ ಹೋಂ ಮಿನಿಸ್ಟರ್. ಬೆಂಗಳೂರಿನಲ್ಲಿ ಹೀಗೆ ಮಾಡಿದ್ರು. ಕೈಲಿ ಆಗಲ್ಲ ಅಂದ್ರೆ ರಾಜೀನಾಮೆ ನೀಡಿ ಮನೆಗೆ ಹೋಗಲಿ. ತಪ್ಪಿತಸ್ಥರ ವಿರುದ್ದ ಕ್ರಮ‌ ಕೈಗೊಳ್ಳಲಿಕ್ಕೆ ಗೃಹ ಇಲಾಖೆ ಇರೋದು. ಗೃಹ ಸಚಿವರಾಗೋಕೆ ಅರಗ ಫಿಟ್ ಇಲ್ಲ. ಎಸ್ ಡಿಪಿಐ, ಎಐಎಂಐಎಂ, ಆರ್‌ಎಸ್‌ಎಸ್, ಭಜರಂಗದಳ ಸಂಘಟನೆಗಳನ್ನ ಬ್ಯಾನ್ ಮಾಡಲಿ. ಬಿಜೆಪಿಯವರಿಗೆ ಧಮ್ ಇದ್ರೆ ಈ ಎಲ್ಲ ಸಂಘಟನೆಗಳನ್ನ ಬ್ಯಾನ್ ಮಾಡಲಿ. ಕೂಸನ್ನೂ ಚಿವಟಿ ತೊಟ್ಟೊಲು ತೋಗುವ ಕೆಲಸ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : Hubballi violence : ಹುಬ್ಬಳ್ಳಿ ಗಲಭೆ, ತಪ್ಪೊಪ್ಪಿಕೊಂಡು, ಸ್ಪೋಟಕ ಸತ್ಯ ಬಾಯಿಬಿಟ್ಟ ವಸೀಂ ಪಠಾಣ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News