ಬೆಂಗಳೂರು : ಬೃಹತ್ ಬೆಂಗಳೂರು ಮಗನಗರ ಪಾಲಿಕೆ (ಬಿಬಿಎಂಪಿ) ಯ ಮಾಹಿತಿಯ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿವೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಕೋವಿಡ್ -19 ಪ್ರಕರಣಗಳು(Covid-19 Cases) ಬೆಂಗಳೂರಿನಲ್ಲಿ ದೈನಂದಿನ ಏರಿಕೆ ದೆಹಲಿ, ಮುಂಬೈ ಮತ್ತು ಚೆನ್ನೈಗಿಂತ ಹೆಚ್ಚಾಗಿದೆ.


ಇದನ್ನೂ ಓದಿ : ಎಲ್ಲರಿಗೂ ಅವರಿಷ್ಟದ ಖಾತೆ ನೀಡಲು ಸಾಧ್ಯವಿಲ್ಲ: ಬಸವರಾಜ್ ಬೊಮ್ಮಾಯಿ


ನಿನ್ನೆ, ನಗರದಲ್ಲಿ 357 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಮತ್ತೊಂದೆಡೆ, ದೆಹಲಿ(Delhi) 72 ಪ್ರಕರಣಗಳು, ಮುಂಬೈ (331) ಮತ್ತು ಚೆನ್ನೈ (194) ಕ್ರಮವಾಗಿ ಆಗಸ್ಟ್ 7 ರಂದು ದಾಖಲಾಗಿದೆ.


ಪ್ರಸ್ತುತ, ಬೆಂಗಳೂರಿನಲ್ಲಿ ಒಟ್ಟು 162 ಮೈಕ್ರೋ ಕಂಟೈನ್‌ಮೆಂಟ್(Micro-Containment Zones) ವಲಯಗಳಿವೆ, ಇದರಲ್ಲಿ 100 ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಮತ್ತು ವೈಯಕ್ತಿಕ ಮನೆಗಳನ್ನು ಬಂದ್ ಮಾಡಲಾಗಿದೆ.


ಬೆಂಗಳೂರಿನ(Bengaluru) ಮಹದೇವಪುರದಲ್ಲಿ ಅತಿಹೆಚ್ಚು ಮೈಕ್ರೋ-ಕಂಟೈನ್‌ಮೆಂಟ್ ವಲಯಗಲಿ ಇವೆ, ನಂತರ ಪೂರ್ವ ವಲಯದಲ್ಲಿ ಇವೆ. 


ಇದನ್ನೂ ಓದಿ : Karnataka Portfolio Allocation : ಸಿಎಂ ಬೊಮ್ಮಾಯಿ ಸಂಪುಟದ ಖಾತೆ ಹಂಚಿಕೆ : ಯಾರಿಗೆ ಯಾವ ಖಾತೆ?


ನಗರಾಡಳಿತವು ಕೇರಳಕ್ಕೆ ಸಮೀಪದಲ್ಲಿರುವ ಜಿಲ್ಲೆಗಳಲ್ಲಿ ಹೈ ಅಲರ್ಟ್(High Alert) ಘೋಷಿಸಲಾಗಿದೆ. ಬೆಂಗಳೂರಿನ ಆರ್-ವ್ಯಾಲ್ಯೂ ಈಗಾಗಲೇ 1 ಕ್ಕಿಂತ ಹೆಚ್ಚಾಗಿದೆ ಅಂದರೆ ನಗರದಲ್ಲಿ ಪ್ರತಿ 100 ಸೋಂಕಿತ ಜನರು 100 ಕ್ಕೂ ಹೆಚ್ಚು ಜನರಿಗೆ ವೈರಸ್ ಹರಡುತ್ತಿದ್ದಾರೆ.


ಇದರ ಪರಿಣಾಮವಾಗಿ, ವೈರಸ್(Coronavirus) ಮತ್ತಷ್ಟು ಹೆಚ್ಚಾಗುವುದನ್ನು ತಡೆಯಲು ಬೆಂಗಳೂರಿನ ನಾಗರಿಕ ಅಧಿಕಾರಿಗಳು ನಗರದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.


ಬೆಂಗಳೂರು ಪೊಲೀಸರು ನಗರದಲ್ಲಿ ಸೆಕ್ಷನ್ 144(Section 144) ಅನ್ನು ವಿಧಿಸಿದ್ದು, ಇದು ನಾಲ್ಕು ಅಥವಾ ಹೆಚ್ಚಿನ ಜನರ ಒಂದು ಕಡೆ ಸೇರಲು ನಿರ್ಬಂಧಿಸಲಾಗಿದೆ, ಇದು ಆಗಸ್ಟ್ 16 ರವರೆಗೆ ಜಾರಿಯಲ್ಲಿರುತ್ತದೆ.


ಇದನ್ನೂ ಓದಿ : BIG NEWS: ನೂತನ ಸಚಿವರಿಗೆ ಖಾತೆ ಹಂಚಿಕೆ, ಯಾರ್ಯಾರಿಗೆ ಯಾವ ಖಾತೆ ಸಿಕ್ಕಿದೆ ಗೊತ್ತಾ..?


ಇದಲ್ಲದೇ, ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ(Night Curfew) ಜಾರಿಗೊಳಿಸಲಾಗಿದೆ. ರಾಜ್ಯ ಸರ್ಕಾರವು ಕೇರಳ ಮತ್ತು ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ವಿಧಿಸಲು ನಿರ್ಧರಿಸಿದ್ದು, ರಾಜ್ಯಾದ್ಯಂತ ಈಗಿರುವ ನೈಟ್ ಕರ್ಫ್ಯೂ ರಾತ್ರಿ 10 ರಿಂದ ರಾತ್ರಿ 9 ರಿಂದ ಆರಂಭವಾಗಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ