ಬೆಂಗಳೂರು: ಐಟಿ-ಬಿಟಿ ಸಿಟಿ ಎಂತಲೇ ಖ್ಯಾತಿ ಪಡೆದಿರುವ ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. 


COMMERCIAL BREAK
SCROLL TO CONTINUE READING

ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಓಡಾಡಿಕೊಂಡಿದ್ದ ಚಿರತೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಮೊದಲನೇ ಹಂತದಲ್ಲಿ ರಸ್ತೆ ದಾಟಿ ಓಡಾಡುತ್ತಿದ್ದ ಚಿರತೆ ಸ್ಥಳೀಯರ ಆತಂಕವನ್ನು ಹೆಚ್ಚಿಸಿತ್ತು. 


ಸಾವಿರಾರು ಐಟಿ ಕಂಪನಿಗಳಿರುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಲಕ್ಷಾಂತರ ಮಂದಿ ಐಟಿ ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಇಂತಹ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಓಡಾಟ ಎಲ್ಲರನ್ನೂ ಆತಂಕಕ್ಕೆ ಈಡುಮಾಡಿತ್ತು. 


ಇದನ್ನೂ ಓದಿ- ಗಾಂಭೀರ್ಯವಾಗಿ ನಡು ರಸ್ತೆಯಲ್ಲಿ ಕಾಡಾನೆ ವಾಕ್, ಹಿಂದಿರುಗುವಾಗ ಆನೆ ನಡೆ ಕಂಡು ಹೌಹಾರಿದ ಜನ: ವಿಡಿಯೋ ವೈರಲ್​


ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಕ್ರಮ ಕೈಗೊಂಡಿದ್ದ ಅರಣ್ಯ ಇಲಾಖೆ ಕ್ಯಾಮರಾಗಳನ್ನ ಅಳವಡಿಸಿ ಚಿರತೆ ಓಡಾಟದ ಬಗ್ಗೆ ಟ್ರ್ಯಾಪ್ ಮಾಡಲಾಗಿತ್ತು. ಹಲವು ಕಡೆಗಳಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದ ಚಿರತೆಯ ಓಡಾಟದ ಮೇಲೆ ನಿಗಾವಹಿಸಿದ್ದ ಅರಣ್ಯ ಇಲಾಖೆ ಮೂರು ಬೋನ್ ಗಳನ್ನ ಇಟ್ಟು ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿತ್ತು. 


ಇದನ್ನೂ ಓದಿ- Viral Video: ಒಂಟಿಯಾಗಿದ್ದ ಜಿರಾಫೆ ಮೇಲೆ ಸಿಂಹಿಣಿಗಳಿಂದ ದಾಳಿ,  ಅದು ಬಚಾವ್ ಆಗಿದ್ದೇಗೆ? 


ಕ್ಯಾಮರಾದಲ್ಲಿ ಸೆರೆಯಾಗಿರುವ ಸಿಸಿಟಿವಿ ದೃಶ್ಯಗಳ ಪ್ರಕಾರ, ಎಲೆಕ್ಟ್ರಾನಿಕ್ ಸಿಟಿಯ ಎಲಿಪ್ಯಾಡ್ ಜಾಗದಲ್ಲಿ ಹೆಚ್ಚಾಗಿ ಚಿರತೆ ಓಡಾಡುತ್ತಿತ್ತು. ಅಲ್ಲಿ ನಿರ್ಜನ ಪ್ರದೇಶ ಹೆಚ್ಚಾಗಿರುವುದರಿಂದ ಅಲ್ಲಿಯೇ ಚಿರತೆ ಬೀಡು ಬಿಟ್ಟಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಅರಣ್ಯ ಇಲಾಖೆ ಅಲ್ಲೂ ಕೂಡ ಬೋನ್ ಇಟ್ಟಿತ್ತು. ಇದೀಗ, ಕಳೆದ ರಾತ್ರಿ ಎಲಿಪ್ಯಾಡ್ ಜಾಗದಲ್ಲಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇನ್ನೂ ಕೆಲ ಹೊತ್ತಿನಲ್ಲೇ ಚಿರತೆಯನ್ನು ಶಿಫ್ಟ್ ಮಾಡಲಿದ್ದು, ಚಿರತೆಯನ್ನು  ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆದೊಯ್ಯಲಿದ್ದಾರೆ ಎನ್ನಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.