Viral Video: ಒಂಟಿಯಾಗಿದ್ದ ಜಿರಾಫೆ ಮೇಲೆ ಸಿಂಹಿಣಿಗಳಿಂದ ದಾಳಿ, ಅದು ಬಚಾವ್ ಆಗಿದ್ದೇಗೆ?

Viral Video: ಸಿಂಹಿಣಿಗಳ ಹಿಂಡು ಒಂಟಿಯಾಗಿದ್ದ ಜಿರಾಫೆಯನ್ನು ಸುತ್ತಮುತ್ತಳಿಂದಲೂ ಬಂದು ಅಟ್ಯಾಕ್ ಮಾಡಿದಾಗ, ಚಾಣಾಕ್ಷ ಜಿರಾಫೆ ಏನು ಮಾಡುತ್ತೆ... ಈ ಅದ್ಭುತ ವೈರಲ್ ವಿಡಿಯೋವನ್ನು ನೋಡಲೇಬೇಕು 

Written by - Yashaswini V | Last Updated : Sep 16, 2024, 08:44 PM IST
  • ಕಾಡು ಪ್ರಾಣಿಗಲಲ್ಲೆಲ್ಲಾ ಸಿಂಹ ಅತ್ಯಂತ ಶಕ್ತಿಶಾಲಿ ಪ್ರಾಣಿ
  • ಹಾಗಾಗಿಯೇ, ಸಿಂಹವನ್ನು ಕಾಡಿನ ರಾಜ ಎನ್ನಲಾಗುತ್ತದೆ.
  • ಬಲಶಾಲಿಯಾದ ಸಿಂಹಗಳು ಒಟ್ಟಾಗಿ ಬೇಟೆಯಾಡಿದಾಗ ಎದುರಿರುವ ಪ್ರಾಣಿ ಉಳಿಯುವುದುಂಟೇ... ನಿಮ್ಮ ಊಹೆ ತಪ್ಪಾಗಿರಬಹುದು!
Viral Video: ಒಂಟಿಯಾಗಿದ್ದ ಜಿರಾಫೆ ಮೇಲೆ ಸಿಂಹಿಣಿಗಳಿಂದ ದಾಳಿ,  ಅದು ಬಚಾವ್ ಆಗಿದ್ದೇಗೆ?  title=

Animal Viral Video: ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕೆಲವು ವಿಡಿಯೋಗಳು ಎಲ್ಲರ ಗಮನ ಸೆಳೆಯುತ್ತವೆ. ಅದರಲ್ಲೂ ಹುಲಿ, ಸಿಂಹ, ಚಿರತೆಗಳಂತಹ ಕಾಡುಪ್ರಾಣಿಗಳ ವಿಡಿಯೋ ಎಂದರೆ ಈ ಅಪರೂಪದ ವಿಡಿಯೋಗಳನ್ನು ನೋಡುವುದೇ ಒಂದು ಮಜಾ. ಕಾಡಿನ ಪ್ರಾಣಿಗಳಲ್ಲಿ ಸಿಂಹ ಅತಿ ಹೆಚ್ಚು ಪ್ರಾಬಲ್ಯ ಹೊಂದಿರುವ ಪ್ರಾಣಿ. ಹಾಗಾಗಿಯೇ ಅದನ್ನು ಕಾಡಿನ ರಾಜ ಎಂದು ಹೇಳಲಾಗುತ್ತದೆ. ಇದೀಗ ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ಅಂತಹುದೇ ಒಂದು ವಿಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ಸಿಂಹಿಣಿಗಳ ಹಿಂಡು ಹಾಗೂ ಜಿರಾಫೆ ನಡುವಿನ ಕಾದಾಟಕ್ಕೆ ಸಂಬಂಧಿಸಿದೆ. 

ಮೊದಲೇ ತಿಳಿಸಿದಂತೆ, ಸಿಂಹ ಅತ್ಯಂತ ಶಕ್ತಿಶಾಲಿಯಾದ ಪ್ರಾಣಿ. ಅದರಲ್ಲೂ ಹೆಣ್ಣು ಸಿಂಹಗಳು ಅರ್ಥಾತ್ ಸಿಂಹಿಣಿಗಳು ಒಟ್ಟಿಗೆ ಸೇರಿದರೆ ಎದುರಿಗಿರುವ ಪ್ರಾಣಿ ಬದುಕುವುದುಂಟೇ... ಅಂತ ನೀವೇನಾದರೂ ಯೋಚಿಸುತ್ತಿದ್ದರೆ ಖಂಡಿತ ನಿಮ್ಮ ನಂಬಿಕೆ ಹುಸಿಯಾಗಬಹುದು. ಎಷ್ಟೇ ಪ್ರಬಲವಾದ ಪ್ರಾಣಿಯಾದರೂ ಸಮಯ ಸರಿಯಿಲ್ಲದಿದ್ದಾಗ ಸಣ್ಣ ಇರುವೆಯಿಂದಲೂ ಸೋಲಬೇಕಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತಿದೆ ಈ ವೈರಲ್ ವಿಡಿಯೋ (Viral Video). 

ಇದನ್ನೂ ಓದಿ- ಕುಡಿದ ಮತ್ತಲ್ಲಿ ಸಿಂಹದ ಬೋನಿಗೆ ಜಿಗಿದ ಭೂಪ! ಮುಂದೇನಾಯ್ತು? ಈ ವಿಡಿಯೋ ನೋಡಿ.... 

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಸಿಂಹಿಣಿಗಳ ಹಿಂಡು ಉಪಾಯ ಹೂಡಿ ಒಂಟಿಯಾಗಿದ್ದ ಜಿರಾಫೆ ಮೇಲೆ ಸುತ್ತಲಿಂದಲೂ ಅಟ್ಯಾಕ್ (Lone Giraffe attacked by Lionesses) ಮಾಡುತ್ತವೆ. ಕೆಲ ಸಿಂಹಿಣಿಗಳು ಬೆನ್ನೇರಿದರೆ, ಕೆಲವು ಹಿಂಬದಿಯಿಂದ ದಾಳಿ ಮಾಡುತ್ತವೆ. ಆರಂಭದಲ್ಲಿ ಈ ಜಿರಾಫೆ ಕಥೆ ಮುಗಿಯಿತು ಎಂದೇ ತೋರುತ್ತದೆ. ಆದರೆ, ಸಿಂಹಿಣಿಗಳ ಬೇಟೆಗೆ ಸುಲಭವಾಗಿ ಬಲಿಯಾಗದ ಜಿರಾಫೆ ಏಕಾಂಗಿಯಾಗಿ ಅವುಗಳನ್ನು ಹಿಮ್ಮೆಟ್ಟಿಸುತ್ತದೆ. ಈ ಮೂಲಕ ಮರಿ ಜಿರಾಫೆಯನ್ನೂ ರಕ್ಷಿಸುತ್ತದೆ. ವಿಶೇಷವೆಂದರೆ, ಕೇವಲ ಹಿಂದಿನ ಕಾಲಿನಿಂದಲೇ ಜಿರಾಫೆ ಸಿಂಹಿಣಿಗಳ ಹೆಡೆಮುರಿ ಕಟ್ಟುತ್ತದೆ. ಜಿರಾಫೆಯ (Giraffe) ಒಂದೊಂದು ಒದೆಗೂ ಸಿಂಹಿಣಿಗಳು ಬಹಳ ದೂರ ಹೋಗಿ ಬೀಳುತ್ತವೆ. ಕೆಲವೇ ಸೆಕೆಂಡುಗಳ ಈ ವಿಡಿಯೋದಲ್ಲಿ ಮೊದಲಿನ ದೃಶ್ಯಕ್ಕೂ ನಂತರದ ದೃಶ್ಯಕ್ಕೂ ಇಡೀ ಚಿತ್ರಣವೇ ಬದಲಾಗುತ್ತದೆ.  

ಈ ಅದ್ಭುತ ವಿಡಿಯೋವನ್ನು ಇಲ್ಲಿ ವೀಕ್ಷಿಸಿ... 

ಇದನ್ನೂ ಓದಿ- ಬೇಟೆಯಾಡಲು ಬಂದ ಹುಲಿಗೆ ಒದೆ ಕೊಟ್ಟು ಕಳುಹಿಸಿದ ಕಾಡೆಮ್ಮೆ: ವಾಚ್ ವಿಡಿಯೋ 

ಎದುರಾಳಿ ಬಲಶಾಲಿ ಎಂದು ಶರಣಾಗದೆ ಕೊನೆಯವರೆಗೂ ಹೋರಾಡಬೇಕು ಎಂಬ ನೀತಿ ಸಾರುವ ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ಈ ವಿಡಿಯೋವನ್ನು  @gharkekalesh ಹೆಸರಿನ X ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಕೇವಲ 11 ಸೆಕೆಂಡ್‌ಗಳ ಈ ವಿಡಿಯೋವನ್ನು ಇದುವರೆಗೂ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News