ಬೆಂಗಳೂರು: ಹೊಸ ವರ್ಷಕ್ಕೆ ಇನ್ನೆರಡು ದಿನ ಬಾಕಿ ಇದೆ‌. ಈ ಹಿನ್ನೆಲೆ ಬೆಂಗಳೂರು ಹೊರ ವಲಯ ಮತ್ತು ಗ್ರಾಮಾಂತರ ದಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
31 ರಾತ್ರಿ ಹೊಸ ವರ್ಷಾಚರಣೆ  ಹಿನ್ನೆಲೆ ನಂದಿ ಹಿಲ್ಸ್ ರಸ್ತೆ , ನೆಲಮಂಗಲ ಅನೆಕಲ್ ಹೊಸಕೋಟೆ ಸೇರಿ ಹಲವೆಡೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿಸೆಂಬರ್ 30 ರಿಂದ ಜನವರಿ 1 ರವರೆಗೂ ಶಿವಗಂಗೆ , ಸಿದ್ದರಬೆಟ್ಟ, ಅವತಿ ಬೆಟ್ಟ, ಮಾಕಳಿ ಬೆಟ್ಟದಲ್ಲಿ ಚಾರಣಕ್ಕೆ ನಿಷೇಧಿಸಲಾಗಿದೆ. ಮ್ಯೂಸಿಕ್ , ಡಿಜೆ ಕಾರ್ಯಕ್ರಮದ ಮೇಲೆ ನಿಗಾ ವಹಿಸಲಾಗಿದ್ದು, ರೆಸ್ಟೋರೆಂಟ್ ಮತ್ತು ಫಾರ್ಮ್ ಹೌಸ್ ನಲ್ಲಿ ಮ್ಯೂಸಿಕ್ ಪ್ರೋಗ್ರಾಂ ಇಡುವವರು ಪೊಲೀಸರಿಗೆ ಮಾಹಿತಿ‌ ನೀಡುವಂತೆ ಸೂಚಿಸಲಾಗಿದೆ ಎಂದರು.


ಇದನ್ನೂ ಓದಿ- ಹೊಸ ವರ್ಷಾಚರಣೆ ಸಂಭ್ರಮಾಚರಣೆ ಹಿನ್ನೆಲೆ ಕೋವಿಡ್‌ ಬಗ್ಗೆ ಆರೋಗ್ಯ ಇಲಾಖೆ ಅಲರ್ಟ್‌


ಸಂಭ್ರಮಾಚರಣೆಗೆ 31 ರಾತ್ರಿ 1 ಗಂಟೆವರಿಗೂ ಮಾತ್ರ ಅನುಮತಿಯಿದ್ದು, ಒಂದು ಗಂಟೆ ನಂತರ ಡಾಬಾ ಪಬ್ ಎಲ್ಲವನ್ನೂ ಬಂದ್ ಮಾಡಲು ಸೂಚಿಸಲಾಗಿದೆ. ಅನುಮತಿ ಇಲ್ಲದೆ ಪಾರ್ಟಿ ಅಯೋಜನೆ ಆಯೋಜನೆ‌ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. 


ಇದನ್ನೂ ಓದಿ- ಯತ್ನಾಳ್‌ 40 ಸಾವಿರ ಕೋಟಿ ಆರೋಪ ಬಿಜೆಪಿಗೆ ತಲೆಬಿಸಿ..!


ಅಷ್ಟೇ ಅಲ್ಲದೆ ಬೆಂಗಳೂರು ಸಿಟಿ ಸಂಪರ್ಕಿಸುವ ರಸ್ತೆಗಳಲ್ಲಿ ನಾಕ ಬಂದಿಯಿದ್ದು, ಗಾಂಜಾ, ಡ್ರಗ್ ನಗರ ಪ್ರವೇಶಿಸಿದಂತೆ ತಪಾಸಣೆ ನಡೆಸಲಾಗುವುದು ಎಂದು ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.