ಕನ್ನಡ ಉಳಿವಿನ ಹೋರಾಟಕ್ಕೆ ಜಯ : ಫೆ.28ರ ಒಳಗೆ ಫಲಕ, ಪ್ರಕಟಣೆ ಬೋರ್ಡ ಬದಲಾವಣೆಗೆ ಗಡುವು, ಸುಗ್ರೀವಾಜ್ಞೆ

ಸೆಕ್ಷನ್ 17(6) ರಂತೆ ಸರ್ಕಾರದ ಅಥವಾ ಸ್ಥಳೀಯ ಪದಾಧಿಕಾರಿಗಳ‌ ಅನುಮೋದನೆಯೊಂದಿಗೆ ವಾಣಿಜ್ಯ, ಕೈಗಾರಿಕೆ, ಅಂಗಡಿ ಮುಂಗಟ್ಟು, ಸಮಾಲೋಚನಾ ಕೇಂದ್ರಗಳು, ಹೊಟೇಲ್‌ಗಳು ಹೆಸರುಗಳನ್ನು ಪ್ರದರ್ಶಿಸುವ ಬೋರ್ಡ್‌ನ ಅರ್ಧ ಭಾಗ ಕನ್ನಡದಲ್ಲಿ ಇರಬೇಕು ಎಂದಿದೆ. ಈ ಕಾಯ್ದೆಯಲ್ಲಿ 50:50ರ ಅನುಪಾತದಲ್ಲಿ ಕನ್ನಡ, ಆಂಗ್ಲಾ ಭಾಷೆ ಬಳಕೆಯ ನಿಯಮ ಇದೆ.

Written by - RACHAPPA SUTTUR | Edited by - Krishna N K | Last Updated : Dec 28, 2023, 05:09 PM IST
  • ಫೆ.28ರೊಳಗೆ ಅಂಗಡಿ ಮುಂಗಟ್ಟುಗಳು ನಾಮಫಲಕಗಳಲ್ಲಿ ಕಡ್ಡಾಯವಾಗಿ 60% ಕನ್ನಡ ಬಳಕೆ.
  • ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ.
  • ಉನ್ನತ ಮಟ್ಟದ ಸಭೆ ನಡೆಸಿ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ.
ಕನ್ನಡ ಉಳಿವಿನ ಹೋರಾಟಕ್ಕೆ ಜಯ : ಫೆ.28ರ ಒಳಗೆ ಫಲಕ, ಪ್ರಕಟಣೆ ಬೋರ್ಡ ಬದಲಾವಣೆಗೆ ಗಡುವು, ಸುಗ್ರೀವಾಜ್ಞೆ title=

ಬೆಂಗಳೂರು : ಫೆ.28ರೊಳಗೆ ಅಂಗಡಿ ಮುಂಗಟ್ಟುಗಳು ನಾಮಫಲಕಗಳಲ್ಲಿ ಕಡ್ಡಾಯವಾಗಿ 60% ಕನ್ನಡ ಬಳಕೆ ಮಾಡವಂತೆ ಸೂಚನೆ ನೀಡಲಾಗಿದೆ. ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. 

ಗೃಹ ಕಚೇರಿ ಕೃಷ್ಣಾದಲ್ಲಿ ಅಂಗಡಿ ಮುಗ್ಗಟ್ಟುಗಳ ಮುಂಭಾಗ ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ದಿನ ಬಿಜೆಪಿ ಸರ್ಕಾರ 10.03.23 ರಂದು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2023ರಲ್ಲಿ ಕಾಯ್ದೆ ರೂಪಿಸಿತ್ತು. ಕಾಯ್ದೆಗೆ ರಾಜ್ಯಪಾಲರು ಕೂಡ ಅಂಕಿತ ಹಾಕಿದ್ದಾರೆ. 

ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಪಾಠವನ್ನು ಶಾಲಾ ಪಠ್ಯದಲ್ಲಿ ಸೇರಿಸಿದರೆ ಒಳ್ಳೆಯದು- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಆದರೆ ರೂಲ್ ಫ್ರೇಮ್ ಆಗಿರಲಿಲ್ಲ. ಅದರಂತೆ ಸೆಕ್ಷನ್ 17(6) ರಂತೆ ಸರ್ಕಾರದ ಅಥವಾ ಸ್ಥಳೀಯ ಪದಾಧಿಕಾರಿಗಳ‌ ಅನುಮೋದನೆಯೊಂದಿಗೆ ವಾಣಿಜ್ಯ, ಕೈಗಾರಿಕೆ, ಅಂಗಡಿ ಮುಂಗಟ್ಟು, ಸಮಾಲೋಚನಾ ಕೇಂದ್ರಗಳು, ಹೊಟೇಲ್‌ಗಳು ಹೆಸರುಗಳನ್ನು ಪ್ರದರ್ಶಿಸುವ ಬೋರ್ಡ್‌ನ ಅರ್ಧ ಭಾಗ ಕನ್ನಡದಲ್ಲಿ ಇರಬೇಕು ಎಂದಿದೆ. ಈ ಕಾಯ್ದೆಯಲ್ಲಿ 50:50ರ ಅನುಪಾತದಲ್ಲಿ ಕನ್ನಡ, ಆಂಗ್ಲಾ ಭಾಷೆ ಬಳಕೆಯ ನಿಯಮ ಇದೆ ಎಂದು ವಿವರಿಸಿದರು.

ಈ ಹಿಂದೆ ನಮ್ಮ ಸರ್ಕಾರ ಇದ್ದಾಗ 60:40 ಅನುಪಾತದಲ್ಲಿ ಕನ್ನಡ, ಆಂಗ್ಲ ಭಾಷೆ ಬಳಕೆ ಮಾಡುವ ಬಗ್ಗೆ ನಿಯಮ ಇತ್ತು. 24.03.2018ರಲ್ಲಿ ಈ ಸಂಬಂಧ ನಾವು ಸುತ್ತೋಲೆ ಹೊರಡಿಸಿ, ನಾಮಫಲಕದ 60% ರಷ್ಟು ಭಾಗದಲ್ಲಿ ಕನ್ನಡ ಬಳಸಲು ಹೇಳಲಾಗಿತ್ತು. ಆದರೆ ಹೊಸ ಕಾಯ್ದೆಯಲ್ಲಿ 50:50 ಕನ್ನಡ, ಆಂಗ್ಲಾ ಬಳಕೆ ಮಾಡುವ ನಿಯಮ ಇತ್ತು. ಈಗ 50:50 ಬದಲು 60:40 ಕನ್ನಡ, ಆಂಗ್ಲಾ ಭಾಷೆ ಬಳಕೆ ಮಾಡಲು ಕಾನೂನಿಗೆ ತಿದ್ದುಪಡಿ ತರಲು ಸೂಚನೆ ನೀಡಿದ್ದೇನೆ. ಆ ಹಿನ್ನೆಲೆ ಸುಗ್ರೀವಾಜ್ಞೆ ಹೊರಡಿಸಲು ಸೂಚನೆ ನೀಡಿದ್ದೇನೆ ಎಂದರು.

ಇದನ್ನೂ ಓದಿ:ಗ್ಯಾರಂಟಿ ಕವನ ವಾಚಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್..! 

ಫೆ.28ರೊಳಗೆ ಕಾನೂನು ಪಾಲಿಸಿ: ಫೆ.28, 2024ರೊಳಗೆ ಈ ತಿದ್ದುಪಡಿ ಕಾಯ್ದೆಯಂತೆ ಕಾನೂನು ಪಾಲಿಸುವಂತೆ ಸೂಚನೆ ನೀಡಿದ್ದೇನೆ ಎಂದು ಇದೇ ವೇಳೆ ತಿಳಿಸಿದರು. ಈ ಕಾಯ್ದೆಯ ನಿಯಮ 17(8) ರಲ್ಲಿ ರಾಜ್ಯದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಜಾಹೀರಾತು ಮತ್ತು ಸೂಚನೆ ಗಳನ್ನು ಪ್ರದರ್ಶಿಸುವ ಎಲ್ಲ ಫಲಕಗಳಲ್ಲಿ ವಿಷಯಗಳ ನಿಗದಿತ ಶೇಕಡಾವಾರು ಪ್ರಮಾಣವು ಕನ್ನಡ ಭಾಷೆಯಲ್ಲಿರಬೇಕು. ಜಾಹೀರಾತುಗಳ ವರ್ಗೀಕರಣ ಮತ್ತು ಕನ್ನಡದಲ್ಲಿ ಪ್ರದರ್ಶಿಸ ಬೇಕಾದ ಜಾಹೀರಾತು ವಿಷಯಗಳ ಶೇಕಡಾವಾರು ಪ್ರಮಾಣವು ರಾಜ್ಯ ಸರ್ಕಾರದಿಂದ ನಿಯಮಿಸ ಲಾದಂತೆ ಇರತಕ್ಕದ್ದು ಎಂದು ತಿಳಿಸಲಾಗಿದೆ.ಈ ಕಾಯ್ದೆ ಇಡೀ ರಾಜ್ಯಕ್ಕೆ ಅನ್ವಯಿಸುತ್ತದೆ ಎಂದರು.

ಈ ಕಾಯ್ದೆ ಬಗ್ಗೆ ಇನ್ನೂ ಅಧಿಸೂಚನೆ ಹೊರಡಿಸಿಲ್ಲ‌‌. ನಿಯಮವೂ ರೂಪಿಸಿಲ್ಲ. ಹೀಗಾಗಿ ತಿದ್ದುಪಡಿಯೊಂದಿಗೆ ನಿಯಮ ರೂಪಿಸುವಂತೆ ಸೂಚನೆ ನೀಡಲಾಗಿದೆ. ಕಾನೂನು ಜಾರಿ ವಿಳಂಬವಾಗಿರುವುದು ನಿಜ. ಇನ್ನು ವಿಳಂಬವಾಗದಂತೆ ಸೂಚನೆ ನೀಡಿದ್ದೇನೆ.ಅಂಗಡಿ ಮುಂಗಟ್ಟು ಗಳು ನಿಯಮ ಪಾಲಿಸಬೇಕು.ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾನೂನು ಕೈಗೆತ್ತಿಕೊಂಡರೆ ಕ್ರಮ: ಶಾಂತಿಯುತ ಪ್ರತಿಭಟನೆಗೆ ಸರ್ಕಾರದ ವಿರೋಧ ಇಲ್ಲ. ಅದಕ್ಕೆ ಸರ್ಕಾರ ಅಡ್ಡಿ ಪಡಿಸಲ್ಲ. ಆದರೆ ಕಾನೂನು ವಿರುದ್ಧವಾಗಿ ನಡೆದರೆ ಸರ್ಕಾರ ಅದನ್ನು ಸಹಿಸಲ್ಲ.2022ರಲ್ಲಿ ಹೈ ಕೋರ್ಟ್ ಆದೇಶದಂತೆ ಪ್ರತಿಭಟನೆ ಕೇವಲ ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಮಾಡುವಂತೆ ತೀರ್ಪು ನೀಡಿದೆ.‌ ರಾಜ್ಯದ ಹಿತದೃಷ್ಟಿಯಿಂದ ಪ್ರತಿಭಟನೆ ಮಾಡಿದರೆ ನಾವು ವಿರೋಧ ಮಾಡಲ್ಲ. ಆದರೆ ಕಾನೂನು ಕೈಗೆ ತೆಗೆದುಕೊಂಡರೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳುತ್ತೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:₹40,000 crore scam: ಯತ್ನಾಳ್ ಹೇಳಿದ ಆ ‘ರಾತ್ರಿ ರಹಸ್ಯ’ ಯಾವುದು ವಿಜಯೇಂದ್ರ?- ಕಾಂಗ್ರೆಸ್

ಹಾಗಾಗಿ ಯಾರೇ ಸಂಘಟನೆಗಳು ಕಾನೂನು ರೀತಿಯಲ್ಲಿ ನಡೆದುಕೊಳ್ಳಬೇಕು. ಕಾನೂನು ಕೈಗೆ ತೆಗೆದುಕೊಳ್ಳ ಬಾರದು ಎಂದು ಎಲ್ಲಾ ಹೋರಾಟಗಾರರಿಗೆ, ಸಂಘಟನೆಗಳಿಗೆ ನಾನು ಮನವಿ ಮಾಡುತ್ತೇನೆ.ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಆಡಳಿತ ಭಾಷೆ ಇದರಲ್ಲಿ ಯಾವುದೇ ರಾಜಿ ಇಲ್ಲ.ನಾವು ಕನ್ನಡ ಪರವಾಗಿದ್ದೇವೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯ ಇಲ್ಲ.ಆತಂಕ ಪಡದ ರೀತಿಯಲ್ಲಿ ನಾವು ಕಾನೂನು ವ್ಯವಸ್ಥೆ ಮಾಡುತ್ತೇವೆ ಎಂದರು. 

ನಿಯಮ‌ ಪಾಲಿಸದೇ ಇದ್ದರೆ ದಂಡ, ಪರವಾನಿಗೆ ರದ್ದು: ಯಾವುದೇ ಕೈಗಾರಿಕೆ, ಅಂಗಡಿ, ಸಂಸ್ಥೆ ಮತ್ತು ವಾಣಿಜ್ಯ ಸಂಸ್ಥೆಯ ಮಾಲೀಕ ಅಥವಾ ಅದರ ಉಸ್ತುವಾರಿ ವ್ಯಕ್ತಿಗಳು ಈ ಅಧಿನಿಯಮದ ಪ್ರಕರಣ 17ರ (6) ರಿಂದ (10) ರವರೆಗಿನ ಉಪಪ್ರಕರಣಗಳ ಉಪಬಂಧಗಳನ್ನು ಪಾಲಿಸಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ:ಕೃಷಿ ನವೋದ್ಯಮ ಯೋಜನೆಗೆ ಅರ್ಜಿ ಆಹ್ವಾನ

ಮೊದಲನೆಯ ಅಪರಾಧಕ್ಕಾಗಿ ರೂ.5,000 ವರೆಗೆ ದಂಡ ವಿಧಿಸಲಾಗುತ್ತದೆ. ಎರಡನೆಯ ಅಪರಾಧಕ್ಕಾಗಿ ರೂ.10,000 ವರೆಗೆ ದಂಡ ಹಾಕಲಾಗುತ್ತದೆ‌ ನಂತರದ ಪ್ರತಿಯೊಂದು ಅಪರಾಧಕ್ಕಾಗಿ ರೂ.20,000 ವರೆಗೆ ದಂಡ ವಿಧಿಸಲಾಗುತ್ತೆ. ಜೊತೆಗೆ ಪರವಾನಗಿಯನ್ನು ಸಹ ರದ್ದುಗೊಳಿಸಲಾಗುತ್ತದೆ.

ಯಾವುದೇ ಕ್ರಮ ಕೈಗೊಳ್ಳುವ ಮುಂಚೆ ಅಧಿನಿಯಮದ ಉಲ್ಲಂಘನೆಗಾಗಿ ಕಾರಣ ಕೇಳುವ ನೋಟೀಸನ್ನು ನೀಡಲಾಗುತ್ತೆ. ನೋಟೀಸಿನ ದಿನಾಂಕದಿಂದ ಹದಿನೈದು ದಿನಗಳೊಳಗೆ ಈ ಅಧಿನಿಯಮದ ಉಪಬಂಧಗಳ ಪಾಲನೆಗಾಗಿ ಅವಕಾಶವನ್ನು ಒದಗಿಸಲಾಗುತ್ತೆ. ಕಾರಣ ಕೇಳುವ ನೋಟೀಸಿನ ಅನುಸರಣೆ ಮಾಡಲು ವಿಫಲವಾದಲ್ಲಿ ಮೇಲ್ಕಂಡ ಅಪರಾಧಕ್ಕೆ, ಮತ್ತು ದಂಡನೆಗೆ ಗುರಿಯಾಗುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News